ವಚನ ಸಂಚಯ

ವಚನ ಸಾ‍ಹಿತ್ಯ ಸಂಶೋಧನೆ ಮತ್ತು ಅಧ್ಯಯ‍ನ ತಾಣ

ಈ ವಚನ ಸಂಗ್ರಹದಲ್ಲಿ 218 ಪುರುಷ ವಚನಕಾರರು, 31 ಸ್ತ್ರೀ ವಚನಕಾರ್ತಿಯರೂ ಒಳಗೊಂಡಂತೆ ಒಟ್ಟು 249 ವಚನಕಾರರ, 20929 ಹೆಚ್ಚು ವಚನಗಳಿವೆ.
ವಚನಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 209876 ಕೂ ಹೆಚ್ಚು. ಈ ತಂತ್ರಾಂಶ ವಚನದಲ್ಲಿನ ಪದಗಳನ್ನು ಆಯಾ ವಚನ ಮತ್ತು ವಚನಕಾರರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.‍‍‍‍

ಜಾಲತಾಣಕ್ಕೆ ಭೇಟಿ ಕೊಡಿಯೋಜನೆಗೆ ಬೆಂಬಲ ನೀಡಿ

ಯೋಜನೆಯ ಸವಾಲು

‍ವಚನ ಸಾಹಿತ್ಯವನ್ನು ಅಧ್ಯಯನ ಮಾಡಲು ತಂತ್ರಜ್ಞಾನದ ನೆರವು ಅಗತ್ಯವಿದ್ದುದನ್ನು, ನಮ್ಮ ತಂಡ ೨೦೧೨-೧೩ರ ಆಸುಪಾಸಿನಲ್ಲಿ ಶ್ರೀ ಓ.ಎಲ್. ನಾಗಭೂಷಣ ಸ್ವಾಮಿ ಹಾಗೂ ಶ್ರೀ ವಸುದೇಂದ್ರರಿಂದ ಆರಿಯಿತು. ವಚನಗಳನ್ನು ಅಗತ್ಯ ಶಿಷ್ಟತೆಗಳನ್ನು(standards) ಬಳಸಿ ಡಿಜಿಟಲೀಕರಿಸುವ ಜೊತೆಗೆ ಸಾಮಾನ್ಯರಿಂದ ಹಿಡಿದು, ಭಾಷಾಸಂಶೋಧಕರೂ ಉಪಯೋಗಿಸಬಲ್ಲ ವೇದಿಕೆಯ ಸೃಷ್ಟಿ ಸಂಚಯದ ಎದುರಿಗಿದ್ದ ಸವಾಲು. ಈಗಾಗಲೇ ಡಿಜಿಟಲೀಕರಿಸಿದ್ದ ಮಾಹಿತಿ ಯುನಿಕೋಡ್‌ನಲ್ಲಿ ಇಲ್ಲದಿದ್ದದ್ದು, ಅವುಗಳ ಫಾಂಟ್ ಲಭ್ಯತೆ ದುರ್ಲಭವಾದದ್ದು, ಮಾಹಿತಿಯ ನಿಖರತೆಯನ್ನು ಖಚಿತ ಪಡಿಸಿಕೊಳ್ಳುವ ಮೂಲಗಳು ಹೀಗೆ ಮತ್ತಷ್ಟು ತಾಂತ್ರಿಕ ತೊಂದರೆಗಳೂ ನಮ್ಮ ಎದುರಿಗಿದ್ದವು. 

