ವಚನ ಸಾಹಿತ್ಯ ಅಭ್ಯಸಿಸುವವರಿಗೆ ಸಂಚಯದಿಂದ ಹೊಸ ಸಲಕರಣೆ. ವಚನ ಸಂಚಯದಲ್ಲಿನ ಪಠ್ಯಗಳನ್ನು ನಿಮಗೆ ಅವಶ್ಯವಿದ್ದಂತೆ Annotate/ಟಿಪ್ಪಣಿ ಮಾಡಿಕೊಳ್ಳುವ ಅವಕಾಶ. ಜೊತೆಗೆ ವಚನಗಳನ್ನು ಸಾರ್ವಜನಿಕವಾಗಿ ಟ್ಯಾಗ್/ವರ್ಗೀಕರಣ ಮಾಡಬಹುದು.
HypothesisTB Dinesh Thank you ಧನ್ಯವಾದಗಳು….
ಬಳಸುವ ಬಗೆ:
ನಿಮ್ಮ ಇಚ್ಚೆಯ ವಚನದ ಪಠ್ಯ ಆಯ್ಕೆ ಮಾಡಿ -> ಸ್ಕ್ರೀನ್ ಮೇಲೆ ಅನೋಟೇಷನ್ ಸಾಧನ ವನ್ನು ” ಚಿನ್ಹೆಯ ಮೇಲೆ ಹುಡುಕಿ (double quotes button) . ಈ ಸಲಕರಣೆಗೆ ನೊಂದಾಯಿಸಿಕೊಳ್ಳಿ/ ಲಾಗಿನ್ ಆಗಿ. ಬಳಕೆ ಶುರು ಮಾಡಿ. ನಿಮ್ಮ ಟಿಪ್ಪಣಿಗಳನ್ನು, ಟ್ಯಾಗ್/ವರ್ಗೀಕರಣಗಳನ್ನು ಇಲ್ಲಿ ಸೇರಿಸಿ ಪ್ರಕಟಿಸಿ. ವಚನಸಂಚಯದ ಗುಂಪಿನ ಜೊತೆ ವರ್ಗೀಕರಣದ ಕೆಲಸ ಮಾಡಲು ಇಚ್ಚಿಸುವವರು ನಮ್ಮ ವರ್ಗೀಕರಣದ ಗುಂಪಿಗೆ ಇಲ್ಲಿ ಸೇರಬಹುದು.
ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ಈ ಕೊಂಡಿಯ ಮೂಲಕ ತಿಳಿಯಬಹುದು – https://web.hypothes.is/#features .
ಇದರ ಅವಶ್ಯಕತೆ
ವಚನ ಸಂಚಯ ವಚನಗಳನ್ನು ಅಭ್ಯಯಿಸುವಾಗ ಯಾವುದೇ ವ್ಯಕ್ತಿ, ಅವಶ್ಯವಿರುವ ವಚನದ ಪಟ್ಟಿ ಮಾಡಿಕೊಳ್ಳುವುದು (ವರ್ಗೀಕರಣ/ಟ್ಯಾಗ್ ಮೂಲಕ), ಅದಕ್ಕೆ ಸಂಬಂಧಿಸಿದ ಟಿಪ್ಪಣಿಗಳನ್ನು ಒಂದೆಡೆ ಇಡುವುದು ಈ ಸೌಲಭ್ಯದ ಮೂಲಕ ಸಾಧ್ಯವಾಗುತ್ತದೆ. ಆಸಕ್ತರು ಇದನ್ನು ಸಾರ್ವಜನಿಕವಾಗಿ / ಖಾಸಗಿಯಾಗಿ ಬಳಸಿಕೊಳ್ಳುವ ಅವಕಾಶವಿದೆ. ವಚನ ಸಂಚಯ ತಂಡದ ಮೂಲಕ ವಚನಗಳನ್ನು ವರ್ಗೀಕರಿಸಲು ಮೊದಲಾಗುವುದಿದ್ದರೆ , ನಮ್ಮನ್ನು ಈ
ಕೊಂಡಿಯ ಮೂಲಕ ಜೊತೆಗೂಡಬಹುದು : https://hypothes.is/groups/rNR9Re5k/vachanasanchaya
ಹೆಚ್ಚಿನ ಮಾಹಿತಿಗೆ ನಮ್ಮ ಗೂಗಲ್ ಗುಂಪಿನ ಚರ್ಚಾವೇದಿಕೆ ನೋಡಿ. https://vachana.sanchaya.net/help/