ಸಮೂಹ ಸಂಚಯದ ಕನ್ನಡೀಕರಣದ ಕೆಲಸಕ್ಕೆ ಮತ್ತೆ ಸಹಾಯ ಬೇಕಿದೆ. ಡಿಜಿಟಲ್ ಲೈಬ್ರರಿಗಳಲ್ಲಿನ ಪುಸ್ತಕಗಳ ಹೆಸರುಗಳನ್ನು ಕನ್ನಡೀಕರಿಸುವ ನಮ್ಮ ಕೆಲಸ ನಿಮಗೆ ಈಗಾಗಲೇ ತಿಳಿದಿದೆ. ಈ ಪುಸ್ತಕಗಳ ಲೇಖಕ ಮತ್ತು ಪ್ರಕಾಶಕರ ಹೆಸರುಗಳಲ್ಲಿ ಕಂಡುಬಂದ ತಪ್ಪುಗಳನ್ನು ಸರಿಪಡಿಸುವ ಕೆಲಸ ನೆಡೆದಿದ್ದು, ಕಾಪಿರೈಟ್ ಇಲ್ಲದ ಪುಸ್ತಕಗಳನ್ನು ನಮ್ಮ ತಂಡ ಇಂಟರ್ನೆಟ್ ಆರ್ಕೈವ್‍ಗೆ ಸೇರಿಸಿದೆ. ಇದರಿಂದಾಗಿ ಪುಸ್ತಕಗಳ ಹೆಸರಿನ ಪರಿಶೀಲನೆಯ ಕೆಲಸ ಈಗ ಮತ್ತೂ ಸುಲಭ. ಕೈಜೋಡಿಸಲು ಈ ಕೆಳಗಿನ GIF ಆನಿಮೇಷನ್ ನೋಡಿ. ಜೊತೆಗೆ ಈ ಕೊಂಡಿಯನ್ನು ಹಿಂಬಾಲಿಸಿ.
GIF ಕೃಪೆ- ಯೋಗೇಶ್[:]