ಪುಸ್ತಕಗಳ ಡಿಜಿಟಲೀಕರಣ ಯೋಜನೆ

‍‍ಕನ್ನಡದ ಅಮೂಲ್ಯ ಪುಸ್ತಕಗಳನ್ನು, ಕಾಪಿರೈಟ್ ಮುಕ್ತ ಪುಸ್ತಕಗಳನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ಮೂಲಕ ಲಭ್ಯವಾಗಿರಿಸಲು ‘ಜ್ಞಾನದ ಸೇವಕರು’ (Servants Of Knowledge) ಸಮುದಾಯ ಯೋಜನೆಯ ಅಡಿಯಲ್ಲಿ ಸಂಚಯ ತೊಡಗಿಕೊಂಡಿದೆ. ಸಂಚಿ ಫೌಂಡೇಷನ್ ಎಂದಿನಂತೆ ಈ ಕಾರ್ಯದ ಬೆನ್ನೆಲುಬಾಗಿ ನಿಂತಿದೆ.

 

ಈ ಯೋಜನೆ ಅಡಿ ಲಭ್ಯವಾಗಿರುವ ಪುಸ್ತಕಗಳನ್ನು ಸುಲಭವಾಗಿ ಪಡೆಯಲು ನಮ್ಮ ಪುಸ್ತಕ ಸಂಚಯ ಯೋಜನೆ ಹಾಗೂ ಡಿಜಿಟಲ್ ಸಂಚಯ ಕೊಂಡಿಗಳನ್ನು ನೋಡಬಹುದು.

‍https://pustaka.sanchaya.net & https://digital.sanchaya.net

ಬೆಂಬಲಿಸಿಸಂಪರ್ಕಿಸಿ‍

ಯೋಜನೆಯ ಹಿನ್ನೆಲೆ

‍‍‍‍ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌, ಬೆಂಗಳೂರಿ‍ನಲ್ಲಿ ಕಾರ್ಲ್ ಮಲಮದ್ ಎಂಬ ಅಮೇರಿಕಾದ ತಂತ್ರಜ್ಞ, ಲೇಖಕ, ಸಾರ್ವಜನಿಕ ಸ್ವತ್ತಿನ ವಕೀಲ (Public Domain Advocate) , ಇಂಟರ್ನ್ನೆಟ್ ಆರ್ಕ್ಕೈವ್‌ನ ಟಿ.ಟಿ.ಸ್ಕ್ರೈಬ್ ‍ಸ್ಕ್ಯಾನರ್ ಅ‍ನ್ನು ಲಭ್ಯವಾಗಿಸಿದ್ದರು. ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ಸಾರ್ವಜನಿಕಗೊಳಿಸುವುದು ಇದರ ಉದ್ದೇಶವಾಗಿತ್ತು. ಕನ್ನಡಿಗರಿಗೆ ಕಾಪಿರೈಟ್ ಹೊರತಾದ, ಅಮೂಲ್ಯ ಪುಸ್ತಕಗಳನ್ನು ಲಭ್ಯವಾಗಿಸಿಕೊಳ್ಳಲು ಸಮುದಾಯ ಸಂಘಟನೆಯ ಮೂಲಕ ಈ ಸ್ಕ್ಯಾನರ್ ಬಳಸಬಹುದೇ ಎಂದು ವಿಚಾರಿಸಿದಾಗ ಹಾಗೂ ಸ್ಕ್ಯಾನರ್‌ನ ಬಳಕೆಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಂಡಾಗ, ಈ ಕಾರ್ಯವನ್ನು ಸಂಚಯ ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯ ಎಂದು ತಿಳಿದುಬಂತು. ಕಾರ್ಲ್ ಇದನ್ನು ಐ.ಎ.ಎಸ್ಸಿ ಮುಂದಿಟ್ಟಾಗ ಆಕಾಡೆಮಿಯೂ ಇದಕ್ಕೆ ಒಪ್ಪಿಗೆ ಸೂಚಿಸಿತು. ಇದರ ಫಲವಾಗಿ ಐ.ಎ.ಎಸ್ಸಿಯ ಸ್ಕ್ಯಾನರ್ ಅನ್ನು ಏಪ್ರಿಲ್ ೨೦೧೯ರಿಂದ ನಾವು ನಿರ್ವಹಿಸುತ್ತಾ ಬಂದಿದ್ದೇವೆ. ಕನ್ನಡ, ಇಂಗ್ಲೀಷ್, ಮಲಯಾಳಂ, ಸಿಂದಿ ಹೀಗೆ ಸಮುದಾಯ ಹಾಗೂ ಇತರೆ ಸಂಸ್ಥೆಗಳು ಒದಗಿಸಿದ ೩೦೦೦ಕ್ಕೂ ಹೆಚ್ಚು ಪುಸ್ತಕಗಳನ್ನು, ೫.೫ ಲಕ್ಷ ಪುಟಗಳನ್ನು ಇದುವರೆಗೆ ಸ್ಕ್ಯಾನ್ ಮಾಡಿರುತ್ತೇವೆ. ಈ ಕಾರ್ಯವನ್ನು ಮುನ್ನೆಡೆಸಲು ಅಕಾಡೆಮಿಯ ಜೊತೆಗೆ ಇತರೆ ವಿಶ್ವವಿದ್ಯಾನಿಲಯಗಳು, ಸಂಘಸಂಸ್ಥೆಗಳ ಜೊತೆಗೆ ಮುನ್ನೆಡೆಸುವ ಆಶ‍ಯವನ್ನು ಸಂಚಯ ಹೊಂದಿದೆ.

