ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು. ಕಳೆದ ಒಂದೂವರೆ ವರ್ಷಗಳಿಂದ ಸಂಚಯ ಹಾಗೂ ಸಂಚಿ ಫೌಂಡೇಶನ್ ® ಸರ್ವೆಂಟ್ಸ್ ಆಫ್ ನಾಲೆಡ್ಜ್ (ಜ್ಞಾನದ ಸೇವಕರು) ಯೋಜನೆಯ ಅಡಿ ನಿರ್ವಹಿಸುತ್ತಿರುವ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆಯ ಮೂಲಕ ಸಮಗ್ರ ವಚನ ಸಂಪುಟಗಳ ೧೫ ಸಂಪುಟಗಳನ್ನು ಡಿಜಿಟಲೀಕರಿಸಿವೆ. ಇವು ಕೇವಲ ಸಂಪುಟಗಳ ಸ್ಕ್ಯಾನ್ ಆಗಿರದೆ, ಈ ಪುಸ್ತಕಗಳನ್ನು ಗೂಗಲ್ ವಿಷನ್ ಏಪಿಐ ಮೂಲಕ ಓಸಿಆರ್ ಕೂಡ ಮಾಡಲಾಗಿದೆ. ಓಸಿಆರ್‌ಗೆ ಒಳಪಟ್ಟಿರುವ ಈ ಸಮಗ್ರ ವಚನ ಸಂಪುಟ ಪುಸ್ತಕಗಳ ಒಳಗೆ ನೇರವಾಗಿ ಯುನಿಕೋಡ್ ನಲ್ಲಿ ಸರ್ಚ್ ಮಾಡಿ ವಚನಗಳನ್ನು ಹುಡುಕಿ ಪಡೆಯಬಹುದಾಗಿದೆ. ಮುಖ್ಯವಾಗಿ ವಚನ ಪರಿಭಾಷಾಕೋಶ – ೧೫ ದ ಸಂಪುಟ ವಚನಗಳ ಸಂಶೋಧಕರಿಗೆ ಬಹುಮುಖ್ಯವಾಗಿ ಸಹಕಾರಿ ಆಗಲಿದೆ. ಈ ಎಲ್ಲಾ ಸಂಪುಟಗಳು ಇಂಟರ್ನೆಟ್ ಆರ್ಕೈವ್ (https://archive.org) ಮೂಲಕ ಲಭ್ಯವಿದ್ದು, ಇವುಗಳ ಇಪಬ್, ಮೊಬಿ, ಪಿಡಿಎಫ್, ಫುಲ್‌ಟೆಕ್ಸ್ಟ್ ಮಾದರಿಗಳೂ ಲಭ್ಯವಿವೆ. ಭಾಷಾ ಸಂಶೋಧನೆಗೆ ಅವಶ್ಯವಿರುವ ಮೂಲ ಸಂಪನ್ಮೂಲವಾಗಿ ಇವುಗಳನ್ನು ವಿದ್ಯಾರ್ಥಿಗಳು, ಸಂಶೋಧಕರು, ಸಾರ್ವಜನಿಕರು ಬಳಸಿಕೊಳ್ಳಬಹುದಾಗಿದೆ. ಈ ಸಂಪುಟಗಳನ್ನು ಡಿಜಿಟಲೀಕರಣಗೊಳಿಸಲು ಲಭ್ಯವಾಗಿಸಿದ ಡಾ. ಶಶಿಕಲಾ, ಸ್ಥಳಾವಕಾಶ ಮತ್ತು ಸಹಕಾರಕ್ಕೆ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಬೆಂಗಳೂರು, ಓಸಿಆರ್ ಸಾಧ್ಯತೆಯನ್ನು ಅಳವಡಿಸಿದ ಇಂಡಿಯಾ ಕಾನೂನ್‌ನ ಸುಶಾಂತ್, ಎಲ್ಲಾ ೧೫ ಸಂಪುಟಗಳನ್ನು ಸ್ಕ್ಯಾನ್ ಮಾಡಿದ ಜೈ ಪ್ರವೀಣ್ ಇವರಿಗೆ ಆಭಾರಿಯಾಗಿರುತ್ತೇವೆ. ಸರ್ವೆಂಟ್ಸ್ ಆಫ್ ನಾಲೆಡ್ಜ್ (ಜ್ಞಾನದ ಸೇವಕರು) ಯೋಜನೆಯ ಪ್ರಾರಂಭಕ್ಕೆ ಕಾರಣರಾದ ಪಬ್ಲಿಕ್ ರಿಸೋರ್ಸ್ ಆರ್ಗ್ ನ ಕಾರ್ಲ್ ಮಲಮದ್ ಅವರಿಗೆ ವಿಶೇಷ ಧನ್ಯವಾದಗಳು. ಈ ಪುಸ್ತಕಗಳು ಕ್ರಿಯೇಟೀವ್ ಕಾಮನ್ಸ್ ಅಡಿಯಲ್ಲಿ ಲಭ್ಯವಿವೆ.ಈ ಸಂಪುಟಗಳನ್ನು ಈ ಕೆಳಗಿನ ಕೊಂಡಿಗಳಿಂದ ಪಡೆಯಬಹುದು
೧. https://bit.ly/vachana-samputa-sanchaya
೨. https://digital.sanchaya.net
೩. ಆರ್ಕೈವ್ ಕೊಂಡಿ
ವಚನ ಪಾರಿಭಾಷಿಕ ಕೋಶದಲ್ಲಿ ಷಟ್‌ಸ್ಥಲ ಪದದ ಹುಡುಕು ಮತ್ತು ಫಲಿತಾಂಶವನ್ನು ಇಲ್ಲಿ ಕಾಣಬಹುದು – https://bit.ly/vachana-ocr-sample

ಇಂಟರ್ನೆಟ್ ಆರ್ಕೈವ್‌ನಲ್ಲಿ ಸಮಗ್ರ ವಚನ ಸಂಪುಟಗಳು
