
ಇಂದಿನ ವಚನ
ಗುರುಭಕ್ತಿ ಉಂಟು, ಲಿಂಗಭಕ್ತಿ ಉಂಟು.
ಜಂಗಮಭಕ್ತಿ ಎತ್ತಲಾನೆ ಉಂಟು.
ತನ್ನನರಿದು ಇದಿರ ಕಾಬ ಜ್ಞಾನಭಕ್ತಿ
ಚೆನ್ನಬಸವಣ್ಣಂಗೆ ಸಾಧ್ಯವಾಯಿತ್ತು ನೋಡಾ.
ಅದು ಅರಿದರುವಿಂಗೆ ಮುನ್ನವೆ ಕುರುಹಿಟ್ಟ ನಿಜ.
ಆ ಗುಣ ಸಂಗನಬಸವಣ್ಣ ಬಂದ ಹಾದಿ, ಬ್ರಹ್ಮೇಶ್ವರಲಿಂಗದಲ್ಲಿಗಾಗಿ.
ವಚನಕಾರ - ಬಾಹೂರ ಬೊಮ್ಮಣ್ಣ
- ವಚನ ಸಂಚಯ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ನಾವುಗಳು ಒಮ್ಮೆ ನಮ್ಮ ಭಾಷೆಯ ಬೆಳವಣಿಗೆಯತ್ತ ಕಣ್ಣಾಯಿಸೋಣವೇ?
ಕನ್ನಡದ ತಾಂತ್ರಿಕ ಹಾಗೂ ವೈಜ್ಞಾನಿಕ ಬೆಳವಣಿಗೆ ನಮ್ಮ ಆಶಯ. ನೀವೂ ಕೈಜೋಡಿಸಿ. ತಂತ್ರಜ್ಞಾನದ ತಿಳಿವಿನ ಅರಿವನ್ನು ಸಂಚಯ ನಿಮ್ಮಲ್ಲೂ ಹರಿಸುವ ಆಶಯವನ್ನು ಹೊಂದಿದೆ. ನಾಳಿನ ಭವ್ಯ ಕನ್ನಡನಾಡಿಗೆ ನೀವೂ ಪುಟ್ಟದೊಂದು ತಾಂತ್ರಿಕ ಶಕ್ತಿ ಆಗಬಲ್ಲಿರಿ.