ಪ್ರಿಯ ಓದುಗರೇ,
ಕಳೆದ ಎರಡು ವರ್ಷಗಳಿಂದ “ಅರಿವಿನ ಅಲೆಗಳು” ಬರಹ ಸಂಗ್ರಹ ಕಾರ್ಯಕ್ರಮವನ್ನು ಭಾರತದ ಸ್ವಾತಂತ್ರ್ಯೋತ್ಸವ ದಿನಕ್ಕೆ ೧೪ ದಿನಗಳ ಮುಂಚಿತವಾಗಿ, ಅಂದರೆ, ಆಗಸ್ಟ್ ೧ರಿಂದ ೧೪ರವರೆಗೆ ದಿನಕ್ಕೆ ಒಂದು ಬರಹದಂತೆ ೧೪ ಬರಹಗಳನ್ನು ಪ್ರಕಟಿಸಿ, ಆಗಸ್ಟ್ ೧೫ರಂದು ಎಲ್ಲ ಬರಹಗಳ ಇ-ಪುಸ್ತಕವನ್ನು ಬಿಡುಗಡೆ ಮಾಡುವ ಪದ್ಧತಿಯಿತ್ತು. ಆದರೆ, ವರ್ಷಕ್ಕೆ ಒಂದೇ ಹಬ್ಬವೇ! ಹಾಗೂ ೧೪ ಬರಹಗಳ ನಿರ್ಭಂಧವೇಕೇ? ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಆದ್ದರಿಂದ, ತೀರಾ ಒಂದೇ ಹಬ್ಬವೂ ಸಾಲದು, ಬಹಳಷ್ಟು ಹಬ್ಬಗಳೂ ಕಷ್ಟ ಎಂದು ವಿಚಾರ ಮಾಡಿ, ಕೆಳಕಂಡ ನಾಲ್ಕು ಸಂದರ್ಭಗಳಲ್ಲಿ “ಅರಿವಿನ ಅಲೆಗಳು” ಕಾರ್ಯಕ್ರಮವನ್ನು ಜರುಗಿಸಲು ಇಚ್ಚಿಸಿದ್ದೇವೆ.
೧. ನಮ್ಮ ಭಾರತದ ಗಣರಾಜ್ಯೋತ್ಸವದಂದು
೨. ವಿಶ್ವದ ಕಾರ್ಮಿಕ ಸಮುದಾಯವು ಆಚರಿಸುವ ಕಾರ್ಮಿಕರ ದಿನದಂದು
೩. ನಮ್ಮ ಭಾರತದ ಸ್ವಾತಂತ್ರ್ಯೋತ್ಸವದಂದು
೪. ನಮ್ಮ ಕರ್ನಾಟಕದ ರಾಜ್ಯೋತ್ಸವದಂದು
ಈ ಮೇಲ್ಕಂಡ ಎಲ್ಲಾ ಸಂದರ್ಭಗಲಲ್ಲಿಯೂ, ಸುಮಾರು ೪೫ ದಿನಗಳ ಮುಂಚಿತವಾಗಿ, ಬರಹಗಳ ಬಗ್ಗೆ ಪ್ರಕಟಣೆಯನ್ನು ಮಾಡಲಾಗುತ್ತದೆ. ಬರಹಗಳನ್ನು ಕಳುಹಿಸಲು ಇಚ್ಚಿಸುವವರು, ಆಯಾ ಪ್ರಕಟಿಣೆಯಲ್ಲಿ ತಿಳಿಸಲಾಗುವ ಗಡುವಿನೊಳಗೆ ತಮ್ಮ ಲೇಖನವನ್ನು ನಮಗೆ ಕಳುಹಿಸತಕ್ಕದ್ದು. “ಅರಿವಿನ ಅಲೆಗಳು” ನಿರ್ವಾಹಕ ತಂಡವು ಲೇಖನಗಳನ್ನು ಪರಿಶೀಲಿಸಿ, “ಅರಿವಿನ ಅಲೆಗಳು” ಅಡಿಯಲ್ಲಿ ಅವನ್ನು ಪ್ರಕಟಿಸುತ್ತವೆ. ಮುಂಬರುವ (ಮೇಲೆ ತಿಳಿಸಿದ) ವಿಶೇಷದಿನದಂದು, ಪರಿಶೀಲಿಸಿದ ಎಲ್ಲ ಲೇಖನಗಳನ್ನು ಇ-ಪುಸ್ತಕದ ರೂಪದಲ್ಲಿ ಈ ತಾಣದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ.
ಸಾಮಾನ್ಯ ವಿಚಾರಗಳು:
೧. ಲೇಖನಗಳು, ಮುಕ್ತ ತಂತ್ರಜ್ಞಾನ, ದಿನನಿತ್ಯದ ಜೀವನಗಳಲ್ಲಿ ತಂತ್ರಜ್ಞಾನದ ಬಳಕೆ, ವಿವಿಧ ಕ್ಷೇತ್ರಗಳಲ್ಲಿ ಮುಕ್ತ ತಂತ್ರಜ್ಞಾನಗಳ ಪಾತ್ರ, ಮುಕ್ತ ತಂತ್ರಾಂಶಗಳ ವಿವಿಧ ಉಪಯೋಗಗಳು, ನಿತ್ಯದ ಕಾರ್ಯಗಳಲ್ಲಿ ತಂತ್ರಜ್ಞಾನಗಳ ಸದ್ಭಳಕೆ ಹೇಗೆ ಸಾಧ್ಯ, ಈ ರೀತಿಯ ವಿಷಯಗಳನ್ನು ಕುರಿತವಾಗಿರವೇಕು.
೨. ಎಲ್ಲಾ ಲೇಖನಗಳು Creative Commons License ನಡಿ ಪ್ರಕಟಗೊಳ್ಳುತ್ತವೆ. ಹೆಚ್ಚಿನ ವಿವರಗಳಿಗಾಗಿ, “ಹಕ್ಕುಗಳು” ಪುಟವನ್ನು ನೋಡಿ.
ನಮ್ಮ ಮುಂದಿನ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೀರೆಂದು ಆಶಿಸುತ್ತೇವೆ.
ಇಂತಿ,
ಅರಿವಿನ ಅಲೆಗಳು ತಂಡ – “ಸಂಚಯ“
