ಸೆರೆಂಡಿಪಿಟಿ

ಡಾ. ಕಿರಣ್ ವಿ. ಎಸ್ ತಮ್ಮ ವೈದ್ಯಲೋಕದ ಅದ್ಭುತ ಆಕಸ್ಮಿಕಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ವಿಶಿಷ್ಠ ಪುಸ್ತಕ “ಸೆರೆಂಡಿಪಿಟಿ”ದ ಲಾಭಾಂಶವನ್ನು ‍ಸಂಚಿ ಫೌಂಡೇಷನ್, ಬೆಂಗಳೂರು ಹಾಗೂ ಸಂಚಯ ದ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆಗೆ ಕೊಡುಗೆಯಾಗಿ ನೀಡಿದ್ದರು. ಈ ಪುಸ್ತಕಕ್ಕೆ ಈಗ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ‍ವೈದ್ಯಕೀಯ ವಿಭಾಗದ ಪ್ರಶಸ್ತಿಯ ಗರಿ. ಇದನ್ನು ಸಂಭ್ರಮಿಸುವ ಸಲುವಾಗಿ ಸಂಚಿ, ಈ ಪುಸ್ತಕವನ್ನು ನಿಮ್ಮಿಷ್ಟದ ಶಾಲೆ/ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಲು ರಿಯಾಯಿತಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ‍ ನೀವು ನಿರ್ಧರಿಸಿದ ವಿಳಾಸಕ್ಕೆ ಉಚಿತವಾಗಿ ತಲುಪಿಸುವ ವ್ಯವಸ್ಥೆಯನ್ನೂ ಮಾಡುತ್ತಿದೆ.

ಸಂಚಿ ಹಾಗೂ ಸಂಚಯದ ಕನ್ನಡ ಭಾಷಾ ತಂತ್ರಜ್ಞಾನ ಹಾಗೂ ಡಿಜಿಟಲೀಕರಣದ ಕೆಲಸಗಳಿಗೆ ನೀವು ಈ ಮೂಲಕ ದೇಣಿಗೆಯನ್ನೂ ನೀಡಿದಂತಾಗುತ್ತದೆ. ನಿಮ್ಮಿಚ್ಛೆಯ ಹೆಚ್ಚಿಗಿನ ಹಣವನ್ನೂ ದೇಣಿಗೆಯಾಗಿ ನೀಡಬಹುದು. ‍

ಸಂಚಿ ಫೌಂಡೇಶನ್ ® ಗೆ ನೀಡುವ ಎಲ್ಲಾ ದೇಣಿಗೆಗಳು 80 ಜಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ.

ನಮ್ಮ ಪುಸ್ತಕಗಳ ಡಿಜಿಟಲೀಕರಣ ಯೋಜನೆಯ ಬಗ್ಗೆ ತಿಳಿಯಲು:

  • ‍https://sanchaya.org/project/kannada-digitization-project

ಸಂಚಿ ಫೌಂಡೇಷನ್ ನ  ಇತರೆ ಯೋಜನೆಗಳ ಬಗ್ಗೆ ತಿಳಿಯಲು:

ಸೂಚನೆ: ಈ ಪುಸ್ತಕ ಅಭಿಯಾನದ ಅಡಿ ನೀಡಲಾಗುತ್ತಿರುವ ಪುಸ್ತಕಗಳ ಸಂಖ್ಯೆ ಕಡಿಮೆ ಇದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ಸಹಕರಿಸುವವರು ನಮಗೆ ಒಂದು ಮಿಂಚೆಯನ್ನು ಕಳುಹಿಸಬಹುದು.