ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ
ಮೊದಲ ಹೆಜ್ಜೆ
ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಂತೂ, ಅದನ್ನು ಬಳಸುವ ಸಾಮಾನ್ಯನಿಂದ ಹಿಡಿದು, ತಂತ್ರಜ್ಞಾನದ ಜೊತೆಗೇ ದಿನದೂಡುವ ತಂತ್ರಜ್ಞನವರೆಗೂ ಎಲ್ಲರಿಗೂ ಕನ್ನಡ ಬಳಸುವ ಮತ್ತು ಬೆಳೆಸುವ ಆಸೆ ಖಂಡಿತ ಇರುತ್ತದೆ. ಅಂತಹ ಆಸೆಗಳನ್ನು ಮತ್ತೆ ಚಿಗುರಿಸಿ, ಮಾಹಿತಿ ತಂತ್ರಜ್ಞಾನದ ಬಳಕೆದಾರನ ದಿನನಿತ್ಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, ಕನ್ನಡದ ತಾಂತ್ರಿಕ ಬೆಳವಣಿಗೆಗೆ ನಾಂದಿಯಾಗಲು ನಾವು ಇಡಬೇಕಾದ ‘ಹೆಜ್ಜೆಗಳು” ಅನೇಕ. ದೈನಂದಿನ ಬದುಕಿನಲ್ಲಿ ತಂತ್ರಜ್ಞಾನದ ಮುಖೇನ ಕನ್ನಡದಲ್ಲೇ ವ್ಯವಹರಿಸಬಹುದೇ? ಕನ್ನಡದ ತಾಂತ್ರಿಕ ಬೆಳವಣಿಗೆ ಹೇಗೆ ಸಾಧ್ಯ? ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ ಹೇಗೆ? ಕನ್ನಡ ಭಾಷಾ ತಂತ್ರಜ್ಞಾನ ಬೆಳವಣಿಗೆಯ ತೊಡಕುಗಳ ನಿವಾರಣೆ ಸಾಧ್ಯವೇ? ತಂತ್ರಾಂಶಗಳು ನಡೆಯಬೇಕಿರುವ ಹಾದಿಯ ಕಿರು ಪರಿಚಯ ಎಲ್ಲಿ ಸಿಗಬಹುದು? ಇದಕ್ಕೊಂದು ಸಮುದಾಯವಿದೆಯೇ? ಈ ಸಮುದಾಯ ಅಭಿವೃದ್ದಿಯ ಪರಿಕಲ್ಪನೆ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ‘ಹೆಜ್ಜೆ’ ರೂಪಿತಗೊಂಡಿದೆ. ಮಾಹಿತಿ ತಂತ್ರಜ್ಞಾನದ ವಿವಿಧ ಸ್ತರಗಳಲ್ಲಿ ಕನ್ನಡದ ಬೆಳವಣಿಗೆಗೆ ಬೇಕಾದ ವಿಷಯಗಳ ಬಗ್ಗೆ ಅನುಭವಿ ತಜ್ಞರು, ತಂತ್ರಜ್ಞರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಪ್ರಾರಂಭವಾಗುವ ಈ ಕಾರ್ಯಕ್ರಮ, ಮೇಲೆ ಹೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳುವ ‘ಹೆಜ್ಜೆ’ಗಳ ಹಾದಿಯನ್ನು ನಿಮ್ಮ ಮುಂದೆ ತೆರೆಯಲಿದೆ.