ಪರಿಹಾರ

‍ಮೊದಲ ಹಂತವಾಗಿ ಸಮಗ್ರ ವಚನ ಸಂಪುಟಗಳ ೧೫ ಸಂಪುಗಳನ್ನು ಯುನಿಕೋಡ್‌‍‌ಗೆ ಪರಿವರ್ತಿಸಲಾಯಿತು. ಎರಡನೆ ಹಂತದಲ್ಲಿ, ವಚನಗಳ ಲಭ್ಯತೆ ಸಾಧ್ಯವಾಗಿಸುವ ಜಾಲತಾಣ https://vachana.sanchaya.net ಅ‌‍ಭಿವೃ‍‍‍ದ್ಧಿ ಪ‍‍ಡಿಸಲಾಯಿತು. ತಾಣವು ‍ವಚನ‍ಗ‍ಳ ಹು‍ಡುಕಾ‍ಟದ‍ ಜೊತೆಗೆ‍‍, ಸಂಶೋಧನೆ ಸರಳಗೊಳಿಸುವ ಕನ್‌ಕಾರ್ಡೆನ್ಸ್ (ಅಕಾರಾದಿ ಹುಡುಕು), ಸರಳವಾದ ನಕ್ಷೆ, ಹುಡುಕನ್ನು ಸಾಲುಗಳಲ್ಲಿ ಎತ್ತಿಹಿಡಿಯುವ ವ್ಯವಸ್ಥೆ (ಹೈಲೈಟ್), ಪದವನ್ನು ವಚನಕಾರರು ಎಷ್ಟು ವಚನಗಳಲ್ಲಿ, ಎಷ್ಟು ಭಾರಿ ಬಳಸಿದ್ದಾರೆ ಎನ್ನುವ ಮಾಹಿತಿ, ಪದಕೋಶ ಇತ್ಯಾದಿಗಳನ್ನು ಒಳಗೊಂಡಿ‍‍ದೆ‍‍‍‍. ಇತ್ತೀಚೆಗೆ ಟಿಪ್ಪಣಿ ವ್ಯವಸ್ಥೆ (Annotation) ಕೂಡ ಲಭ್ಯವಾಗಿಸಲಾಗಿದೆ.‍‍‍‍

ಒಟ್ಟು ‍ಸಂಪುಟಗಳು

‍ಒಟ್ಟು ವಚನಗಳು

ಪುರುಷ ವಚನಕಾರ‍ರು

ಸ್ತ್ರೀ ವಚನಕಾರರು

ಭಾಷಾ ಸಂಶೋಧನೆ – ನಿಮ್ಮ ಅಂಗೈಯಲ್ಲಿ

ಮೊಬೈಲ್‌ ಮೂಲಕವೂ ಸಾಧ್ಯ

ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ವಚನ ಸಾಹಿತ್ಯದ ಅಧ್ಯಯನ ಸಾಮಾನ್ಯರಿಂದ ಸಂಶೋಧಕರವರೆಗೂ ಎಲ್ಲರಿಗೂ ಲಭ್ಯ. 

ಹೊಸ ಸಾಧ್ಯತೆಗಳ ಪರಿಚಯ

ಭಾಷಾ ಸಂಶೋಧನೆಗೆ ತಂತ್ರಜ್ಞಾನದ ಹೊದಿಕೆ ಹೊಸ ಸಾಧ್ಯತೆಗಳನ್ನು ಬೆಳಕಿಗೆ ತರುತ್ತದೆ. ವಚನ ಸಂಚಯ ಈ ನಿಟ್ಟಿನಲ್ಲಿ ಅಂತಹ ಮೊದಲ ಪ್ರಯತ್ನ. ಡಿಜಿಟೈಸೇಷನ್ ಜೊತೆಗೆ ಸಂಶೋಧನೆಯಲ್ಲಿ ವಿಜುಅಲೈಸೇಷನ್ ಹಾಗೂ ಅಂಕಿಅಂಶಗಳ ಮಾಹಿತಿ, ಸಮುದಾಯ ಸಹಭಾಗಿತ್ವದ ಸಾಧ್ಯತೆಗಳನ್ನು ಇಲ್ಲಿ ಸಾಧ್ಯವಾಗಿಸಲಾಗಿದೆ.‍ ‍

‍ಅಂಕಿಅಂಶಗಳ ಜೊತೆಗೆ ಗಡಿದಾಟಿದ ಸಾಹಿತ್ಯ

ವಚನ ಸಂಚಯ ವಚನಗಳನ್ನು ಸಾವಿರಾರು ಆಸಕ್ತರಿಗೆ ವಿಶ್ವದಾದ್ಯಂತ ತಲುಪಿಸುತ್ತಿದ್ದೆ. ಇದರ ಜೊತೆಗೆ ಕನ್ನಡದ ಇತರೆ ಸಾಹಿತ್ಯವನ್ನು, ಸಾಹಿತ್ಯ ಪ್ರಕಾರವನ್ನೂ ಕನ್ನಡಿಗರಿಗೆ ತಲುಪಿಸಲು ನಮಗೆ ಪ್ರೇರಣೆಯಾಗಿದೆ. ಸಂಚಯದ ಇತರೆ ಯೋಜನೆಗಳು ಇದಕ್ಕೆ ಸಾಕ್ಷಿ. 

ಇದುವರೆಗೆ ವಚನ ಸಂಚಯ ಸಾಧ್ಯವಾ‍ಗಿಸಿರುವ ಒಟ್ಟು ಪದಗಳ ಹುಡುಕುಗಳು‍.

