ವಚನ ಸಂಚಯ‍

ವಚನ ಸಂಚಯ‍

http://vachana.sanchaya.net

೧೧ ಮತ್ತು ೧೨ನೇ ಶತಮಾನದ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ರೂಪ ‘ವಚನ ಸಾಹಿತ್ಯದ’ ಎಲ್ಲ ವಚನಗಳನ್ನು ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ “ವಚನ ಸಂಚಯ” ತಾಣ ನಮ್ಮ ಚೊಚ್ಚಲ ಯೋಜನೆಯಾಗಿ ನಿಮ್ಮ ಮುಂದಿದೆ. ಇದನ್ನು ಬಳಸಿ, ಇತರರೊಡನೆ ಹಂಚಿಕೊಳ್ಳಿ. ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ, ಸಲಹೆ ಸೂಚನೆಗಳಿಗೆ ನಾವು ಕಾತುರದಿಂದ ಕಾಯುತ್ತಿದ್ದೇವೆ. ಇದು ಪರೀಕ್ಷಾರ್ಥ (beta) ಆವೃತ್ತಿಯಾಗಿದ್ದು, ಇದರಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು.

11 Comments

 1. Srinivas Murthy G R

  ಮಾನ್ಯರೇ,
  ಈ ದಿನ ಸಂಪದದಲ್ಲಿ ಈ ತಾಣದ ಬಗ್ಗೆ ತಿಳಿದು ಕೂಡಲೇ ನೋಡಿದೆ. ತುಂಬಾ ಸಂತೋಷವಾಗಿದೆ. ಒಳ್ಳೆಯ ಪ್ರಯತ್ನ. ಶುಭವಾಗಲಿ.
  ಒಂದು ಮಾತು: ಇಂದಿನ ವಚನದ ಫಾಂಟ್ ಅಳತೆ ತುಂಬಾ ಕಡಮೆ, ಮತ್ತು ಅದರ ಬಣ್ಣವೂ ಸ್ವಲ್ಪ ತಿಳಿ ಅನಿಸಿತು, ಓದಲು ಕಷ್ಟ. ಗಾಢ ಬಣ್ಣದಲ್ಲಿ ಸ್ವಲ್ಪ ದೊಡ್ಡ ಗಾತ್ರವಿದ್ದರೆ ಅನುಕೂಲ. ಇದು ನನ್ನೊಬ್ಬನಿಗೆ ಮಾತ್ರವೋ (Xubuntu 12.04, Firefox) ತಿಳಿದಿಲ್ಲ. [ಆದರೆ ಈ ಪ್ರತಿಕ್ರಿಯೆ ತುಂಬಾ ದೊಡ್ಡ ಅಕ್ಷರಗಳಲ್ಲಿ ಬರುತ್ತಿದೆ!]

  Reply
  • sanchaya

   ನಮಸ್ತೆ, ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ವಚನ ಸಂಚಯದ ಕೆಲಸ ಇನ್ನೂ ಬೀಟಾದಲ್ಲಿಯೇ ಇದ್ದು, ಆಗ್ಗಾಗ್ಗೆ ಅದರಲ್ಲಿ ಕಂಡು ಬರುತ್ತಿರುವ ನ್ಯೂನ್ಯತೆಗಳನ್ನು ಸರಿಪಡಿಸುತ್ತಿದ್ದೇವೆ. ನೀವು ಹೇಳಿದ ತೊಂದರೆ ಮೊಬೈಲ್‌ನಲ್ಲೂ ಕಂಡು ಬರುತ್ತಿದ್ದು, ಶೀಘ್ರವೇ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಲೋಹಿತ್‌ ಕನ್ನಡ ಅಥವಾ ಗೂಗಲ್ ಫಾಂಟ್ ಬಳಸಿ ನೋಡಿದಾಗ ನಮಗೆ ಉಬುಂಟುವಿನಲ್ಲಿ ತೊಂದರೆ ಕಂಡು ಬರುತ್ತಿಲ್ಲ. Xubuntu ಪ್ರಯತ್ನಿಸಿ ನೋಡುತ್ತೇವೆ.

   Reply
  • N.S.Dinesh

   I am unable to download the books from pustaka sanchaya (has the Usmania University server got any problem? Earlier I was able to download the books. Can you help me.

