ಪುಸ್ತಕಗಳ ಡಿಜಿಟಲೀಕರಣ ಯೋಜನೆ

‍‍ಕನ್ನಡದ ಅಮೂಲ್ಯ ಪುಸ್ತಕಗಳನ್ನು, ಕಾಪಿರೈಟ್ ಮುಕ್ತ ಪುಸ್ತಕಗಳನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ಮೂಲಕ ಲಭ್ಯವಾಗಿರಿಸಲು ‘ಜ್ಞಾನದ ಸೇವಕರು’ (Servants Of Knowledge) ಸಮುದಾಯ ಯೋಜನೆಯ ಅಡಿಯಲ್ಲಿ ಸಂಚಯ ತೊಡಗಿಕೊಂಡಿದೆ. ಸಂಚಿ ಫೌಂಡೇಷನ್ ಎಂದಿನಂತೆ ಈ ಕಾರ್ಯದ ಬೆನ್ನೆಲುಬಾಗಿ ನಿಂತಿದೆ.

 

ಈ ಯೋಜನೆ ಅಡಿ ಲಭ್ಯವಾಗಿರುವ ಪುಸ್ತಕಗಳನ್ನು ಸುಲಭವಾಗಿ ಪಡೆಯಲು ನಮ್ಮ ಪುಸ್ತಕ ಸಂಚಯ ಯೋಜನೆ ಹಾಗೂ ಡಿಜಿಟಲ್ ಸಂಚಯ ಕೊಂಡಿಗಳನ್ನು ನೋಡಬಹುದು.

‍https://pustaka.sanchaya.net & https://digital.sanchaya.net

ಬೆಂಬಲಿಸಿಸಂಪರ್ಕಿಸಿ‍

ಯೋಜನೆಯ ಹಿನ್ನೆಲೆ

‍‍‍‍ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌, ಬೆಂಗಳೂರಿ‍ನಲ್ಲಿ ಕಾರ್ಲ್ ಮಲಮದ್ ಎಂಬ ಅಮೇರಿಕಾದ ತಂತ್ರಜ್ಞ, ಲೇಖಕ, ಸಾರ್ವಜನಿಕ ಸ್ವತ್ತಿನ ವಕೀಲ (Public Domain Advocate) , ಇಂಟರ್ನ್ನೆಟ್ ಆರ್ಕ್ಕೈವ್‌ನ ಟಿ.ಟಿ.ಸ್ಕ್ರೈಬ್ ‍ಸ್ಕ್ಯಾನರ್ ಅ‍ನ್ನು ಲಭ್ಯವಾಗಿಸಿದ್ದರು. ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ಸಾರ್ವಜನಿಕಗೊಳಿಸುವುದು ಇದರ ಉದ್ದೇಶವಾಗಿತ್ತು. ಕನ್ನಡಿಗರಿಗೆ ಕಾಪಿರೈಟ್ ಹೊರತಾದ, ಅಮೂಲ್ಯ ಪುಸ್ತಕಗಳನ್ನು ಲಭ್ಯವಾಗಿಸಿಕೊಳ್ಳಲು ಸಮುದಾಯ ಸಂಘಟನೆಯ ಮೂಲಕ ಈ ಸ್ಕ್ಯಾನರ್ ಬಳಸಬಹುದೇ ಎಂದು ವಿಚಾರಿಸಿದಾಗ ಹಾಗೂ ಸ್ಕ್ಯಾನರ್‌ನ ಬಳಕೆಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಂಡಾಗ, ಈ ಕಾರ್ಯವನ್ನು ಸಂಚಯ ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯ ಎಂದು ತಿಳಿದುಬಂತು. ಕಾರ್ಲ್ ಇದನ್ನು ಐ.ಎ.ಎಸ್ಸಿ ಮುಂದಿಟ್ಟಾಗ ಆಕಾಡೆಮಿಯೂ ಇದಕ್ಕೆ ಒಪ್ಪಿಗೆ ಸೂಚಿಸಿತು. ಇದರ ಫಲವಾಗಿ ಐ.ಎ.ಎಸ್ಸಿಯ ಸ್ಕ್ಯಾನರ್ ಅನ್ನು ಏಪ್ರಿಲ್ ೨೦೧೯ರಿಂದ ನಾವು ನಿರ್ವಹಿಸುತ್ತಾ ಬಂದಿದ್ದೇವೆ. ಕನ್ನಡ, ಇಂಗ್ಲೀಷ್, ಮಲಯಾಳಂ, ಸಿಂದಿ ಹೀಗೆ ಸಮುದಾಯ ಹಾಗೂ ಇತರೆ ಸಂಸ್ಥೆಗಳು ಒದಗಿಸಿದ ೩೦೦೦ಕ್ಕೂ ಹೆಚ್ಚು ಪುಸ್ತಕಗಳನ್ನು, ೫.೫ ಲಕ್ಷ ಪುಟಗಳನ್ನು ಇದುವರೆಗೆ ಸ್ಕ್ಯಾನ್ ಮಾಡಿರುತ್ತೇವೆ. ಈ ಕಾರ್ಯವನ್ನು ಮುನ್ನೆಡೆಸಲು ಅಕಾಡೆಮಿಯ ಜೊತೆಗೆ ಇತರೆ ವಿಶ್ವವಿದ್ಯಾನಿಲಯಗಳು, ಸಂಘಸಂಸ್ಥೆಗಳ ಜೊತೆಗೆ ಮುನ್ನೆಡೆಸುವ ಆಶ‍ಯವನ್ನು ಸಂಚಯ ಹೊಂದಿದೆ.

