ಪ್ರತಿವರ್ಷ ನಮ್ಮಲ್ಲಿನ ಅರಿವನ್ನು ಇತರರೊಡನೆ ಹಂಚಿಕೊಳ್ಳಲು, ಮತ್ತು ಹೊಸಬರನ್ನು ವಿಜ್ಞಾನ, ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಗ್ಗೆ ಬರೆಯಲು ಪ್ರೇರೇಪಿಸುವ ನಮ್ಮ ಅರಿವಿನ ಅಲೆಗಳು ಕಾರ್ಯಕ್ರಮ, ತನ್ನ ಎರಡನೆಯ ಇ-ಪುಸ್ತಕವನ್ನು ಬಿಡುಗಡೆಗೊಳಿಸಿದೆ. ಈ ಬಾರಿ ೧೦ ಲೇಖಕರ ಬರಹಗಳು ಇದರಲ್ಲಿ ಲಭ್ಯವಿವೆ. ಈ ಪುಸ್ತಕವನ್ನು http://arivu.sanchaya.net/ebook ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
ನಿಮ್ಮ ಮೊಬೈಲ್ ಆಂಡ್ರಾಯ್ಡ್ ನಿಂದ ಕಾರ್ಯನಿರ್ವಹಿಸುತ್ತಿದ್ದರೆ, ೨೦೧೧ ರ ಪುಸ್ತಕವನ್ನು ಮೊಬೈಲ್ ಅಥವಾ ಟ್ಯಾಬ್ನಲ್ಲೇ ಓದಬಹುದು. ಒಂದೆರಡು ದಿನಗಳಲ್ಲಿ ೨೦೧೨ರ ಸಂಚಿಕೆ ಕೂಡ ಗೂಗಲ್ ಪ್ಲೇನಲ್ಲಿ ಲಭ್ಯವಿರಲಿದೆ.
ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಕೋರುತ್ತ…
ಸಂಚಯ ತಂಡದ ಪರವಾಗಿ….
ಪವಿತ್ರ