   Reply
 2. Madhav Radder

  ಒಳ್ಳೆಯ ಕೆಲಸ ಮಾಡುತ್ತಿದ್ದಿರಿ,, ಒಳ್ಳೆಯದಾಗಲಿ

  Reply
 3. Siddharam Hiremath

  ಮಾನ್ಯರೆ,
  ಪತ್ರಿಕೆಯಲ್ಲಿ ಈ ತಾಣದ ಬಗ್ಗೆ ಓದಿ, ಆಸಕ್ತಿಯಿಂದ ನಿಮ್ಮ ಕಾರ್ಯವನ್ನು ನೋಡಿದೆ. ಅತ್ಯುತ್ತಮವಾದ ಯೋಜನೆ. ಕನ್ನಡಿಗರೆಲ್ಲರೂ ಕೈಜೋಡಿಸಲೇಬೇಕಾದ ತಾಣವಿದು. ನಿಮ್ಮ ಶ್ರಮ, ಆಸಕ್ತಿ, ಕಳಕಳಿ ಯಶಸ್ವಿಯಾಗಲಿ. ನನ್ನ ಅಳಿಲು ಸೇವೆಯೂ ನಿಮ್ಮೊಂದಿಗಿದೆ. ಯೋಜನೆಯ ಯಾವುದೇ ಕಾರ್ಯವಿದ್ದರೂ ದಯವಿಟ್ಟು ತಿಳಿಸಿ, ನಿಸ್ಸಂದೇಹವಾಗಿ ಸೇವೆ ಸಲ್ಲಿಸುವೆ.

  Reply
  • sanchaya

   ಧನ್ಯವಾದಗಳು ಸಿದ್ದರಾಮ್. ನಿಮ್ಮೆಲ್ಲರ ಸಹಾಯ ನಮ್ಮ ಯೋಜನೆಗಳಿಗೆ ಬಹು ಅವಶ್ಯ. ದಯವಿಟ್ಟು ವಚನ, ದಾಸ ಹಾಗೂ ಸಮೂಹ ಸಂಚಯಗಳಲ್ಲಿ ಕೈಜೋಡಿಸಿ. ಸಮೂಹ ಸಂಚಯ ನಮ್ಮ ಹೊಸ ಯೋಜನೆಯಾಗಿದ್ದು ನಮ್ಮ ಲೈಬ್ರರಿಗಳನ್ನು ಜನರಿಗೆ ಕನ್ನಡದಲ್ಲೇ ಹುಡುಕಾಡುವಂತೆ ಮಾಡುವ ಯೋಜನೆಯನ್ನು ಹೊಂದಿದೆ. ನೀವು ನಿಮ್ಮ ಸಮಯ ಹಾಗೂ ಕನ್ನಡದ ಈ ಕೆಲಸಗಳಿಗೆ ಹೊಸ ಆಯಾಮ ಕೊಡಬಲ್ಲ ಮಾಹಿತಿ, ಅಗತ್ಯ ನೆರವು ಇತ್ಯಾದಿಗಳನ್ನು ಒದಗಿಸುವುದರೊಂದಿಗೆ ನೆರವಾಗಬಹುದು.

   Reply
 4. bharathi

  ಶರಣು. ದಯವಿಟ್ಟು ಎಲ್ಲಾ ವಚನಗಳ ಮರುಪರಿಶೀಲನೆ ಮುಗಿದಿರುವ ಬಗ್ಗೆ ತಿಳಿಸುವುದು.

  Reply
  • sanchaya

   ವಚನಗಳ ಪರಿಶೀಲನೆ ಕೆಲವು ವಚನಕಾರರಿಗೆ ಮಾತ್ರ ಮುಗಿದಿದ್ದು, ಅದನ್ನು ಪರಿಶೀಲಿಸುವ ಕಾರ್ಯ ಇನ್ನೂ ಮುಗಿದಿಲ್ಲ. ಬಾಕಿ ಇರುವ ವಚನ ಸಂಚಯದ ಕಾರ್ಯಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ. ಮತ್ತೆ ನಿಮ್ಮ ಸಹಕಾರ ಎಂದಿನಂತೆ ವಚನ ಸಂಚಯ ಯೋಜನೆಗೆ ಬೇಕಿದೆ. ಧನ್ಯವಾದಗಳೊಂದಿಗೆ.

   Reply
   • Srinivas Murthy G R

    ನಿಮ್ಮ ಗಮನಕ್ಕೆ: ನನಗೆ ಈದಿನ ಬಂದ ಒಂದು ಇಮೆಯಿಲ್ (೧೧:೦೮) ಓದಲು ಸಾಧ್ಯವಿಲ್ಲ. ಬಹುಶಃ ಯೂನಿಕೋಡ್ ಅಲ್ಲ ಅಂತ ಕಾಣುತ್ತೆ. ಆದರೆ ಅದರ ಜೊತೆಯಲ್ಲೇ (೧೧:೦೯) ಬಂದ ಇನ್ನೊಂದು ಸರಿಯಾಗಿದೆ. (ಭಾರತಿಯವರ ಕಾಮೆಂಟ್).

    Reply
 5. Ashok Shastri

  Maanyare thumba olleyakelasvanne madiddiri. Nannavachanasahityadadahavannu tanisikollalu upayuktavagide.E Karya pavitra,param chetanavadudu.Ellaru vachasali.Prashanshniya kelasake jayvide.Olleyadagali.

  Reply

Submit a Comment

Your email address will not be published. Required fields are marked *

Skills

Posted on

November 2, 2014