ಸಮೂಹ ಸಂಚಯದ ಮೂಲಕ ಓಸ್ಮಾನಿಯ ಯುನಿವರ್ಸಿಟಿ ಡಿಜಿಟಲ್ ಲೈಬ್ರರಿಯ ಪುಸ್ತಕಗಳ ಹೆಸರು ಇತ್ಯಾದಿಗಳನ್ನು ಕನ್ನಡೀಕರಣವನ್ನು೭-೮ ದಿನಗಳಲ್ಲೇ ಮುಗಿಸಿದ ಕನ್ನಡಿಗರೆಲ್ಲರಿಗೂ ಸಂಚಯ ತಂಡದ ಧನ್ಯವಾದಗಳು.

ಕನ್ನಡೀಕರಿಸಿದ ಎಲ್ಲ ಮಾಹಿತಿಯೂ ಸರಿಯಾಗಿದೆಯೇ ಎಂದು ಪರಿಶೀಲಿಸುವ ಮುಂದಿನ ಕಾರ್ಯಕ್ಕೆ ನೆರವಾಗಲು ನೊಂದಾಯಿಸಿಕೊಳ್ಳಿ. ನೊಂದಾಯಿತ ಸದಸ್ಯರಿಗೆ ಇಮೇಲ್ ಮೂಲಕ ತಮ್ಮ ನೊಂದಾವಣಿಯನ್ನು ಧೃಡೀಕರಿಸಲು ಸಂದೇಶವೊಂದನ್ನು ಕಳುಹಿಸಲಾಗುವುದು. ಈ ಸಂದೇಶದಲ್ಲಿರುವ ಧೃಡೀಕರಣ ಕೊಂಡಿಯನ್ನು ಕ್ಲಿಕ್ಕಿಸುವುದರ ಮೂಲಕ ಪರಿಶೀಲನಾ ಕಾರ್ಯಕ್ಕೆ ನೀವು ಸಿದ್ಧರಾಗುವಿರಿ.

ಒಮ್ಮೆ ಲಾಗಿನ್ ಆದ ನಂತರ (ಲಿಪ್ಯಂತರಿಸಿದವು ಕೊಂಡಿಯ ಮೇಲೆ ಕ್ಲಿಕ್ಕಿಸಿ) ಈ ಕೆಳಕಂಡ ಮಾಹಿತಿ ನಿಮ್ಮ ಎದುರಿಗೆ ಬರಲಿದ್ದು, ಪ್ರತಿ ಪುಸ್ತಕದ ಕೊಂಡಿ ಈಗಾಗಲೇ ಕನ್ನಡೀಕರಿಸಿರುವ ಪುಸ್ತಕದ, ಲೇಖಕಅ ಹಾಗೂ ಪ್ರಕಾಶಕರ ಹೆಸರುಗಳನ್ನು ಇದು ಒಳಗೊಂಡಿರಲಿದೆ. ಪುಸ್ತಕದ ಕೊಂಡಿಯಲ್ಲಿರುವ ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡು, ಸರಿಯಾದ ಮಾಹಿತಿ ಸಮೂಹದಲ್ಲಿ ದಾಖಲಾಗಿದೆಯೇ ಪರಿಶೀಲಿಸಿ ತಪ್ಪಾದ ಮಾಹಿತಿಯನ್ನು ತಿದ್ದಿ.

ಸಮೂಹ_translated

ಪುಸ್ತಕ ಸಂಚಯದ ಮೂಲಕ ಕನ್ನಡದ ಪುಸ್ತಕವನ್ನು ಹುಡುಕುವ ಎಲ್ಲರಿಗೂ ಇದು ಸರಿಯಾದ ಮಾಹಿತಿ ನೀಡಲು, ಜೊತೆಗೆ ನಾವು ಈ ಪುಸ್ತಕಗಳನ್ನು ವಿಕಿಪೀಡಿಯಕ್ಕೆ ಸೇರಿಸುವಾಗ ತಪ್ಪಾದ ಮಾಹಿತಿ ಸೇರಿಸದಂತೆ ತಡೆಯಲು ನೆರವಾಗುತ್ತದೆ.[:]