‍ಈ ಯೋಜನೆ ಮುಂದುವರೆಸಲು ಪುಸ್ತಕಗಳು, ಸ್ಕ್ಯಾನಿಂಗ್‌ ಮಾಡಲು, ನಿರ್ವಹಣೆ ಇತ್ಯಾದಿಗಳಿಗೆ ಮಾನವ ಸಂಪನ್ಮೂಲಗಳ ಜೊತೆಗೆ ಬೇಕಿರುವ ಸಾಂಸ್ಥಿಕ ಬೆಂಬಲವನ್ನು ಸಂಚಿ ಫೌಂಡೇಷನ್ ಒದಗಿಸುತ್ತಿದೆ.

ಈ ಯೋಜನೆಯಲ್ಲಿ ಡಿಜಿಟೈಜ್‌ಗೊಳ್ಳುವ ಎಲ್ಲ ಪುಸ್ತಕಗಳು  https://archive.org ‍ ನಲ್ಲಿ ಲಭ್ಯವಾಗಿಸಲ್ಪಡುತ್ತವೆ. ಜೊತೆಗೆ ಕನ್ನಡ ಪುಸ್ತಕಗಳನ್ನು ಎಂದಿನಂತೆ ಪುಸ್ತಕ ಸಂಚಯದ ಮೂಲಕವೂ ಹುಡುಕಿ ಪಡೆಯುವಂತೆ ಮಾಡಲಾಗುತ್ತದೆ.

ನಮ್ಮ ಈ ಯೋಜನೆಯ ಪ್ರಾರಂಭಕ್ಕೆ ಕಾರಣವಾದ ಸಂಸ್ಥೆಗಳನ್ನು ಈ ಕೆಳಗೆ ಸ್ಮರಿಸುತ್ತಿದ್ದೇವೆ

Carl Malamud & public.resource.org

ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್, ಸೇವೆಗಳು ಮತ್ತು ಈ ಅವಕಾಶವನ್ನು ಒದಗಿಸಿದ್ದಕ್ಕೆ ಹಾಗೂ ಒಟ್ಟಾರೆ ಜ್ಞಾನದ ಸೇವಕರು – ಸಮುದಾಯದ ಮೂಲಕ ಭಾರತದ ಸಾರ್ವಜನಿಕ ಗ್ರಂಥಾಲಯದ ಕನಸನ್ನು ನನಸಾಗಿಸುತ್ತಿರುವುದಕ್ಕೆ.

