ಮಾಹಿತಿ ಪುಟ

ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ?

ನಾಗರತ್ನ ಸ್ಮಾರಕ ಅನುದಾನ ‍೨೦೧೯

ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊ‌ಳ್ಳಲಾಗುತ್ತಿದೆ. 

ಪುಸ್ತಕಗಳ ಡಿಜಿಟಲೀಕರಣ

ಅಂಚೆ ವೆಚ್ಚ / ಓಡಾಟ
ಡಿಜಿಟಲೀಕರಣದ ಓಡಾಟ, ಕೊರಿಯರ್/‌ಅಂಚೆ ಖರ್ಚುಗಳು
ಪುಸ್ತಕಗಳ ಸ್ಥಿತಿ ಕಾಪಾಡಿಕೊಳ್ಳಲು
  1. ಡಿಜಿಟಲೀಕರಣಕ್ಕೆ ಬಂದ ಪುಸ್ತಕಗಳನ್ನು ಜತನದಿಂದ ಕಾಯ್ದುಕೊಳ್ಳಲು
    1. ಪಾಲಿಎಥಲೀನ್ ಕವರ್
    2. ಪುಸ್ತಕಗಳ ಸಾಗಾಟಕ್ಕೆ ಬಾಕ್ಸ್‌ಗಳು
    3. ಗೊಂದು, ಟೇಪು, ಮಾರ್ಕರ್ಗಳು ಇತ್ಯಾದಿ
  2. ಪುಸ್ತಕಗಳ ರೀಬೈಂಡಿಂಗ್ ಮಾಡಲು – ಪುಸ್ತಕಗಳನ್ನು ಮತ್ತೆ ಉಳಿಸಿಕೊಳ್ಳಬಹುದಾದ ಕಾರ್ಯಕ್ಕೆ ಸಹಾಯವಾಗಲು, ಕೆಲವೊಂದು ಪುಸ್ತಕಗಳ ಬೈಂಡಿಂಗ್ ತೆಗೆದ ಸಂದರ್ಭದಲ್ಲಿ‍
ಕಾಪಿರೈಟ್ ಹೊರತಾದ ಪುಸ್ತಕಗಳನ್ನು ಕೊಂಡುಕೊಳ್ಳಲು

ಕಾಪಿರೈಟ್ ಹೊರತಾದ ಪುಸ್ತಕಗಳನ್ನು ಈ ಕೆಳಕಂಡಂತೆ ಕೊಂಡುಕೊಳ್ಳಲು ಮುಂದಾಗುತ್ತೇವೆ:

  1. 1. ನಮಗೆ ತಿಳಿದಿರುವ ಮೂಲಗಳಿಂದ ಸಿಗದಿದ್ದ ಪಕ್ಷದಲ್ಲಿ – ಈ ಪುಸ್ತಕಗಳನ್ನು ಕೊಳ್ಳುವ ಯೋಜನೆ ಹಾಕಿಕೊಳ್ಳಲಾಗುತ್ತದೆ
  2. ಹಳೆಯ ಪುಸ್ತಕಗಳ ಮಾರಾಟಗಾರರನ್ನು ಸಂಪರ್ಕಿಸಿ – ಕಡಿಮೆ ಹಣದಲ್ಲಿ ಪುಸ್ತಕಗಳನ್ನು ಕೊಂಡು, ಡಿಜಿಟೈಜ್ ಮಾಡಿ ಮತ್ತೆ ಮರಳಿಸುವ ಹಾಗೂ ಇನ್ನಷ್ಟು ಪುಸ್ತಕಗಳನ್ನು ಹಿಂದಿರುಗಿಬಂದ ಹಣದಿಂದ ಕೊಳ್ಳುವುದು.
ಸಣ್ಣ ಪ್ರಯಾಣ ಮತ್ತು ತಪ್ಪಿಸಲಾಗದ ಕಾರ್ಯಗಳಿಗೆ

 ಸಂಚಯ ಸಮುದಾಯ ಸಹಭಾಗಿತ್ವದಿಂದ ತನ್ನ ಯೋಜನೆಗಳಿಗೆ ಪ್ರಯಾಣ ಅಥವಾ ಯಾವುದೇ ಹೆಚ್ಚುವರಿ ಖರ್ಚು ಬರದಂತೆ ಎಚ್ಚರವಹಿಸುತ್ತದೆ. ಇದು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಮಾತ್ರ ಖರ್ಚನ್ನು ಸರಿಹೊಂದಿಸಲು / ಸಾಧ್ಯವಾದಲ್ಲೆಲ್ಲಾ ಕನಿಷ್ಠ ಮರುಪಾವತಿಯನ್ನು ಮಾತ್ರ ನೀಡಲು ಮುಂದಾಗುತ್ತದೆ.

ಸಾಮಾನ್ಯ ಪ್ರಶ್ನೋತ್ತರಗಳು

ಇನ್ನೂ ಯಾವುದೇ ಪ್ರಶ್ನೆ ಕೇಳಲಾಗಿಲ್ಲ

ನಮಗೊಂದು ಸಂದೇಶ ಕಳುಹಿಸಿ

ನಿಮಗೆ ನಮ್ಮ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ಒಂದು ಸಂದೇಶ ಕಳುಹಿಸಿ

1 + 7 =

ಸಂಚಿ ‍ಫೌಂಡೇಷನ್ – ಸಹಯೋಗದೊಂದಿಗೆ ಸಂಚಯದ ಕಾರ್ಯಗಳಿಗೆ ದೇಣಿಗೆ ನೀಡಬಹುದಾಗಿದೆ.

“ಸಂಚಿ” ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ‍

ಸಂಚಿ ಫೌಂಡೇಶನ್ (ಆರ್) ಗೆ ನೀಡುವ ಎಲ್ಲಾ ದೇಣಿಗೆಗಳು 80 ಜಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ.

Sanchi Foundation (R)
SBI, Channasandra Branch
A/C No: 34546182259
IFSC: SBIN0017780

ಸಂಚಯದ ಡಿಜಿಟಲೀಕರಣಕ್ಕೆ ನಿಮ್ಮದೇ ರೀತಿಯಲ್ಲಿ ದೇಣಿಗೆ/ಸಹಾಯ ‌ನೀಡಿ!