ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು.
- ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು
- ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ ಸಂಸ್ಥೆಗಳಲ್ಲಿರುವ ಹಳೆಯ ಪುಸ್ತಕಗಳನ್ನು ಒದಗಿಸಲು ಸಹಕರಿಸುವುದು
- ಡಿಜಿಟಲೀಕರಣದ ಕಾರ್ಯದಲ್ಲಿ ನಮ್ಮೊಡನೆ ನೇರವಾಗಿ ಸಹಾಯಕ್ಕೆ ಒದಗಿಬರುವುದು
- ಓಸಿಆರ್ ಮುಂತಾದ ಕೆಲಸಗಳ ಮೇಲಿನ ಅಧ್ಯಯನ ಮತ್ತು ಬಳಕೆಗೆ ಸಹಕರಿಸುವುದು
- ಡಿಜಿಟೈಸೇಷನ್ ಫಲಿತಾಂಶಗಳನ್ನು ಹೆಚ್ಚಿನ ಜನರಿಗೆ ತಲುಪುವಂತೆ ಮಾಡುವುದು
- ಯೋಜನೆಗೆ ಧನಸಹಾಯ ಒದಗಿಸುವುದು, ಇತ್ಯಾದಿ.