ಇಂಟರ್ನೆಟ್ ಆರ್ಕೈವ್

ಟಿ.ಟಿ. ಸ್ಕ್ರೈಬ್ (ಮೇಲಿನ ಚಿತ್ರದಲ್ಲಿರುವುದು) ನಂತಹ ಸ್ಕ್ಯಾನರ್ ಹಾಗೂ ಡಿಜಿಟಲೀಕರಣಕ್ಕೆ ಅವಶ್ಯ ತಂತ್ರಾಂಶ, ಕೆಲಸದ ಹರಿವು ಹಾಗೂ ‍ಶಿಷ್ಠತೆಗಳನ್ನು, ಸಮುದಾಯದ ಸಹಾಯವನ್ನು ಒದಗಿಸುತ್ತಿರುವುದಕ್ಕೆ. ಈ ಎಲ್ಲ ಕೆಲಸಗಳ ಇಂಟರ್ನೆಟ್ ಮೂಲವಾಗಿರುವುದಕ್ಕೆ.

 

 

ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್

ಡಿಜಿಟೈಜೇಷನ್ ಕಾರ್ಯಕ್ಕೆ ಅವಶ್ಯಕವಾದ ನೆಲೆಯಾಗಿದ್ದು, ಅದಕ್ಕೆ ಬೇಕಿರುವ ಪೂರಕ ಸಾಂಸ್ಥಿಕ ಬೆಂಬಲ, ನೆರವು ಹಾಗೂ ಸಮುದಾಯ ಕಾರ್ಯಕ್ಕೆ ಸಹಕರಿಸುತ್ತಿರುವುದಕ್ಕೆ.

ಸಂಚಿ ಫೌಂಡೇಷನ್, ಬೆಂಗಳೂರು

ಸಂಚಯದ ಎಲ್ಲ ಯೋಜನೆಗಳಿಗೆ ಬೆಂಬಲವಾಗಿ, ಅವಶ್ಯ  ಸಾಂಸ್ಥಿಕ ಶಕ್ತಿ, ನಿರ್ವಹಣೆ ಹಾಗೂ ಇತರೆ ಸಾಂಸ್ಥಿಕ ಒಪ್ಪಂದಗಳಿಗೆ ಕಾರಣವಾಗುತ್ತಿ‍ರುವುದಕ್ಕೆ.

೨೦೧೯ರ ಯೋಜನೆಗೆ ಮತ್ತಷ್ಟು ಶಕ್ತಿ ಒದಗಿಸಿದವರು

ಪುಸ್ತಕ ಸಂಚಯ ಯೋಜನೆಯ ಮುಂದುವರೆದ ಈ ಯೋಜನೆಯನ್ನು ೨೦೧೯ರ ಅನುದಾನಕ್ಕೆ ಆಯ್ಕೆ ಮಾಡಿದ್ದಕ್ಕೆ – ತೇಜೇಶ್ ಜಿ.ಎನ್ ಅವರಿಗೆ ಧನ್ಯವಾದಗಳು.

‍ಈ ಅನುದಾನವನ್ನು – ಹಳೆಯ ಪುಸ್ತಕಗಳನ್ನು ಹುಡುಕಲು, ಕೊಳ್ಳಲು, ನಿರ್ವಹಣೆಯ ಕಾರ್ಯಗಳು ಇತ್ಯಾದಿಗಳಿಗೆ ಉತ್ತಮ ರೀತಿಯಲ್ಲಿ ಬಳಸಲು ಸಂಚಯ ಯೋಜಿಸಿದೆ.