ಹೆಜ್ಜೆ – ಮೊದಲ ಭಾಗ |
||
೯:೩೦ |
ಹೆಜ್ಜೆ |
ಪರಿಚಯ |
೯:೪೦ |
ತಂತ್ರಜ್ಞಾನ ಬೇಕಿರುವುದಾದರೂ ಯಾರಿಗೆ? |
ಮುಖ್ಯ ಅತಿಥಿಗಳು – ಶ್ರೀ ನಾಗೇಶ್ ಹೆಗಡೆ |
೧೦:೧೫ |
ತೆರೆಯಲ್ಲಿ ಸುಂದರ ಅಕ್ಷರಗಳು – ಒಂದು ಕಿರು ಪರಿಚಯ |
ಹಳ್ಳಿ ಮನೆ ಅರವಿಂದ |
ಕಾಫಿ ಬಿಡುವು – ೧೦ ನಿಮಿಷ |
||
೧೧:೦೦ |
ಅನುಭವದ ಮಾತುಗಳು – ೧ |
ಶ್ರೀ ವಸುದೇಂದ್ರ |
೧೧:೧೫ |
ಅನುಭವದ ಮಾತುಗಳು – ೨ |
ಶ್ರೀ ಬೇಳೂರು ಸುದರ್ಶನ |
೧೧:೩೦ |
eSpeak – ಕನ್ನಡಕ್ಕೊಂದು ಉಲಿಯುವ ತಂತ್ರಜ್ಞಾನ – ಮುಂದೇನು? |
ಶ್ರೀಧರ್ ಟಿ.ಎಸ್ |
೧೨:೦೦ |
ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಒಂದು ನೋಟ |
ರೆಡ್‌ಹ್ಯಾಟ್ ನ ಶಂಕರ್ ಪ್ರಸಾದ್ |
೧೨:೩೫ |
ಫೈರ್‌ಫಾಕ್ಸ್ , ಐ–ಫೋನ್ ಜೊತೆ ನನ್ನ ಒಡನಾಟ ಮತ್ತು ಮುಂದಿನ ಕನಸು |
ಸುನಿಲ್ ಜಯಪ್ರಕಾಶ್ |
ಊಟದ ಸಮಯ |
||
ಹೆಜ್ಜೆ – ಎರಡನೆ ಭಾಗ |
||
೧:೩೦ |
ತಂತ್ರಜ್ಞಾನದಿಂದಾಚೆಗೆ… ವ್ಯವಹಾರ, ಉದ್ಯಮ,ಇ–ಆಡಳಿತ, ಹವ್ಯಾಸ |
ಶಶಿಶೇಖರ್ |
೨:೦೦ |
ಬ್ಲಾಗಿಂಗ್ ಲೋಕದ ಹೊರಗೊಮ್ಮೆ ಇಣುಕು ನೋಟ |
ಓಂಶಿವಪ್ರಕಾಶ್ |
೨:೩೦ |
ವಿಕಿಪೀಡಿಯ ವಿಕ್ಷನರಿ – ಕನ್ನಡ ಪದಕೋಶಕ್ಕೊಂದು ಕೊಡುಗೆ |
ವಿವೇಕ್ ಶಂಕರ್ |
೨:೪೦ |
ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ನಾನು ಇಟ್ಟ ಪುಟ್ಟ ಹೆಜ್ಜೆಗಳು |
ವಾಸುದೇವ್ ಕಾಮತ್ |
ಕಾಫಿ ಬಿಡುವು – ೧೦ ನಿಮಿಷ |
||
೩:೧೫ |
ಮಹಿಳೆ ಮತ್ತು ತಂತ್ರಜ್ಞಾನ |
ಸವಿತ ಎಸ್. ಆರ್ |
೩:೪೦ |
ನಿಸರ್ಗವೇ ಒಂದು ತಂತ್ರಜ್ಞಾನ – ಅದನ್ನು ಕಾಪಾಡುವಲ್ಲಿ ನಮ್ಮ ಪಾತ್ರ |
ವಸಂತ್ ಕಜೆ |
೪:೦೦ |
ತಂತ್ರಜ್ಞಾನ ಮತ್ತು ನಾವು |
ರುದ್ರೇಶ್ – ಇಂಡಿಕ್ರಾಸ್ ಶ್ರೀಧರ್ ಎಂ – ಅಂಡ್ರಾಯ್ಡ್ ಕೀಬೋರ್ಡ್ ಮುರಳಿ ಎಚ್.ಅರ್ – ನಗರ ನಿರ್ಮಾಣ ಮತ್ತು ಕನ್ನಡ ಟಿ ಬಿ ದಿನೇಶ್ – ಅಲಿಪಿ – ರಿ ನರೇಷನ್ ಅರ್ಜುನ್ ರಾವ್ ಚಾವ್ಲಾ – ವಿಕಿಪೀಡಿಯ ಇಂಡಿಯ |
೪:೪೦ |
ನಿಮ್ಮ ದನಿ |
ಹೆಜ್ಜೆಯ ಜೊತೆ ಹೆಜ್ಜೆ ಇಟ್ಟವರಿಗೊಂದಿಷ್ಟು ಸಮಯ |
೫:೩೦ |
ಮುಂದಿನ ಹೆಜ್ಜೆಗೆ ಮುನ್ನ ಒಂದು ಸಣ್ಣ ವಿರಾಮ – ಇದು ಪ್ರಾರಂಭ ಮಾತ್ರ |