ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

,

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

,

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

,

ಡಿಜಿಟಲೀಕರಣ

ಕನ್ನಡದ ಬಹುಮುಖ್ಯ ಕೃತಿಗಳು ಹಾಗೂ ಸಂಪಾದನೆಗಳನ್ನು ಅವು ಸಾರ್ವಜನಿಕವಾದಾಗ ಅಂದರೆ ಕಾಪಿರೈಟ್ ಹೊರತಾದಾಗ ಅವುಗಳನ್ನು ಡಿಜಿಟಲೀಕರಿಸಿ ಮುಂದಿನ ತಲೆಮಾರಿಗೆ ಶಾಶ್ವತವಾಗಿ ಉಳಿಸುವುದು. ನಮ್ಮ ನಡುವಿರುವ ಲೇಖಕರ ಸಾಹಿತ್ಯ, ಸಂಶೋಧನೆಗಳನ್ನೂ ಅವರ ಅನುಮತಿಯೊಡನೆ ಕ್ರಿಯೇಟೀವ ಕಾಮನ್ಸ್  ಅಡಿ ಡಿಜಿಟಲೀಕರಿಸುವುದು.
,

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

,

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.

ಹೊಸ ಅಲೆ ೬ – ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ

ಹೊಸ ಅಲೆ ೬ – ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ

I. 20ನೇ ಶತಮಾನದ ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ.ವಸಾಹತೋತ್ತರ ಕರ್ನಾಟಕದ ನಿಸರ್ಗ ಚಿತ್ರಣಕ್ಕೆ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದರೂ ಸಹ, ಇನ್ನಿತರ ಪ್ರಕಾರಗಳಿಗೆ ಸಿಕ್ಕಂತ ಮನ್ನಣೆ ಇದಕ್ಕೆ ಸಿಕ್ಕಿರುವುದು ವಿರಳವೆಂದೇ ಹೇಳಬಹುದು. ವೆಂಕಟಪ್ಪನವರ ಆದಿಯಾಗಿ...

read more
ಹೊಸ ಅಲೆ ೫ – ಹಾವುರಾಣಿ

ಹೊಸ ಅಲೆ ೫ – ಹಾವುರಾಣಿ

ಹಾವುರಾಣಿ ಸರೀಸೃಪದ ಜಾತಿಗೆ ಸೇರಿದ ಪ್ರಾಣಿ. ಇದು ಸಾಮಾನ್ಯವಾಗಿ ೨೦ ಸೆಂ. ಮೀ. ಉದ್ದ ಬೆಳೆಯುತ್ತದೆ. ಆದರೆ ಕೆಲವು ಹಾವುರಾಣಿಗಳು ಕೇವಲ ೧೦ ಸೆಂ. ಮೀ. ಉದ್ದ ಮಾತ್ರ ಬೆಳೆಯುತ್ತವೆ. ಹೆಣ್ಣು ಹಾವುರಾಣಿಯು ಗಂಡು ಹಾವುರಾಣಿಯ ಜೊತೆ ಸಂಭೋಗ ನಡೆಸಿದಾಗ ಸುಮಾರು ೨೫೦ ಮೊಟ್ಟೆಗಳನ್ನು ಇಡುತ್ತದೆ. ಎಲ್ಲಾ ಸರೀಸೃಪಗಳಂತೆಯೇ, ಹಾವುರಾಣಿಯು...

ಹೊಸ ಅಲೆ ೪ – ಬ್ಲಾಗಿನ ಬಾಗಿಲು ತೆರೆದಾಗ

ಹೊಸ ಅಲೆ ೪ – ಬ್ಲಾಗಿನ ಬಾಗಿಲು ತೆರೆದಾಗ

ಅದು ನಾನು ಕಾಲೇಜ್ ಮುಗಿಸಿ ಕೆಲಸಕ್ಕಾಗಿ ಕಾಯುತ್ತಿದ್ದ ದಿನಗಳು. ಪ್ರತಿ ದಿನವೂ ಏನು ಮಾಡುವುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ದಿನಪೂರ್ತಿ ಉತ್ತರದ ಹುಡುಕಾಟದಲ್ಲಿ ಕಳೆದು, ಕೊನೆಗೆ ಏನೂ ಮಾಡಲಿಲ್ಲ ಎಂಬ ನಿರಾಸೆಯೊಂದಿಗೆ ಕಾಲಹರಣ ಮಾಡುತ್ತಿದ್ದ ದಿನಗಳು. ಆಗ ನನಗೆ ಗೆಳೆಯರ ಮೂಲಕ ಅಂತರ್ಜಾಲದಲ್ಲಿ ಬ್ಲಾಗ್ ಎಂಬ ಪ್ರಪಂಚದ...

ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ. ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ. ೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು  ಬಳಸುವಂತಿಲ್ಲ. ೨.  ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ...

read more
ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ.ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ.೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು ಬಳಸುವಂತಿಲ್ಲ.೨. ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ ಉಪಯೋಗಿಸತಕ್ಕದ್ದು. ಪೈಪ್...

read more
ಹೊಸ ಅಲೆ ೨ – ಹಿತ್ತಲ ಜೊತೆ ಹಿತ್ತಲ ಗಿಡವೂ ಹೋಯ್ತಾ?

ಹೊಸ ಅಲೆ ೨ – ಹಿತ್ತಲ ಜೊತೆ ಹಿತ್ತಲ ಗಿಡವೂ ಹೋಯ್ತಾ?

 ಹಿಂದೆ, ನಾನು ಕಂಡಂತೆ ನಗರಗಳಲ್ಲಿ ಮನೆಗಳು ಸಾಮಾನ್ಯವಾಗಿ ಚಿಕ್ಕದಾಗಿ ಇರುತ್ತಿದ್ದವು. ಅಂದಿನ ಆರ್ಥಿಕ ಪರಿಸ್ಥಿತಿಯು ಇದಕ್ಕೆ ಕಾರಣವಿದ್ದಿರಬಹುದು. ಹೂಬಿಡುವ ಸಸ್ಯಗಳ ಜೊತೆಗೆ ಕರಿಬೇವು, ಬಾಳೆ, ಸಪೋಟ, ನುಗ್ಗೆ , ಟೊಮ್ಯಾಟೊ, ಇತ್ಯಾದಿ ಗಿಡಗಳುಳ್ಳ ಒಂದು ಕೈತೋಟವಿರುವ ಮನೆ ಸರ್ವೇಸಾಮಾನ್ಯವಾಗಿತ್ತು.. ಬಹಳಶ್ಟು ಖಾಲಿ ಜಾಗ...