ವಿ. ಕೃ‍ಷ್ಣ ಅವರ ನಿಘಂಟು ಬಗ್ಗೆ ಅವರು ಅದನ್ನು ಕಟ್ಟಲು ಪಟ್ಟ ಶ್ರಮದ ಬಗ್ಗೆ ಈಗಾಗಲೇ ಬಹಳಷ್ಟು ಜನರಿಗೆ ಗೊತ್ತಿರಬಹುದು. ಅವರ ನಿಘಂಟುಗಳನ್ನು ಕರ್ನಾಟಕ ‍ಸಾಹಿತ್ಯ ಪರಿಷತ್ತಿನ ಮೂಲಕ ಕೊಂಡು ಬಳಸಿರಲೂ ಬಹುದು. ಅದನ್ನು ಡಿಜಿಟಲ್ ರೂಪದಲ್ಲಿ ಜೀರೋದಾದ ಸಿ.ಟಿ.ಓ ‍ಕೈ‍ಲಾಶ್ ನಾದ್ ಅವರು ೨೦೧೯ರಲ್ಲಿ ಸಿದ್ಧಪಡಿಸಿದ್ದರು. ಅದರ ಬಗ್ಗೆ ಇತ್ತೀಚೆಗೆ ಮತ್ತೆ ಚರ್ಚಿಸಿದಾಗ ಅ‍ದಕ್ಕೆ ಸಂಬಂಧಿಸಿದ ದೀರ್ಘ ಬ್ಲಾಗ್ ಸಿದ್ಧಪಡಿಸಿ ಹಾಕಿದ್ದಾರೆ. ಇದನ್ನು ಮತ್ತಷ್ಟು ಜನರಿಗೆ ತಲುಪಿಸಲು ಇದು ಬಹು ಸಹಕಾರಿ. ‍

ಸಮುದಾಯದಿಂದ, ಸ್ವತಂತ್ರ ವ್ಯಕ್ತಿಗಳಿಂದ ಅಭಿವೃದ್ಧಿಗೊಂಡ‍ ‍ಓ‍ಪನ್ ಡೇಟಾ ಮತ್ತು ಸ್ವತಂತ್ರ ‍ತಂತ್ರಾಂಶಗಳು ಕನ್ನಡದ ನಿತ್ಯೋತ್ಸ‍ವವನ್ನು ಸಾಧ್ಯ‍ವಾಗಿಸುತ್ತಿರುವುದು ಹೆಮ್ಮೆಯ ವಿಚಾರ.

ವಿ. ಕೃಷ್ಣ ಅವರಿಗೆ ಮತ್ತು ಕೈಲಾಶ್ ನಾದ್ ಅವರಿಗೆ ಮತ್ತೊಮ್ಮೆ ಅಭಿನಂದನೆಗಳುಬ್ಲಾಗ್ ಇಲ್ಲಿದೆ – https://zerodha.tech/blog/alar-the-making-of-an-open-source-dictionary/‍

ವಿ ಕೃಷ್ಣ ಅವರ ಕನ್ನಡ ನಿಘಂಟುವಿನ ಆನ್ಲೈನ್ ರೂಪ‍: https://alar.ink/

ಈ‍ ನಿಘಂಟುವನ್ನು ಪದ ಸಂಚಯದ ಮೂಲಕವೂ ಸಿಗುವಂತೆ ಮಾಡಲಾಗುವುದು. ‌ಇದರೊಂದಿಗೆ ಸಂಚಯದ ಎಲ್ಲಾ ಯೋಜನೆಗಳಲ್ಲಿ ಇದರ ಉಪಯೋಗವನ್ನು ಜನರು ಪಡೆ‍ದುಕೊಳ್ಳಬಹುದಾಗಿದೆ.