ಈ ಕಾರ್ಯಕ್ಕೆ ಮೊದಲಿಗೆ ಪುಸ್ತಕಗಳನ್ನು ಒದಗಿಸಿ ಬೆಂಬಲ ಸೂಚಿಸಿದವರು

ಜೊತೆಗೆ, 

  1. ಶ್ರೀ. ಅಶೋಕವರ್ಧನ
  2. ‍ಶ್ರೀ. ಕೊಳ್ಳೆಗಾಲ ಶರ್ಮ
  3. ಡಾ.‍ ವೈ. ಸಿ. ಕಮಲ
  4. ‍ಶ್ರೀ. ಓ.ಎಲ್. ನಾಗಭೂಷಣ ಸ್ವಾಮಿ
  5.  ಡಾ. ಶಶಿಕಲ. ಬೆಂಗಳೂರು ವಿ.ವಿ
  6. ಶ್ರೀಮತಿ ಛಾಯಾ ಉಪಾಧ್ಯಾಯ
  7. ‍ಶ್ರೀಮತಿ ಹೇಮಾ ಹೆಬ್ಬುಗೋಡಿ
  8. ‍ಶ್ರೀ ರಾಜೇಂದ್ರ ಪ್ರಸಾದ್
ಈ ಪಟ್ಟಿ ಬೆಳೆಯುತ್ತಲಿದ್ದು - ಪೂರ್ಣಪಟ್ಟಿಯನ್ನು ಯೋಜನೆಯ ಪುಟದಲ್ಲಿ ಧನ್ಯವಾದಗಳೊಂದಿಗೆ ಪ್ರಕಟಿಸಲಾಗುವುದು.

ಇದುವರೆಗಿನ ಡಿಜಿಟೈಜೇಷನ್‌ ಕಾರ್ಯದ ಅಂಕಿಅಂಶಗಳು

ವರುಷಗಳು

ಸಾವಿರಕ್ಕೂ ಹೆಚ್ಚು ಪುಸ್ತಗಳು

ಕನ್ನಡ ಪುಸ್ತಕಗಳು

ಲಕ್ಷ ಪುಟಗಳು

ಡಿಜಿಟೈಜೇಷನ್‌ನ ಬ್ಲಾಗ್‌ ಪುಟಗಳು

‍ನಮ್ಮ ಯೋಜನೆಯ ಫಲಶೃತಿಗಳ ಬಗ್ಗೆ ಆಗ್ಗಾಗ್ಗೆ ನಿಮಗೆ ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತೇವೆ. ಜೊತೆಗೆ ನಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಸಾಮಾಜಿಕ ತಾಣಗಳನ್ನೂ ನೋಡುತ್ತಿರಿ.

ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ

ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ

ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ - https://pvn.sanchaya.net/ ಪಿ. ವಿ. ನಾರಾಯಣ ಅವರು ಕನ್ನಡಿಗರಿಗೆ ಲಭ್ಯವಾಗಿಸಿರುವ ಕೆಲವು ಕೃತಿಗಳನ್ನು ಇಲ್ಲಿ ಕ್ರೂಡೀಕರಿಸಲಾಗಿದೆ....

ಹೊಸ ಮನುಷ್ಯ ಪತ್ರಿಕೆಯ ಸಂಚಯ

ಹೊಸ ಮನುಷ್ಯ ಪತ್ರಿಕೆಯ ಸಂಚಯ

ಡಿ. ಎಸ್. ನಾಗಭೂಷಣ ಅವರ ಸಂಪಾದಕೀಯದ ಹೊಸ ಮನುಷ್ಯ ಪತ್ರಿಕೆಯ ಡಿಜಿಟಲೀಕರಣ ಮುಗಿದಿದ್ದು, ಎಲ್ಲರಿಗೆ ಈ ಕೆಳಗಿನ ಕೊಂಡಿಗಳ ಮೂಲಕ ಲಭ್ಯವಿವೆ. ಈ ಯೋಜನೆಗೆ ಎಲ್ಲ ಸಂಚಿಕೆಗಳನ್ನು ಒದಗಿಸಿ, ಇದನ್ನು ಸಾಧ್ಯವಾಗಿಸಿದ ಸವಿತಾ ನಾಗಭೂಷಣ ಅವರಿಗೂ, ಕಾರಣೀಕರ್ತರಾದ ಪ್ರೊ. ಓ.ಎಲ್. ಎನ್ ಸರ್ ಅವರಿಗೂ ಧನ್ಯವಾದಗಳು. Quick Access Link:...

ಗಾಂಧೀ ಸಂಚಯ

ಗಾಂಧೀ ಸಂಚಯ

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧೀ ಭವನ, ಬೆಂಗಳೂರು ಪ್ರಕಟಣೆಯ ಪುಸ್ತಕಗಳು ಈಗ ಎಲ್ಲರಿಗೆ ಮುಕ್ತವಾಗಿ ಡಿಜಿಟಲ್ ರೂಪದಲ್ಲಿ ಲಭ್ಯ. https://gandhi.sanchaya.net Gandhi's literature published by Karnataka Gandhi Smaraka Nidhi, Gandhi Bhavana Bengaluru has been digitized under...

ಭಾವನಾ ಸಂಚಯ

ಭಾವನಾ ಸಂಚಯ

ಜಯಂತ್ ಕಾಯ್ಕಿಣಿ ಸಂಪಾದಕತ್ವದ ಭಾವನಾ ಕನ್ನಡ ಮಾಸಿಕದ ಸಂಚಿಕೆಗಳು ಈಗ Internet Archive ನ #servantsofknowledge ಸಂಗ್ರಹದಲ್ಲಿ ಲಭ್ಯ. ಇವುಗಳನ್ನು ಒಟ್ಟಾರೆಯಾಗಿ ಇಲ್ಲಿ ಕಾಣಬಹುದು - https://bhavana.sanchaya.net/ ಸಂಚಿಕೆಗಳನ್ನು ಲಭ್ಯವಾಗಿಸಿದ Devu Pattar Sushrutha Dodderi ಅವರಿಗೆ ಧನ್ಯವಾದಗಳು. ಇವುಗಳನ್ನು...

ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ

ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ

‍ಡಿಜಿಟಲೀಕರಣದ ಕೆಲಸಗಳಿಂದ ಏನು ಪ್ರಯೋಜನ? ಯಾರಿ‍ಗೆ? ಏಕೆ? ‍ಹೇಗೆ? ಕನ್ನಡ ಸಂಚಯ Sanchi Foundation ಕೆಲಸಗಳನ್ನು ಸ್ವಂತಕ್ಕೆ ಬಳಸಿ ನೋಡಿ, ‍ಬೇರೆಯವರಿಗೆ ಮೂ‍ಲ ‍ಕೊಂಡಿಯೊಂ‍ದಿಗೆ ಹಂ‍ಚಿ ಖುಷಿಪಡಿ. ಬೆಂಬ‍ಲಿಸಿ ‍#KittleKosha #SearchInKittleKosha #ServantsOfKnowledge #ಕಿಟ್ಟಲ್ಕೋಶ ‍#kannada #digitization...

ಗೌರೀಶ್ ಕಾಯ್ಕಿಣಿ ಸಂಚಯ

ಗೌರೀಶ್ ಕಾಯ್ಕಿಣಿ ಸಂಚಯ

‍ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, "ಬೆಳಕು", "ಜನಸೇವಕ" ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ ಫೌಂಡೇಶನ್ ‍®‍ ಹಾಗೂ ಸಂಚಯದ,...

ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ

ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ

‍ ಕನ್ನಡದ ಪ್ರಸಿದ್ಧ ‍ಲೇಖಕ‍, ವಿಮರ್ಶಕ, ಪ್ರಭಂದಕಾರ, ‍‍ಅಧ್ಯಾಪಕರೂ‍ ಆಗಿದ್ದ ‍ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ‍ ಅವರ ಕುಟುಂಬದವರು ಬಿಡುಗಡೆ‍ಗೊಳಿಸಿದ್ದಾರೆ. ಸಂಚಿ ‍ಹಾಗೂ ಸಂಚಯ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ್ದಕ್ಕೆ ಅವರಿಗೆ ಹೃತ್ಪೂರ್ವಕ ‍ಧನ್ಯವಾದಗಳು. ಅವ‍ರ ಸಮಗ್ರ...

ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ

ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ

‍ಕುಡ್ಪಿ ವಾಸುದೇವ ಶೆಣೈ ಅವರ ಪ್ರಭಾತ್ ಪ್ರಿಂಟರ್ಸ್ ಮೂಲಕ ಪ್ರಕಟಣೆಗೊಳ್ಳುತ್ತಿದ್ದ, ಒಂದಾಣೆ ಮಾಲೆಯ ೨೨೦ಕ್ಕೂ ಹೆಚ್ಚು ‍‍ ಪುಸ್ತಕಗಳನ್ನು ‍ಅವರ ಸುಪುತ್ರ ಕುಡ್ಪಿ ರಾಜ್ (ಕುಡ್ಪಿ ರಜನೀಕಾಂತ ಶೆಣೈ) @Kudpi Raj - ಸಂಚಯದ ಕನ್ನಡ ಪುಸ್ತಕ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಿಸಲು ಸಹಕರಿಸಿದ್ದಾರೆ. ಈ ಪುಸ್ತಕಗಳನ್ನು ಈಗ...

Year 2020 for Kannada Digitization

(Initial Draft for 2020) Year 2020 for Kannada Digitization has been really great irrespective of the pandemic that grounded many of us across the globe. At Sanchaya we were able to take up the most awaited digitisation projects that were lined up since Jan 2020.     ...

ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ

ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ

ಕನ್ನಡದ ಪುಸ್ತಕಗಳ ಡಿಜಿಟಲ್ ಸಂಚಯದ ಜೊತೆಗೆ‍, ಇಂಟರ್ನೆಟ್ ಆರ್ಕೈವ್‌ನಲ್ಲಿದ್ದ ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ.‍.. ನಿಮಗೆ ಖುಷಿಯಾಗುವಷ್ಟು ಹಂಚಿಕೊಳ್ಳಿ. ಕೊಂಕಣಿ ಸಂಚಯ - https://konkani.sanchaya.net‍ ತುಳು ಸಂಚಯ -...

ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

‍ ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ‍ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ. ‌#kannada #digitization #books #apmalathi ಪುಸ್ತಕಗಳ ಕೊಂಡಿ: ...

ನಗುವ ನಂದ – ೧೯೫೦ರ ದಶಕದ ಬಿ. ರಂಗನಾಥರಾವ್ ಸಂಪಾದಕತ್ವದ ವಾರ ಪತ್ರಿಕೆ

ನಗುವ ನಂದ – ೧೯೫೦ರ ದಶಕದ ಬಿ. ರಂಗನಾಥರಾವ್ ಸಂಪಾದಕತ್ವದ ವಾರ ಪತ್ರಿಕೆ

೧೯೫೦ರ ದಶಕದಲ್ಲಿ ಬಿ. ರಂಗನಾಥರಾವ್ ಸಂಪಾದಕತ್ವದಲ್ಲಿ, ಸುಭೋಧ ಪ್ರಕಟಣಾಲಯದ ಮೂಲಕ ಪ್ರಕಟಗೊಳ್ಳುತ್ತಿದ್ದ ವಾರಪತ್ರಿಕೆ ನಗುವ ನಂದ ಈಗ ಡಿಜಿಟಲ್ ರೂಪದಲ್ಲಿ. #kannada #digitization #kannadaweeklyಇಲ್ಲ್ಲಿಓದಿ: ಬಿ. ರಂಗನಾಥರಾವ್ ಅವರ ಕುಟುಂಬಕ್ಕೂ, ಛಾಯ ಉಪಾಧ್ಯಾ ಅವರಿಗೆ ಈ ಕೆಲಸ ಸಾಧ್ಯವಾಗಿಸಿದ್ದಕ್ಕೆ...

ಸಂವಾದ ಪತ್ರಿಕೆ – ಈಗ ಡಿಜಿಟಲ್ ರೂಪದಲ್ಲಿ

ಸಂವಾದ ಪತ್ರಿಕೆ – ಈಗ ಡಿಜಿಟಲ್ ರೂಪದಲ್ಲಿ

‘ಸಂವಾದ’ ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ. ಈ ಕಾರ್ಯ ನಿರಂತರ - ನಿಮ್ಮ ಬೆಂಬಲ ಸಹಕಾರವೂ ನಿರಂತರವಾಗಿರಲಿ. ಸಂವಾದ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ರಾಘವೇಂದ್ರ ಪಾಟೀಲರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ Kuntady Nithesh (ಕುಂಟಾಡಿ ನಿತೇಶ್)‌ ‌ ಅವರಿಗೂ ವಿಶೇಷ ಧನ್ಯವಾದಗಳು. ಸಂವಾದ...

ಸಂಚಯ – ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ

ಸಂಚಯ – ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ

ಸಂಚಯ - ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ - ನಮ್ಮ ಸಂಚಯದ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಣಗೊಳ್ಳುತ್ತಿದೆ. ಈ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ಡಿ. ವಿ. ಪ್ರಹ್ಲಾದ್ ಅವರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ ಕುಂಟಾಡಿ ನಿತೇಶ್‌ ಅವರಿಗೂ ಧನ್ಯವಾದಗಳು. ಕನ್ನಡ...

ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲೀಕರಣ

ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲೀಕರಣ

ಉತ್ತರ ಕನ್ನಡದ ಚಿಂತಕ, ಸಾಹಿತಿ, ಚಳುವಳಿಗಾರ ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲ್ ರೂಪ ಈಗ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯ. ಇವುಗಳನ್ನು ಡಿಜಿಟಲೀಕರಣಕ್ಕೆ ಒದಗಿಸಿದ ಶ್ರೀ ವಿಠಲ್ ಭಂಡಾರಿಯವರಿಗೆ ಧನ್ಯವಾದಗಳು. ಡಾ. ಆರ್.ವಿ.ಭಂಡಾರಿಯವರ ಕೃತಿಗಳನ್ನು ಇಲ್ಲಿ...

Thank you Nagarathna memorial grant 2019

Thank you Nagarathna memorial grant 2019

Nagarathna Memorial Grant helped us drive the Kannada Books digitisation project in multiple ways for which we are very thankful to Shri Thejesh GN. Here is how we are utilising the fund to make it fruitful for kannadiga's Broad Classification The funds are mainly...

ಸಿದ್ಧಗಂಗಾ ತ್ರೈಮಾಸಿಕದ ಡಿಜಿಟಲೀಕರಣ

ಸಿದ್ಧಗಂಗಾ ತ್ರೈಮಾಸಿಕದ ಡಿಜಿಟಲೀಕರಣ

ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ....

ನೀವೂ ಈ ಕೆಲಸದಲ್ಲಿ ಭಾಗಿಯಾಗಬಹುದು

ಸಾಮಾನ್ಯರು, ವಿದ್ಯಾರ್ಥಿಗಳು, ಶಿಕ್ಷಕರು‍, ಗ್ರಂಥಪಾಲಕರು, ಲೇಖಕ/ಕಿ ಯರು, ಪ್ರಕಾಶಕರು, ಶಿಕ್ಷಣ ಸಂಸ್ಥೆಗಳು, ಇತರ ಸಂ‍ಘ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಕೂಡ ಈ ಮಹತ್ತರ ಕಾರ್ಯದಲ್ಲಿ ತಮ್ಮದೇ ಕೊಡುಗೆ ನೀಡಬಹುದಾಗಿದೆ...

ನಮ್ಮನ್ನು ಸಂಪರ್ಕಿಸಿ

11 + 9 =

ನೀವೂ ನಮ್ಮೊಡನೆ ‍ಜೊತೆಯಾಗಿ...

ನಿಮ್ಮಲ್ಲಿ ಲಭ್ಯವಿರುವ ಹಳೆಯ ಅಮೂಲ್ಯ ಪುಸ್ತಕಗಳನ್ನು ನಮಗೆ ಒದಗಿಸಬಹುದು. ಜೊತೆಗೆ ಸ್ಕ್ಯಾನಿಂಗ್ ಹಾಗೂ ಇತ್ಯಾದಿಗಳಲ್ಲಿ ಶ್ರಮದಾನವನ್ನು ಮಾಡಲೂ ಮುಂದಾಗಬಹುದು. ಸಂಚಿ ಫೌಂಡೇಷನ್‌ ಮೂಲಕ ಧನ ಸಹಾಯದ ಮೂಲಕವೂ ನಮ್ಮ ಈ ಕಾರ್ಯದಲ್ಲಿ ನೀವು ಭಾಗಿಗಳಾಗಬಹುದು.

ನಮ್ಮನ್ನು ಬೆಂಬಲಿಸಿಸಂಪರ್ಕಿಸಿ