‍ಈ ಯೋಜನೆ ಮುಂದುವರೆಸಲು ಪುಸ್ತಕಗಳು, ಸ್ಕ್ಯಾನಿಂಗ್‌ ಮಾಡಲು, ನಿರ್ವಹಣೆ ಇತ್ಯಾದಿಗಳಿಗೆ ಮಾನವ ಸಂಪನ್ಮೂಲಗಳ ಜೊತೆಗೆ ಬೇಕಿರುವ ಸಾಂಸ್ಥಿಕ ಬೆಂಬಲವನ್ನು ಸಂಚಿ ಫೌಂಡೇಷನ್ ಒದಗಿಸುತ್ತಿದೆ.

ಈ ಯೋಜನೆಯಲ್ಲಿ ಡಿಜಿಟೈಜ್‌ಗೊಳ್ಳುವ ಎಲ್ಲ ಪುಸ್ತಕಗಳು  https://archive.org ‍ ನಲ್ಲಿ ಲಭ್ಯವಾಗಿಸಲ್ಪಡುತ್ತವೆ. ಜೊತೆಗೆ ಕನ್ನಡ ಪುಸ್ತಕಗಳನ್ನು ಎಂದಿನಂತೆ ಪುಸ್ತಕ ಸಂಚಯದ ಮೂಲಕವೂ ಹುಡುಕಿ ಪಡೆಯುವಂತೆ ಮಾಡಲಾಗುತ್ತದೆ.

ನಮ್ಮ ಈ ಯೋಜನೆಯ ಪ್ರಾರಂಭಕ್ಕೆ ಕಾರಣವಾದ ಸಂಸ್ಥೆಗಳನ್ನು ಈ ಕೆಳಗೆ ಸ್ಮರಿಸುತ್ತಿದ್ದೇವೆ

Carl Malamud & public.resource.org

ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್, ಸೇವೆಗಳು ಮತ್ತು ಈ ಅವಕಾಶವನ್ನು ಒದಗಿಸಿದ್ದಕ್ಕೆ ಹಾಗೂ ಒಟ್ಟಾರೆ ಜ್ಞಾನದ ಸೇವಕರು – ಸಮುದಾಯದ ಮೂಲಕ ಭಾರತದ ಸಾರ್ವಜನಿಕ ಗ್ರಂಥಾಲಯದ ಕನಸನ್ನು ನನಸಾಗಿಸುತ್ತಿರುವುದಕ್ಕೆ.