ಯೋಜನೆಗೆ ಸಂಬಂಧಿಸಿದ ಲೇಖನಗಳು

‍ಯೋಜನೆಯ ಮಾಹಿತಿ, ತಂತ್ರಜ್ಞಾನ, ಸಮುದಾಯ ಸಹಭಾಗಿತ್ವ ಇತ್ಯಾದಿಗಳ ಬಗ್ಗೆ, ಸುದ್ಧಿ ಮೂಲಗಳಲ್ಲಿ ವಚನ ಸಂಚಯದ ಬಗ್ಗೆ ಬಂದ ಲೇಖನಗಳ ಗುಚ್ಛ...
ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

‍ ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ‍ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....

ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍‍

ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍‍‍‍‍‍‍‍‍‍ ‍ಇಲ್ಲಿ ಲಭ್ಯ‍. ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ...

Ancient Kannada lives online‍

Ancient Kannada lives online‍

By Swathi Nair  |  Express News Service  |   Published: 27th April 2017 05:15 AM  |  Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...

ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ‍

ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ‍

‍‍ಫೇಸ್‌ಬುಕ್‌ನಲ್ಲಿ ನಮ್ಮ ತಂಡ ಪ್ರಕಟಿಸುವ ದಿನಕ್ಕೊಂದು ವಚನಗಳ ಆಗಸ್ಟ್ ೨೨ರ ಫೋಸ್ಟ್‌ಗೆ ಬಸವರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು‍ ಕೆಳಗಿನಂತೆ ಉತ್ತರಿಸಿರುತ್ತಾರೆ. ‍‍‍ಸೂಚನೆ:-‍‍ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ವಚನ ಸಂಚಯದ ‍‍ಗೂಗಲ್ ಗ್ರೂಪ್‌ನಲ್ಲೂ ನೆಡೆಸಬಹುದು. ಮನದ...

ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಪುಸ್ತಕ ಸಂಚಯದಲ್ಲಿ ಲಭ್ಯ‍

‍ವಚನಸಂಚಯ ತಂಡದ ಮತ್ತೊಂದು ಯೋಜನೆಯಾದ ಪುಸ್ತಕ ಸಂಚಯದಲ್ಲಿ (‌http://pustaka.sanchaya.net) ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಗಳಲ್ಲಿರುವ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿ ತೆಗೆಯುವುದು ಸುಲಭವಾಗಿದೆ. ಉದಾಹರಣೆಗೆ "ವಚನ"ಪದ ಪ್ರಯೋಗವಿರುವ ಪುಸ್ತಕದ ಹೆಸರುಗಳ ಪಟ್ಟಿ...

ವಚನ ಸಂಚಯವನ್ನು ಜನರಿಗೆ ಪರಿಚಯಿಸಿದ ಮೊದಲ ಪ್ರಕಟಣೆ – ಪ್ರಜಾವಾಣಿ‍

‍ಇ–ಮೇಲ್‌ ಮೂಲಕ ಪುಸ್ತಕ ರೂಪುಗೊಂಡ ಬಗೆ ಮನೋಜಕುಮಾರ್‌ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 (ಧಾರವಾಡ ಸಾಹಿತ್ಯ ಸಂಭ್ರಮ - ಗೋಷ್ಠಿ 13: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ) ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿ­ಕೊಂಡ ಚಿತ್ರವನ್ನು ತೆಗೆದವರು...

ವಚನ ಬಹುವಚನ‍

‍ಓ. ಎಲ್‌. ನಾಗಭೂಷಣ ಸ್ವಾಮಿ | ಜೂನ್ 29, 2014, ಉದಯವಾಣಿ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು ಮುದ್ರಿಸುತ್ತೇವೆ. ಆದರೆ, ಅಬ್ಬರದ ಕೆಲಸಗಳಿಗಿಂತ...

