ಸಂಚಯದ ಅಡಿಯ ಕಾರ್ಯಕ್ರಮಗಳನ್ನು ವಿಂಗಡಿಸುವಾಗ, ‘ಅರಿವಿನ ಅಲೆಗಳು‘ ತಾಣವು, ಎಲ್ಲಾ ಆಸಕ್ತ ಲೇಖಕರು ಬರೆಯುವ ಲೇಖನಗಳನ್ನು, ನಿಯಮಿತ ಕಾಲ ಹಾಗೂ ಕಾರ್ಯಕ್ರಮಗಳ ಮೂಲಕ ಓಂದೆಡೆ ಸಂಗ್ರಹಿಸುವುದಕ್ಕಾಗಿ ಮೂಡಿತು. ಕಾಲಕ್ರಮದಲ್ಲಿ, ಇದರಡಿಯಲ್ಲಿ ಒಟ್ಟು ೨೪ ಅಲೆಗಳು, ಎರಡು ವರ್ಷಗಳ ಕಾರ್ಯಕ್ರಮಗಳ ಮುನ್ನುಡಿ, ಸಂಪಾದಕೀಯದೊಂದಿಗೆ ಪ್ರಕಟವೂ ಆಗಿತ್ತು. ಆದರೆ, ಇದು ನಿಯಮಿತ ಕಾಲದ ಪ್ರಕ್ರಿಯೆಯಾದುದರಿಂದ ಓದುಗರಲ್ಲಿ ಒಂದೇಸಮನಾದ ಆಸಕ್ತಿಯನ್ನು ಕಾಪಾಡಲು ಕಷ್ಟಸಾಧ್ಯವೆನಿಸಿದೆ. ಇದರಿಂದಾಗಿ, ‘ಸಂಚಯ‘ದ ಒಂದೇ ಸೂರಿನಡಿ, ಅರಿವಿನ ಅಲೆಗಳನ್ನು ಪ್ರಕಟಿಸುವ ಆಲೋಚನೆ ಮೂಡಿದೆ. ಸಂಚಯದಲ್ಲಿ ಯಾವುದೇ ಕಾಲನಿಯಮವಿಲ್ಲದೆ, ಹೊಸ ಹೊಸ ವಿಚಾರಗಳು ಹರಿದು ಬರುವಾಗ, ಅರಿವಿನ ಅಲೆಗಳನ್ನು ಅವುಗಳ ನಿಯೋಜಿತ ಕಾಲಘಟ್ಟಗಳಲ್ಲಿ ಸಂಚಯದೊಡನೆ ಹರಿಸುವುದರಿಂದ, ಓದುಗರಿಗೆ ಒಂದೇ ಸೂರಿನಡಿ ಎಲ್ಲ ವಿಷಯಗಳು ಲಭ್ಯವಿರುತ್ತವೆ ಎಂಬುದು ಸೂಕ್ತವೆನಿಸುತ್ತದೆ.

ಈ ನಿಟ್ಟಿನಲ್ಲಿ, ಜನವರಿ-೨೬, ೨೦೧೩ರ ‘ಅರಿವಿನ ಅಲೆಗಳು’ ಸಂಚಯ ತಾಣದಲ್ಲಿಯೇ ಪ್ರಕಟಗೊಳ್ಳಲಿವೆ. ಹಿಂದಿನ ಅಲೆಗಳೂ, ಇತರ ಸಂಭಂಧಿಸಿದ ಮಾಹಿತಿಗಳೂ ಇನ್ನು ಮುಂದೆ ಸಂಚಯದಲ್ಲಿಯೇ ದೊರೆಯಲಿವೆ. ಈಗಾಗಲೇ, ಬಂದಿರುವ ಲೇಖನಗಳನ್ನು ಪರಿಶೀಲಿಸಿ, ಜನವರಿ ೨೬ರಿಂದ ಪ್ರಕಟಣೆಗೆ ಸಜ್ಜುಗೊಳಿಸಲಾಗಿದೆ ಎಂಬುದನ್ನು ಈ ಮೂಲಕ ತಿಳಿಸುತ್ತೇವೆ. ಆದರೆ, ಇನ್ನೂ ಹೆಚ್ಚು ಉದಯೋನ್ಮುಕ ಲೇಖಕರನ್ನು ಹುರಿದುಂಬಿಸಲು, ಹಿಂದೆ ಪ್ರಕಟಿಸಿದ್ದ ಜನವರಿ-೨೦ರ ಕಾಲಾವಕಾಶವು ಮುಗಿದರೂ ಸಹ, ಮತ್ತಷ್ಟು ಲೇಖನಗಳನ್ನು ನಿಮ್ಮಿಂದ ಅಪೇಕ್ಷಿಸುತ್ತೇವೆ. ಹೀಗಾಗಿ, ಜನವರಿ-೨೫ರೊಳಗೆ ನಿಮ್ಮ ಲೇಖನಗಳನ್ನು ಖಂಡಿತ ನಮಗೆ (team@sanchaya.net ಮಿಂಚಂಚೆಗೆ)ಕಳುಹಿಸಿಕೊಡಿ ಎಂದು ವಿನಂತಿಸಿಕೊಳ್ಳುತ್ತೇವೆ. ಹೊಸ-ಹೊಸ ಬರಹಗಾರರನ್ನು ಪರಿಚಯಿಸುವಲ್ಲಿ ನಮಗೆ ಸಧಾ ಸಂತೋಷವಿರುತ್ತದೆ. ನೀವೂ ಬರೆಯಿರಿ, ನಿಮ್ಮ ಸ್ನೇಹ-ಬಳಗವನ್ನೂ ಈ ಕಾರ್ಯಕ್ಕೆ ಆಮಂತ್ರಿಸಿ ಎಂದು ಕೇಳಿಕೊಳ್ಳುತ್ತೇವೆ.

ಸೂಚನೆ: ಜನವರಿ ೨೬, ೨೦೧೩ರಿಂದ ಸಂಚಯದ ಎಲ್ಲ ಚಟುವಟಿಕೆಗಳು ಕೇವಲ www.sanchaya.net ಜಾಲತಾಣದಲ್ಲಿ ಮಾತ್ರವೇ ಕಾಣಸಿಗುತ್ತವೆ.

ಇಂತಿ, ಸಂಚಯ ತಂಡ