ಚಿರಪರಿಚಿತ ಭೂವಿಜ್ಞಾನಿಗಳೂ, ವಿಜ್ಞಾನ ಲೇಖಕರು, ಸಂಶೋಧಕರೂ ಹಾಗೂ ಅನೇಕ ಕನ್ನಡ ಸಾಹಿತ್ಯ ಬಂಡಾರಗಳ ಸಂಪಾದಕರೂ ಆದ ಟಿ. ಆರ್. ಅನಂತರಾಮು ಅವರ ಬಹಳಷ್ಟು ಪುಸ್ತಕಗಳನ್ನು ‘ಸಂಚಯ’ ತನ್ನ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ – ಡಿಜಿಟಲೀಕರಿಸಲು ಪ್ರಾರಂಭಿಸಿದೆ. ಈ ಪುಸ್ತಕಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ, ಅದರಲ್ಲೂ ಮಕ್ಕಳಿಗೆ ತಲುಪಿಸುವ ಉತ್ಸಾಹ ನಮಗಿಂತ ಟಿ. ಆರ್. ಎ ಅವರಿಗೇ ಹೆಚ್ಚಿದೆ. ಮುಂದಿನ ಪೀಳಿಗೆ ಇದರ ಪೂರ್ಣ ಉಪಯೋಗ ಪಡೆದುಕೊಳ್ಳುತ್ತದೆ ಎಂದು ಆಶಿಸುತ್ತೇವೆ. ಈ ಎಲ್ಲ ಪುಸ್ತಕಗಳು – ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಅಡಿ (CC-by-SA-NC) – ವಾಣಿಜ್ಯ ಉದ್ದೇಶಗಳಿಗೆ ಹೊರತುಪಡಿಸಿದಂತೆ ಮುಕ್ತವಾಗಿ ಲಭ್ಯವಿರಲಿವೆ. #kannada #digitization #creativecommons #internetarchive