ಜಾಲತಾಣದಲ್ಲೀಗ ವಚನಗಳ ಅನುರಣನ‍

‍ವಾರ್ತಾ ಭಾರತಿ, ರವಿವಾರ - ಫೆಬ್ರವರಿ -02-2014 ಹನ್ನೆರಡನೆ ಶತಮಾನದಲ್ಲಿ ಇಡೀ ಕನ್ನಡ ನಾಡನ್ನೆ ಅಲ್ಲೋಲ ಕಲ್ಲೋಲಗೊಳಿಸಿದ ಸಾಮಾಜಿಕ ಕ್ರಾಂತಿ ಯಾರಿಗೆ ತಾನೆ ಗೊತ್ತಿಲ್ಲ? ಪ್ರತಿಗಾಮಿ ಸಾಮಾಜಿಕ ಸಂರಚನೆಗಳಿಗೆ ಕೊಡಲಿಯೇಟನ್ನು ಕೊಟ್ಟು ಜಾತಿ, ವರ್ಗಗಳಾಚೆಗೆ ಸಮಾನತೆ, ಭ್ರಾತೃತ್ವ, ಸಹೋದರ ತೆಗಳ ಆಧಾರದಲ್ಲಿ ಸಮಸಮಾಜವನ್ನು...

ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ‍

‍ಫೆಬ್ರವರಿ ೪, ೨೦೧೪ರಂದು ಒನ್‌ಇಂಡಿಯಾದಲ್ಲಿ ಪ್ರಕಟಗೊಂಡ ಲೇಖನ. ಲೇಖಕರು: ಮಲೆನಾಡಿಗ ಇಂಥದ್ದೊಂದು ವೆಬ್ ತಾಣ ಕನ್ನಡದಲ್ಲಿ ಅಗತ್ಯವಿದೆ ಎಂದುಕೊಳ್ಳುವ ವೇಳೆಗೆ ವಚನಗಳ ಬೃಹತ್ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣವೊಂದು ನಿಮ್ಮ ಮುಂದೆ ಪ್ರಕಟಗೊಂಡಿದೆ. ಕನ್ನಡದ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕರಾದ ಪ್ರೊ.ಓ.ಎಲ್ ನಾಗಭೂಷಣ,...

ಅನಿರ್ವಚನ, ಇ-ನಿರ್ವಚನ‍

ಅನಿರ್ವಚನ, ಇ-ನಿರ್ವಚನ‍

‍ಪ್ರಜಾವಾಣಿಯಲ್ಲಿ ಜನವರಿ ೩೦, ೨೦೧೪ ರಂದು ಪ್ರಕಟಗೊಂಡ ಲೇಖನ –ಅಮಿತ್ ಎಂ.ಎಸ್ ಸುಮಾರು ಹನ್ನೊಂದು ವರ್ಷಗಳ ಹಿಂದೆ ವಚನಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು ಹಿರಿಯ ಭಾಷಾತಜ್ಞ ಓ.ಎಲ್‌. ನಾಗಭೂಷಣಸ್ವಾಮಿ. ವಚನಗಳ ಅಧ್ಯಯನಕ್ಕೆ ಸಮಗ್ರ ವಚನ ಸಂಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕುವ ಶ್ರಮ, ವಚನಗಳನ್ನು ಹುಡುಕುವುದು, ಅವುಗಳನ್ನು...

ಅಕ್ಷಯ ಸಂಚಯ‍

‍ಉದಯವಾಣಿಯಲ್ಲಿ ಜೂನ್ ೪, ೨೦೧೪ ರಂದು ಪ್ರಕಟಗೊಂಡ ಲೇಖನ| ಲೇಖಕರು: ಓಂಶಿವಪ್ರಕಾಶ್‌ ಎಚ್‌. ಎಲ್‌ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು...

ಧಾರವಾಡ ಸಾಹಿತ್ಯ ಸಂಭ್ರಮ: ಗೋಷ್ಠಿ ೧೩: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ‍

‍ಇ–ಮೇಲ್‌ ಮೂಲಕ ಪುಸ್ತಕ ರೂಪುಗೊಂಡ ಬಗೆ  ಮನೋಜಕುಮಾರ್‌ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿ­ಕೊಂಡ ಚಿತ್ರವನ್ನು ತೆಗೆದವರು ಫ್ರಾನ್ಸ್‌ನವರು, ಹಿಂಬದಿಯ ಚಿತ್ರ ತೆಗೆದವರು ಇಂಗ್ಲೆಂಡ್‌ನವರು. ಕನ್ನಡಕ್ಕೆ...

ನಮ್ಮ ಯೋಜನೆಗಳಲ್ಲಿ ಭಾಗಿಯಾಗುವುದಕ್ಕೆ‍ ಇಚ್ಛೆ ಇದೆಯೇ?‍

ನಮ್ಮ ಯೋಜನೆಗಳು ನಿಮಗೆ ಪ್ರಯೋಜನಕಾರಿ ಆಗಿದ್ದಲ್ಲಿ, ನಮ್ಮನ್ನು ಬೆಂಬಲಿಸಿ