ಇಂಟರ್ನೆಟ್ ಆರ್ಕೈವ್

ಟಿ.ಟಿ. ಸ್ಕ್ರೈಬ್ (ಮೇಲಿನ ಚಿತ್ರದಲ್ಲಿರುವುದು) ನಂತಹ ಸ್ಕ್ಯಾನರ್ ಹಾಗೂ ಡಿಜಿಟಲೀಕರಣಕ್ಕೆ ಅವಶ್ಯ ತಂತ್ರಾಂಶ, ಕೆಲಸದ ಹರಿವು ಹಾಗೂ ‍ಶಿಷ್ಠತೆಗಳನ್ನು, ಸಮುದಾಯದ ಸಹಾಯವನ್ನು ಒದಗಿಸುತ್ತಿರುವುದಕ್ಕೆ. ಈ ಎಲ್ಲ ಕೆಲಸಗಳ ಇಂಟರ್ನೆಟ್ ಮೂಲವಾಗಿರುವುದಕ್ಕೆ.

 

 

ಸಂಚಿ ಫೌಂಡೇಷನ್, ಬೆಂಗಳೂರು

ಸಂಚಯದ ಎಲ್ಲ ಯೋಜನೆಗಳಿಗೆ ಬೆಂಬಲವಾಗಿ, ಅವಶ್ಯ  ಸಾಂಸ್ಥಿಕ ಶಕ್ತಿ, ನಿರ್ವಹಣೆ ಹಾಗೂ ಇತರೆ ಸಾಂಸ್ಥಿಕ ಒಪ್ಪಂದಗಳಿಗೆ ಕಾರಣವಾಗುತ್ತಿ‍ರುವುದಕ್ಕೆ.

ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್

ಡಿಜಿಟೈಜೇಷನ್ ಕಾರ್ಯಕ್ಕೆ ಅವಶ್ಯಕವಾದ ನೆಲೆಯಾಗಿದ್ದು, ಅದಕ್ಕೆ ಬೇಕಿರುವ ಪೂರಕ ಸಾಂಸ್ಥಿಕ ಬೆಂಬಲ, ನೆರವು ಹಾಗೂ ಸಮುದಾಯ ಕಾರ್ಯಕ್ಕೆ ಸಹಕರಿಸುತ್ತಿರುವುದಕ್ಕೆ.

೨೦೧೯ರ ಯೋಜನೆಗೆ ಮತ್ತಷ್ಟು ಶಕ್ತಿ ಒದಗಿಸಿದವರು

ಪುಸ್ತಕ ಸಂಚಯ ಯೋಜನೆಯ ಮುಂದುವರೆದ ಈ ಯೋಜನೆಯನ್ನು ೨೦೧೯ರ ಅನುದಾನಕ್ಕೆ ಆಯ್ಕೆ ಮಾಡಿದ್ದಕ್ಕೆ – ತೇಜೇಶ್ ಜಿ.ಎನ್ ಅವರಿಗೆ ಧನ್ಯವಾದಗಳು.

‍ಈ ಅನುದಾನವನ್ನು – ಹಳೆಯ ಪುಸ್ತಕಗಳನ್ನು ಹುಡುಕಲು, ಕೊಳ್ಳಲು, ನಿರ್ವಹಣೆಯ ಕಾರ್ಯಗಳು ಇತ್ಯಾದಿಗಳಿಗೆ ಉತ್ತಮ ರೀತಿಯಲ್ಲಿ ಬಳಸಲು ಸಂಚಯ ಯೋಜಿಸಿದೆ.

ಈ ಕಾರ್ಯಕ್ಕೆ ಮೊದಲಿಗೆ ಪುಸ್ತಕಗಳನ್ನು ಒದಗಿಸಿ ಬೆಂಬಲ ಸೂಚಿಸಿದವರು

ಜೊತೆಗೆ, 

  1. ಶ್ರೀ. ಅಶೋಕವರ್ಧನ
  2. ‍ಶ್ರೀ. ಕೊಳ್ಳೆಗಾಲ ಶರ್ಮ
  3. ಡಾ.‍ ವೈ. ಸಿ. ಕಮಲ
  4. ‍ಶ್ರೀ. ಓ.ಎಲ್. ನಾಗಭೂಷಣ ಸ್ವಾಮಿ
  5.  ಡಾ. ಶಶಿಕಲ. ಬೆಂಗಳೂರು ವಿ.ವಿ
  6. ಶ್ರೀಮತಿ ಛಾಯಾ ಉಪಾಧ್ಯಾಯ
  7. ‍ಶ್ರೀಮತಿ ಹೇಮಾ ಹೆಬ್ಬುಗೋಡಿ
  8. ‍ಶ್ರೀ ರಾಜೇಂದ್ರ ಪ್ರಸಾದ್
ಈ ಪಟ್ಟಿ ಬೆಳೆಯುತ್ತಲಿದ್ದು - ಪೂರ್ಣಪಟ್ಟಿಯನ್ನು ಯೋಜನೆಯ ಪುಟದಲ್ಲಿ ಧನ್ಯವಾದಗಳೊಂದಿಗೆ ಪ್ರಕಟಿಸಲಾಗುವುದು.

ಇದುವರೆಗಿನ ಡಿಜಿಟೈಜೇಷನ್‌ ಕಾರ್ಯದ ಅಂಕಿಅಂಶಗಳು

ತಿಂಗಳುಗಳು

ಪುಸ್ತಕಗಳು

ಕನ್ನಡ ಪುಸ್ತಕಗಳು

ಲಕ್ಷ ಪುಟಗಳು

ಡಿಜಿಟೈಜೇಷನ್‌ನ ಬ್ಲಾಗ್‌ ಪುಟಗಳು

‍ನಮ್ಮ ಯೋಜನೆಯ ಫಲಶೃತಿಗಳ ಬಗ್ಗೆ ಆಗ್ಗಾಗ್ಗೆ ನಿಮಗೆ ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತೇವೆ. ಜೊತೆಗೆ ನಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಸಾಮಾಜಿಕ ತಾಣಗಳನ್ನೂ ನೋಡುತ್ತಿರಿ.

No Results Found

The page you requested could not be found. Try refining your search, or use the navigation above to locate the post.

ನೀವೂ ಈ ಕೆಲಸದಲ್ಲಿ ಭಾಗಿಯಾಗಬಹುದು

ಸಾಮಾನ್ಯರು, ವಿದ್ಯಾರ್ಥಿಗಳು, ಶಿಕ್ಷಕರು‍, ಗ್ರಂಥಪಾಲಕರು, ಲೇಖಕ/ಕಿ ಯರು, ಪ್ರಕಾಶಕರು, ಶಿಕ್ಷಣ ಸಂಸ್ಥೆಗಳು, ಇತರ ಸಂ‍ಘ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಕೂಡ ಈ ಮಹತ್ತರ ಕಾರ್ಯದಲ್ಲಿ ತಮ್ಮದೇ ಕೊಡುಗೆ ನೀಡಬಹುದಾಗಿದೆ...

ನಮ್ಮನ್ನು ಸಂಪರ್ಕಿಸಿ

15 + 15 =

ನೀವೂ ನಮ್ಮೊಡನೆ ‍ಜೊತೆಯಾಗಿ...

ನಿಮ್ಮಲ್ಲಿ ಲಭ್ಯವಿರುವ ಹಳೆಯ ಅಮೂಲ್ಯ ಪುಸ್ತಕಗಳನ್ನು ನಮಗೆ ಒದಗಿಸಬಹುದು. ಜೊತೆಗೆ ಸ್ಕ್ಯಾನಿಂಗ್ ಹಾಗೂ ಇತ್ಯಾದಿಗಳಲ್ಲಿ ಶ್ರಮದಾನವನ್ನು ಮಾಡಲೂ ಮುಂದಾಗಬಹುದು. ಸಂಚಿ ಫೌಂಡೇಷನ್‌ ಮೂಲಕ ಧನ ಸಹಾಯದ ಮೂಲಕವೂ ನಮ್ಮ ಈ ಕಾರ್ಯದಲ್ಲಿ ನೀವು ಭಾಗಿಗಳಾಗಬಹುದು.

ನಮ್ಮನ್ನು ಬೆಂಬಲಿಸಿಸಂಪರ್ಕಿಸಿ