ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.
ಸಂಶೋಧನೆ
ಅಧ್ಯಯನ
ಸಮುದಾಯ
ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ
ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....
ಅಲರ್ – ಶ್ರೀ. ವಿ. ಕೃಷ್ಣ ಅವರ ಕನ್ನಡ – ಇಂಗ್ಲಿಷ್ ನಿಘಂಟು
ವಿ. ಕೃಷ್ಣ ಅವರ ನಿಘಂಟು ಬಗ್ಗೆ ಅವರು ಅದನ್ನು ಕಟ್ಟಲು ಪಟ್ಟ ಶ್ರಮದ ಬಗ್ಗೆ ಈಗಾಗಲೇ ಬಹಳಷ್ಟು ಜನರಿಗೆ ಗೊತ್ತಿರಬಹುದು. ಅವರ ನಿಘಂಟುಗಳನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೂಲಕ ಕೊಂಡು ಬಳಸಿರಲೂ ಬಹುದು. ಅದನ್ನು ಡಿಜಿಟಲ್ ರೂಪದಲ್ಲಿ ಜೀರೋದಾದ ಸಿ.ಟಿ.ಓ ಕೈಲಾಶ್ ನಾದ್ ಅವರು ೨೦೧೯ರಲ್ಲಿ ಸಿದ್ಧಪಡಿಸಿದ್ದರು. ಅದರ ಬಗ್ಗೆ...
ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ
ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್ನಲ್ಲಿ ದೊರೆಯುತ್ತವೆ. #kannada #digitization #books #apmalathi ಪುಸ್ತಕಗಳ...
ನಗುವ ನಂದ – ೧೯೫೦ರ ದಶಕದ ಬಿ. ರಂಗನಾಥರಾವ್ ಸಂಪಾದಕತ್ವದ ವಾರ ಪತ್ರಿಕೆ
೧೯೫೦ರ ದಶಕದಲ್ಲಿ ಬಿ. ರಂಗನಾಥರಾವ್ ಸಂಪಾದಕತ್ವದಲ್ಲಿ, ಸುಭೋಧ ಪ್ರಕಟಣಾಲಯದ ಮೂಲಕ ಪ್ರಕಟಗೊಳ್ಳುತ್ತಿದ್ದ ವಾರಪತ್ರಿಕೆ ನಗುವ ನಂದ ಈಗ ಡಿಜಿಟಲ್ ರೂಪದಲ್ಲಿ. #kannada #digitization #kannadaweeklyಇಲ್ಲ್ಲಿಓದಿ: http://bit.ly/naguva-nanda-sanchaya ಬಿ. ರಂಗನಾಥರಾವ್ ಅವರ ಕುಟುಂಬಕ್ಕೂ, ಛಾಯ...
ಸಂವಾದ ಪತ್ರಿಕೆ – ಈಗ ಡಿಜಿಟಲ್ ರೂಪದಲ್ಲಿ
‘ಸಂವಾದ’ ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ. ಈ ಕಾರ್ಯ ನಿರಂತರ - ನಿಮ್ಮ ಬೆಂಬಲ ಸಹಕಾರವೂ ನಿರಂತರವಾಗಿರಲಿ. ಸಂವಾದ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ರಾಘವೇಂದ್ರ ಪಾಟೀಲರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ Kuntady Nithesh (ಕುಂಟಾಡಿ ನಿತೇಶ್) ಅವರಿಗೂ ವಿಶೇಷ ಧನ್ಯವಾದಗಳು. ಸಂವಾದ...
ಸಂಚಯ – ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ
ಸಂಚಯ - ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ - ನಮ್ಮ ಸಂಚಯದ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಣಗೊಳ್ಳುತ್ತಿದೆ. ಈ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ಡಿ. ವಿ. ಪ್ರಹ್ಲಾದ್ ಅವರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ ಕುಂಟಾಡಿ ನಿತೇಶ್ ಅವರಿಗೂ ಧನ್ಯವಾದಗಳು. ಕನ್ನಡ...