ಎನ್. ಏ. ಎಂ ಇಸ್ಮಾಯಿಲ್ ಅವರು ಸಭೆಯನ್ನು ಪ್ರಾರಂಭಿಸಿ, ಸಮುದಾಯದ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಜನಸಾಮಾನ್ಯರೇ ಕಂಡುಕೊಂಡ ಉತ್ತರಗಳು ಹಾಗೂ ಅವುಗಳ ಕೊಡುಗೆಯನ್ನು ನೆನೆದು, ಪ್ರಶಾಂತ ಪಂಡಿತ್ ಅವರು ತಂತ್ರಜ್ಞರಾಗಿ ನಂತರ ಹೊರಬಂದು ಸಿನೆಮಾ ರಂಗದಲ್ಲಿದ್ದರೂ ತಮ್ಮ ತಂತ್ರಜ್ಞರ ಟೊಪ್ಪಿಗೆಯನ್ನು ಧರಿಸಿ ಕಿಟೆಲ್ ನೆನಪಿನ ಫಾಂಟ್ ತಂದಿರುವ ಹಿನ್ನಲೆಯನ್ನು ವಿವರಿಸಿದರು.

ನಂತರ ಪ್ರಶಾಂತ ಪಂಡಿತ್, ಕನ್ನಡ ಮುದ್ರಣ ಲೋಕದ ಇತಿಹಾಸದ ಪುಟಗಳನನ್ನು ತಿರುವುತ್ತಾ ಎಲ್ಲರಿಗೂ ತಿಳಿಯುವಂತೆ ಮುದ್ರಣ ಹಾಗೂ ಕಂಪ್ಯೂಟರಿನಲ್ಲಿ ಕನ್ನಡ ಕಾಣುವ ಬಗೆಯ ಹಿನ್ನೊಟ ನೀಡಿದರು.

ನಂತರ ಪ್ರಶಾಂತ ಪಂಡಿತ್, ಕನ್ನಡ ಮುದ್ರಣ ಲೋಕದ ಇತಿಹಾಸದ ಪುಟಗಳನನ್ನು ತಿರುವುತ್ತಾ ಎಲ್ಲರಿಗೂ ತಿಳಿಯುವಂತೆ ಮುದ್ರಣ ಹಾಗೂ ಕಂಪ್ಯೂಟರಿನಲ್ಲಿ ಕನ್ನಡ ಕಾಣುವ ಬಗೆಯ ಹಿನ್ನೊಟ ನೀಡಿದರು.

ಕಿಟಲ್ ಫಾಂಟ್ ಅನ್ನು ಚಿರಂಜೀವಿ ಸಿಂಗ್ ಹಾಗೂ ಕಿಟಲ್ ಪರಿವಾರದ ಸದಸ್ಯರು ಲೋಕಾರ್ಪಣೆ ಮಾಡಿದರು.

ಫಾಂಟ್ ಬಿಡುಗಡೆಗೊಳಿಸಿ ಮಾತನಾಡಿದ ಚಿರಂಜೀವಿ ಸಿಂಗ್ ಭಾರತೀಯ ಭಾಷೆಗಳ ಲಿಪಿ ಕ್ಯಾಲಿಗ್ರಫಿ ಶೈಲಿಯಲ್ಲಿದ್ದು ಕಿಟಲ್ ಫಾಂಟನ್ನು ಅದೇ ರೀತಿ ಕಾಣುವಂತೆ ಮಾಡಿದ್ದನ್ನು ನೋಡಿ ಸಂತೋಷವಾಯ್ತು ಎಂದು. ಸ್ವತ: ಕ್ಯಾಲಿಗ್ರಫಿ ಪ್ರಿಯರೂ ಆದ ಸಿಂಗ್ ಅವರು, ತಮ್ಮ ನೆನಪಿನಾಳದ ಮಾತುಗಳ್ಳು ಆಡುತ್ತಾ ಶ್ರೀರಾಜು ಹಾಗೂ ಇತರ ಫಾಂಟುಗಳನ್ನೂ ನೆನೆಯುತ್ತಾ, ಭಾರತೀಯ ಭಾಷೆಗಳಲ್ಲಿ ಇಂತಹ ಟೈಪೋಗ್ರಫಿ ಕೆಲಸಗಳನ್ನು ರಿವೈವ್ ಮಾಡಿದ್ದು ಕಡಿಮೆ, ಇಂತಹ ಕೆಲಸಗಳು ಇನ್ನೂ ಹೆಚ್ಚಾಗಬೇಕು ಎಂದರು.

