ಸಾಮಾನ್ಯ ಪ್ರಶ್ನೋತ್ತರ

೧. ಏನಿದು ಗ್ನೂ?

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ. ಗ್ನೂ ಕರ್ನೆಲ್ ಪರಿಪೂರ್ಣವಾಗಿರಲಿಲ್ಲವಾದ ಕಾರಣ ಅದನ್ನು ಲಿನಕ್ಸ್ ಕರ್ನೆಲ್ ನೊಂದಿಗೆ ಬಳಸಲಾಯ್ತು. ಗ್ನೂ ಮತ್ತು ಲಿನಕ್ಸ್ ನ ಜೋಡಿಯೇ ಇಂದು ಲಕ್ಷಾಂತರ ಜನ ಬಳಸುತ್ತಿರುವ ಗ್ನೂ/ಲಿನಕ್ಸ್ ಆಪರೇಟಿಂಗ್ ಸಿಸ್ಟಂ, (ಕೆಲವೂಮ್ಮೆ ಇದನ್ನ ತಪ್ಪಾಗಿ ಲಿನಕ್ಸ್ ಎಂದು ಕರೆದದ್ದಿದೆ). ಗ್ನೂ/ಲಿನಕ್ಸ್ ನ ಬಹಳಷ್ಟು ಆಕರಗಳು ಅಥವಾ “ವಿತರಣೆಗಳು” ಉಪಲಬ್ಧವಿದೆ. ನಾವು ನೂರು ಪ್ರತಿಶತ ಸ್ವತಂತ್ರವಾದ; ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಗೌರವಿಸುವ ಗ್ನೂ/ಲಿನಕ್ಸ್ ವಿತರಣೆಗಳನ್ನ ಶಿಫಾರಸು ಮಾಡುತ್ತೇವೆ. “ಗ್ನೂ” “GNU’s Not Unix”; ಎಂಬುದರ ಸಂಕ್ಷಿಪ್ತ ರೂಪವಾಗಿದೆ; ಇದನ್ನು ಗ್ನೂ (g-noo) ಎಂದು ಉಚ್ಚರಿಸಲಾಗುತ್ತದೆ.

೨.  ಏನಿದು ಸ್ವತಂತ್ರ ತಂತ್ರಾಂಶ?

“ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ. ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವೃದ್ಧಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ :

ಪ್ರೊಗ್ರಾಮನ್ನು ಯಾವುದೇ ಉದ್ದೇಶಕ್ಕೆ ಬಳಸುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೦).
ಪ್ರೊಗ್ರಾಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೧). ಮೂಲ ಗ್ರಂಥ/ರೂಪ ನೋಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.
ಪ್ರತಿಗಳನ್ನು ಮರುವಿತರಣೆ ಮಾಡುವ ಸ್ವಾತಂತ್ರ್ಯ, ಇದರಿಂದ ನಿಮ್ಮ ನೆರೆಹೊರೆಯವರಿಗೆ ನೆರವಾಗಲು ಸಾದ್ಯವಾಗುತ್ತದೆ (ಸ್ವಾತಂತ್ರ್ಯ ೨).
ತಂತ್ರಾಂಶಗಳನ್ನ ಅಭಿವೃದ್ಧಿ ಮಾಡುವ, ಮತ್ತು ಪರಿಷ್ಕರಿಸಿದ ಆವೃತ್ತಿಗಳನ್ನು ಸಮುದಾಯದ ಒಳಿತಿಗಾಗಿ ಸಾರ್ವಜನಿಕರಿಗೆ ಬಿಡುಗಡೆಗೊಳಿಸುವ ಸ್ವಾತಂತ್ರ್ಯ. (ಸ್ವಾತಂತ್ರ್ಯ ೩). ಮೂಲ ಗ್ರಂಥ/ರೂಪ ನೊಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.

೩. ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಿಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ. ದಯವಿಟ್ಟು ಎಫ್ ಎಸ್ ಎಫ್ ಅಸೋಸಿಯೇಟ್ ಸದಸ್ಯತ್ವ ಪಡೆದು, ಕೈಪಿಡಿಗಳನ್ನು ಕೊಳ್ಳುವುದರಿಂದ ಅಥವ ದೇಣಿಗೆಯನ್ನು ನೀಡುವ ಮೂಲಕ ನಿಮ್ಮ ಸಹಾಯ ಹಸ್ತ ನೀಡಿ. ನೀವು ನಿಮ್ಮ ಉದ್ಯಮದಲ್ಲಿ ಸ್ವತಂತ್ರ ತಂತ್ರಾಂಶವನ್ನು ಬಳಸುತ್ತಿದ್ದಲ್ಲಿ, ಕಾರ್ಪೊರೇಟ್ ಪ್ರಾಯೋಜಕತ್ವ ಅಥವ ಗ್ನೂ ತಂತ್ರಾಂಶದ ಡಿಲಕ್ಸ್ ಹಂಚಿಕೆಯನ್ನು ಎಫ್ ಎಸ್ ಎಫ್ಅನ್ನು ಸಂರಕ್ಷಣೆ ಮಾಡಲು ಪಡೆಯಬಹುದಾಗಿದೆ.

ಗ್ನೂ ಯೋಜನೆ ಎಫ್ ಎಸ್ ಎಫ್ ನ ಕಾರ್ಯಚಟುವಟಿಕೆಗಳನ್ನು ಸಂರಕ್ಷಿಸುವುದು ಆಪರೇಟಿಂಗ್ ಸಿಸ್ಟಂನ ಉಪಯೋಗ, ಅಧ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರು ವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಚಾರಗೊಳಿಸುವುದರೊಂದಿಗೆ ಸ್ವತಂತ್ರ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೋರಾಡುತ್ತದೆ. ನಾವು ಅಂತರ್ಜಾಲದಲ್ಲಿ ಸಂವಾದ, ಮುದ್ರಣ, ಮತ್ತು ಸಂಘಟನೆಯ ಸ್ವಾತಂತ್ರ್ಯಗಳನ್ನು, ಖಾಸಗಿ ಸಂಪರ್ಕ ಮಾಧ್ಯಮಕ್ಕೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು, ಮತ್ತು ಖಾಸಗಿ ಏಕಸ್ವಾಮ್ಯಗಳಿಂದ ತುಳಿತಕ್ಕೆ ಒಳಗಾಗದಂತಹ ತಂತ್ರಾಂಶ ಬರೆಯುವ ಹಕ್ಕನ್ನು ಬೆಂಬಲಿಸುತ್ತೇವೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವಲ್ಲಿ ಈ ಹೊತ್ತಿಗೆ ಸಹಾಯ ಮಾಡಲಿದೆ ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ.