ವಚನ ಸಂಚಯ

ವಚನ ಸಾ‍ಹಿತ್ಯ ಸಂಶೋಧನೆ ಮತ್ತು ಅಧ್ಯಯ‍ನ ತಾಣ

ಈ ವಚನ ಸಂಗ್ರಹದಲ್ಲಿ 218 ಪುರುಷ ವಚನಕಾರರು, 31 ಸ್ತ್ರೀ ವಚನಕಾರ್ತಿಯರೂ ಒಳಗೊಂಡಂತೆ ಒಟ್ಟು 249 ವಚನಕಾರರ, 20929 ಹೆಚ್ಚು ವಚನಗಳಿವೆ.
ವಚನಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 209876 ಕೂ ಹೆಚ್ಚು. ಈ ತಂತ್ರಾಂಶ ವಚನದಲ್ಲಿನ ಪದಗಳನ್ನು ಆಯಾ ವಚನ ಮತ್ತು ವಚನಕಾರರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.‍‍‍‍

ಜಾಲತಾಣಕ್ಕೆ ಭೇಟಿ ಕೊಡಿಯೋಜನೆಗೆ ಬೆಂಬಲ ನೀಡಿ

ಯೋಜನೆಯ ಸವಾಲು

‍ವಚನ ಸಾಹಿತ್ಯವನ್ನು ಅಧ್ಯಯನ ಮಾಡಲು ತಂತ್ರಜ್ಞಾನದ ನೆರವು ಅಗತ್ಯವಿದ್ದುದನ್ನು, ನಮ್ಮ ತಂಡ ೨೦೧೨-೧೩ರ ಆಸುಪಾಸಿನಲ್ಲಿ ಶ್ರೀ ಓ.ಎಲ್. ನಾಗಭೂಷಣ ಸ್ವಾಮಿ ಹಾಗೂ ಶ್ರೀ ವಸುದೇಂದ್ರರಿಂದ ಆರಿಯಿತು. ವಚನಗಳನ್ನು ಅಗತ್ಯ ಶಿಷ್ಟತೆಗಳನ್ನು(standards) ಬಳಸಿ ಡಿಜಿಟಲೀಕರಿಸುವ ಜೊತೆಗೆ ಸಾಮಾನ್ಯರಿಂದ ಹಿಡಿದು, ಭಾಷಾಸಂಶೋಧಕರೂ ಉಪಯೋಗಿಸಬಲ್ಲ ವೇದಿಕೆಯ ಸೃಷ್ಟಿ ಸಂಚಯದ ಎದುರಿಗಿದ್ದ ಸವಾಲು. ಈಗಾಗಲೇ ಡಿಜಿಟಲೀಕರಿಸಿದ್ದ ಮಾಹಿತಿ ಯುನಿಕೋಡ್‌ನಲ್ಲಿ ಇಲ್ಲದಿದ್ದದ್ದು, ಅವುಗಳ ಫಾಂಟ್ ಲಭ್ಯತೆ ದುರ್ಲಭವಾದದ್ದು, ಮಾಹಿತಿಯ ನಿಖರತೆಯನ್ನು ಖಚಿತ ಪಡಿಸಿಕೊಳ್ಳುವ ಮೂಲಗಳು ಹೀಗೆ ಮತ್ತಷ್ಟು ತಾಂತ್ರಿಕ ತೊಂದರೆಗಳೂ ನಮ್ಮ ಎದುರಿಗಿದ್ದವು. 

ಪರಿಹಾರ

‍ಮೊದಲ ಹಂತವಾಗಿ ಸಮಗ್ರ ವಚನ ಸಂಪುಟಗಳ ೧೫ ಸಂಪುಗಳನ್ನು ಯುನಿಕೋಡ್‌‍‌ಗೆ ಪರಿವರ್ತಿಸಲಾಯಿತು. ಎರಡನೆ ಹಂತದಲ್ಲಿ, ವಚನಗಳ ಲಭ್ಯತೆ ಸಾಧ್ಯವಾಗಿಸುವ ಜಾಲತಾಣ https://vachana.sanchaya.net ಅ‌‍ಭಿವೃ‍‍‍ದ್ಧಿ ಪ‍‍ಡಿಸಲಾಯಿತು. ತಾಣವು ‍ವಚನ‍ಗ‍ಳ ಹು‍ಡುಕಾ‍ಟದ‍ ಜೊತೆಗೆ‍‍, ಸಂಶೋಧನೆ ಸರಳಗೊಳಿಸುವ ಕನ್‌ಕಾರ್ಡೆನ್ಸ್ (ಅಕಾರಾದಿ ಹುಡುಕು), ಸರಳವಾದ ನಕ್ಷೆ, ಹುಡುಕನ್ನು ಸಾಲುಗಳಲ್ಲಿ ಎತ್ತಿಹಿಡಿಯುವ ವ್ಯವಸ್ಥೆ (ಹೈಲೈಟ್), ಪದವನ್ನು ವಚನಕಾರರು ಎಷ್ಟು ವಚನಗಳಲ್ಲಿ, ಎಷ್ಟು ಭಾರಿ ಬಳಸಿದ್ದಾರೆ ಎನ್ನುವ ಮಾಹಿತಿ, ಪದಕೋಶ ಇತ್ಯಾದಿಗಳನ್ನು ಒಳಗೊಂಡಿ‍‍ದೆ‍‍‍‍. ಇತ್ತೀಚೆಗೆ ಟಿಪ್ಪಣಿ ವ್ಯವಸ್ಥೆ (Annotation) ಕೂಡ ಲಭ್ಯವಾಗಿಸಲಾಗಿದೆ.‍‍‍‍

ಒಟ್ಟು ‍ಸಂಪುಟಗಳು

‍ಒಟ್ಟು ವಚನಗಳು

ಪುರುಷ ವಚನಕಾರ‍ರು

ಸ್ತ್ರೀ ವಚನಕಾರರು

ಭಾಷಾ ಸಂಶೋಧನೆ – ನಿಮ್ಮ ಅಂಗೈಯಲ್ಲಿ

ಮೊಬೈಲ್‌ ಮೂಲಕವೂ ಸಾಧ್ಯ

ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ವಚನ ಸಾಹಿತ್ಯದ ಅಧ್ಯಯನ ಸಾಮಾನ್ಯರಿಂದ ಸಂಶೋಧಕರವರೆಗೂ ಎಲ್ಲರಿಗೂ ಲಭ್ಯ. 

ಹೊಸ ಸಾಧ್ಯತೆಗಳ ಪರಿಚಯ

ಭಾಷಾ ಸಂಶೋಧನೆಗೆ ತಂತ್ರಜ್ಞಾನದ ಹೊದಿಕೆ ಹೊಸ ಸಾಧ್ಯತೆಗಳನ್ನು ಬೆಳಕಿಗೆ ತರುತ್ತದೆ. ವಚನ ಸಂಚಯ ಈ ನಿಟ್ಟಿನಲ್ಲಿ ಅಂತಹ ಮೊದಲ ಪ್ರಯತ್ನ. ಡಿಜಿಟೈಸೇಷನ್ ಜೊತೆಗೆ ಸಂಶೋಧನೆಯಲ್ಲಿ ವಿಜುಅಲೈಸೇಷನ್ ಹಾಗೂ ಅಂಕಿಅಂಶಗಳ ಮಾಹಿತಿ, ಸಮುದಾಯ ಸಹಭಾಗಿತ್ವದ ಸಾಧ್ಯತೆಗಳನ್ನು ಇಲ್ಲಿ ಸಾಧ್ಯವಾಗಿಸಲಾಗಿದೆ.‍ ‍

‍ಅಂಕಿಅಂಶಗಳ ಜೊತೆಗೆ ಗಡಿದಾಟಿದ ಸಾಹಿತ್ಯ

ವಚನ ಸಂಚಯ ವಚನಗಳನ್ನು ಸಾವಿರಾರು ಆಸಕ್ತರಿಗೆ ವಿಶ್ವದಾದ್ಯಂತ ತಲುಪಿಸುತ್ತಿದ್ದೆ. ಇದರ ಜೊತೆಗೆ ಕನ್ನಡದ ಇತರೆ ಸಾಹಿತ್ಯವನ್ನು, ಸಾಹಿತ್ಯ ಪ್ರಕಾರವನ್ನೂ ಕನ್ನಡಿಗರಿಗೆ ತಲುಪಿಸಲು ನಮಗೆ ಪ್ರೇರಣೆಯಾಗಿದೆ. ಸಂಚಯದ ಇತರೆ ಯೋಜನೆಗಳು ಇದಕ್ಕೆ ಸಾಕ್ಷಿ. 

ಇದುವರೆಗೆ ವಚನ ಸಂಚಯ ಸಾಧ್ಯವಾ‍ಗಿಸಿರುವ ಒಟ್ಟು ಪದಗಳ ಹುಡುಕುಗಳು‍.

ಯೋಜನೆಗೆ ಸಂಬಂಧಿಸಿದ ಲೇಖನಗಳು

‍ಯೋಜನೆಯ ಮಾಹಿತಿ, ತಂತ್ರಜ್ಞಾನ, ಸಮುದಾಯ ಸಹಭಾಗಿತ್ವ ಇತ್ಯಾದಿಗಳ ಬಗ್ಗೆ, ಸುದ್ಧಿ ಮೂಲಗಳಲ್ಲಿ ವಚನ ಸಂಚಯದ ಬಗ್ಗೆ ಬಂದ ಲೇಖನಗಳ ಗುಚ್ಛ...

No Results Found

The page you requested could not be found. Try refining your search, or use the navigation above to locate the post.

ನಮ್ಮ ಯೋಜನೆಗಳಲ್ಲಿ ಭಾಗಿಯಾಗುವುದಕ್ಕೆ‍ ಇಚ್ಛೆ ಇದೆಯೇ?‍

ನಮ್ಮ ಯೋಜನೆಗಳು ನಿಮಗೆ ಪ್ರಯೋಜನಕಾರಿ ಆಗಿದ್ದಲ್ಲಿ, ನಮ್ಮನ್ನು ಬೆಂಬಲಿಸಿ