‍ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, “ಬೆಳಕು”, “ಜನಸೇವಕ” ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ ಫೌಂಡೇಶನ್ ‍®‍ ಹಾಗೂ ಸಂಚಯದ, ಪುಸ್ತಕಗಳ ಡಿಜಿಟಲೀಕರಣ ಯೋಜನೆಯ ಮೂಲಕ ಈ ಸಂಗ್ರಹವನ್ನು ಲಭ್ಯವಾಗಿಸಿದ್ದಾರೆ. ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೆಯೇ, ಎಲ್ಲ ಪುಸ್ತಕಗಳ ಮೂಲ ಪ್ರಕಾಶಕರಿಗೂ ವಂದನೆಗಳು. ಈ ಪುಸ್ತಕಗಳು ಮುಕ್ತವಾಗಿ, ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿರಲಿವೆ. ನಮ್ಮ ಯೋಜನೆಯ ಕೊಂಡಿಯನ್ನು ಸಮಸ್ತ ಕನ್ನಡಿಗರೊಂದಿಗೆ ಹಂಚಿಕೊಂಡು, ಮತ್ತಷ್ಟು ಕನ್ನಡದ ಡಿಜಿಟಲೀಕರಣದ ಕೆಲಸಗಳಿಗೆ ನಮಗೆ ಬೆಂಬಲ ಒದಗಿಸಿ.

URL:- https://kaikini.sanchaya.net/