ಕಿಟೆಲ್ ಮರಿಮೊಮ್ಮಗ Mr. Yves Meyer ಮಾತನಾಡಿ ದೇಶ ಸುತ್ತುವಾಗ ರಾಜ ಮಹಾರಾಜರ ಕೈಯಲ್ಲಿ ಕತ್ತಿ ರಾರಾಜಿಸುವುದನ್ನು ನೋಡುತ್ತೇವೆ. ಕರ್ನಾಟಕ ರಾಜ್ಯದ ಎಲ್ಲ ಪ್ರತಿಮೆಗಳಲ್ಲಿ. ನನ್ನ ಮುತ್ತಾತ ಕಿಟೆಲ್ ಅವರ ಎಲ್ಲ ಪ್ರತಿಮೆಗಳ ಕೈಯಲ್ಲಿ ಪುಸ್ತಕ ನೋಡಿದೆ. ಅವರು ಜ್ಞಾನದ ಮೂಲಕ ಎಲ್ಲರನ್ನು ಗೆಲ್ಲಲು ಪ್ರಯತ್ನಿಸಿದರು – ಬಹುಶಃ ಅವರು ಬಳಸಿದ ಒಂದೇ ಆಯುಧ – ಲೇಖನಿಯಾಗಿ ಬಳಸಿರಬಹುದಾದ ಆ ಒಂದು ರೆಕ್ಕೆಯ ಪುಕ್ಕವಾಗಿದ್ದಿರಬಹುದು ಎಂದು ಕಿಟೆಲ್ ಫಾಂಟ್ ಬಿಡುಗಡೆ ಸಂದರ್ಭದಲ್ಲಿ ಹೇಳಿದರು. ಅವರನ್ನು ನನ್ನ ಅಮ್ಮನೂ ನೇರವಾಗಿ ನೋಡಿಲ್ಲ, ಆದರೆ ನನ್ನ ತಾತನ ಕಥೆಗಳಲ್ಲಿ ಭಾರತ ಹಾಗೂ ಕರ್ನಾಟಕ ಎಂಬ ಅದ್ಭುತ ರಾಜ್ಯದ ಕತೆಗಳಲ್ಲಿ ತನ್ನ ತಾತನನ್ನೂ ಒಬ್ಬ ಪಾತ್ರಧಾರಿಯಾಗಿ ನೊಡಿದ್ದು, ಅದನ್ನು ನಾವೂ ಕೇಳತ್ತಾ ಬೆಳದದ್ದು ನಮ್ಮೆಲ್ಲರ ಪುಣ್ಯ ಎಂದರು.

ಫಾಂಟ್ ಅಭಿವೃದ್ಧಿಯ ಮುಂದಿನ ಭಾಗವಾಗಿ, ಕನ್ನಡದ ಡಿಜಿಟಲೀಕರಣ ಯೋಜನೆಗಳ ಸುತ್ತ ಕೆಲಸ ಮುಂದೆ ಸಾಗಲಿದ್ದು ೧೮೧೭ ರಿಂದ ೧೯೨೫ರ ವರೆಗಿನ ಕನ್ನಡದ ಮುದ್ರಿತ ಪುಸ್ತಕಗಳನ್ನು ಒಟ್ಟುಗೂಡಿಸಿ, ಅಲ್ಲಿನ ಅಕ್ಷರ ಶೈಲಿಯನ್ನು ಸಂಶೋಧನೆಗೆ ಒಡ್ಡಿ ಸಮುದಾಯ ಹಾಗೂ ಓಪನ್ ಸೊರ್ಸ್ ಯೋಜನೆಯನ್ನು ಸಂಚಯ – ಸಂಚಿ ಫೌಂಡೇಶನ್ ಆಶ್ರಯದಲ್ಲಿ ಪ್ರಾರಂಭಿಸಿದ್ದು, ಎಲ್ಲರೂ ಯೋಜನೆಗೆ ಶಕ್ಯಾನುಸಾರ ತಮ್ಮದೇ ರೀತಿ ಭಾಗಿಯಾಗಬಹುದು ಎಂದ ಓಂಶಿವಪ್ರಕಾಶ್ https://kittel.sanchaya.net ಇರುವನ್ನು ತಿಳಿಸಿದರು. ಕಿಟಲ್ ಅವರ ಪುಸ್ತಕಗಳು, ಅವರ ಕಾಲಮಾನದ ಆಗುಹೋಗುಗಳನ್ನೂ ಇಲ್ಲಿ ಕಾಣಬಹುದು. ಶ್ರೀನಿವಾಸ ಹಾವನೂರರು ಕಿಟ್ಟಲ್ ಅವರ ಬಗ್ಗೆ ಮಾಡಿದ ಸಂಶೋಧನೆ, ಹಾಗೂ ಅವರ ಬರವಣಿಗೆಗಳನ್ನೂ ಕಾರ್ಯಕ್ರಮದಲ್ಲಿ ನೆನೆಯಲಾಯಿತು. ಸಂಚಯ ಹಾವನೂರರ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿ ಕಿಟಲ್ ಪುಸ್ತಕಗಳನ್ನೂ ಡಿಜಿಟಲೀಕರಿಸಿದೆ.

ಪ್ರಶಾಂತ್ ಪಂಡಿತ್ ಅವರ ಕಿಟಲ್ ಕುರಿತಾದ ಸಿನಿಮಾದ ಸಣ್ಣ ಪಕ್ಷಿನೋಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Github Repo: https://github.com/sanchaya/karnata-f-kittel-font

Kittel Sanchaya: https://kittel.sanchaya.net