‍‍‍‍‍‍‍‍‍‍‍ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada)‍‍ ‍ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ.ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು,ಉತ್ಪಲಕುಮಾರಿ, ಮುದ್ರಾಮಂಜೂಷ,  ಮಿತ್ರವಿಂದ ಗೋವಿಂದ, ರೇಖಾಗಣಿತ ೨ನೇ ಪುಸ್ತಕ, ಹೊಸಗನ್ನಡ ವ್ಯಾಕರಣ,ಶ್ರೀ ಚಂದ್ರಹಾಸೋಪಾಕ್ಯಾನ ಸಂರಕ್ಷಣೆ ಇತ್ಯಾದಿ ಇಲ್ಲಿ ಮೊದಲ ಪುಟದಲ್ಲಿ ಲಭ್ಯವಿರುವ ಪುಸ್ತಕಗಳು.

ಸಂಚಯದಲ್ಲಿ ಈ ಹಿಂದೆ ಇಂತಹುದೇ ಪುಸ್ತಕಗಳ ಆಕರಗಳಾಗಿದ್ದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯ ಡಿಜಿಟಲ್ ಲೈಬ್ರರಿ ಇತ್ಯಾದಿಗಳಲ್ಲಿ ಇಂಗ್ಲೀಷ್ ನಲ್ಲಿ ಲಭ್ಯವಿದ್ದ ಪುಸ್ತಕದ ಹೆಸರುಗಳನ್ನು ಸಮೂಹ ಸಂಚಯದ ಮೂಲಕ ಕನ್ನಡಕ್ಕೆ ಸಮುದಾಯದ ಮೂಲಕ ಕನ್ನಡೀಕರಿಸಿ ಪುಸ್ತಕ ಸಂಚಯದಲ್ಲಿ ಹುಡುಕಲು ಅನುವು ಮಾಡಲಾಗಿತ್ತು. ಈಗ ಇಂತಹದ್ದೇ ಮತ್ತೊಂದು ಸಾಹಸವನ್ನು ‍‍‍‍‍‍‍‍‍‍‍ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ‍‍‍‍ಗೂ ಅಳವಡಿಸಲು ಸಾಧ್ಯವಿದೆ. ಇದರಲ್ಲಿ ಕೆಲಸ ಮಾಡಲು ಇಚ್ಚಿಸುವವರು ನಮ್ಮನ್ನು ಸಂಪರ್ಕಿಸಬಹುದು.

Creative Commons License
ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು by admin is licensed under a Creative Commons Attribution-ShareAlike 4.0 International