ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.
ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.
ಸಂಶೋಧನೆ
ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.
ಡಿಜಿಟಲೀಕರಣ
ಅಧ್ಯಯನ
ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.
ಸಮುದಾಯ
ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.
ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ
ಫೇಸ್‌ಬುಕ್‌ನಲ್ಲಿ ನಮ್ಮ ತಂಡ ಪ್ರಕಟಿಸುವ ದಿನಕ್ಕೊಂದು ವಚನಗಳ ಆಗಸ್ಟ್ ೨೨ರ ಫೋಸ್ಟ್‌ಗೆ ಬಸವರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು ಕೆಳಗಿನಂತೆ ಉತ್ತರಿಸಿರುತ್ತಾರೆ. ಸೂಚನೆ:- ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ವಚನ ಸಂಚಯದ ಗೂಗಲ್ ಗ್ರೂಪ್‌ನಲ್ಲೂ ನೆಡೆಸಬಹುದು. ಮನದ...
ಕನ್ನಡ ಪುಸ್ತಕಗಳ ದತ್ತಾಂಶ ಪರಿಷ್ಕರಣೆ – ಸಮೂಹ ಸಂಚಯದ ಜೊತೆಗೆ ಮತ್ತೊಮ್ಮೆ ಜೊತೆಯಾಗಿ
ಸಮೂಹ ಸಂಚಯದ ಕನ್ನಡೀಕರಣದ ಕೆಲಸಕ್ಕೆ ಮತ್ತೆ ಸಹಾಯ ಬೇಕಿದೆ. ಡಿಜಿಟಲ್ ಲೈಬ್ರರಿಗಳಲ್ಲಿನ ಪುಸ್ತಕಗಳ ಹೆಸರುಗಳನ್ನು ಕನ್ನಡೀಕರಿಸುವ ನಮ್ಮ ಕೆಲಸ ನಿಮಗೆ ಈಗಾಗಲೇ ತಿಳಿದಿದೆ. ಈ ಪುಸ್ತಕಗಳ ಲೇಖಕ ಮತ್ತು ಪ್ರಕಾಶಕರ ಹೆಸರುಗಳಲ್ಲಿ ಕಂಡುಬಂದ ತಪ್ಪುಗಳನ್ನು ಸರಿಪಡಿಸುವ ಕೆಲಸ ನೆಡೆದಿದ್ದು, ಕಾಪಿರೈಟ್ ಇಲ್ಲದ ಪುಸ್ತಕಗಳನ್ನು ನಮ್ಮ...
ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಪುಸ್ತಕ ಸಂಚಯದಲ್ಲಿ ಲಭ್ಯ
ವಚನಸಂಚಯ ತಂಡದ ಮತ್ತೊಂದು ಯೋಜನೆಯಾದ ಪುಸ್ತಕ ಸಂಚಯದಲ್ಲಿ (http://pustaka.sanchaya.net) ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಗಳಲ್ಲಿರುವ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿ ತೆಗೆಯುವುದು ಸುಲಭವಾಗಿದೆ. ಉದಾಹರಣೆಗೆ "ವಚನ"ಪದ ಪ್ರಯೋಗವಿರುವ ಪುಸ್ತಕದ ಹೆಸರುಗಳ ಪಟ್ಟಿ...
ಸಮೂಹ ಸಂಚಯ: ಡಿಜಿಟಲ್ ಲೈಬ್ರರಿ ಕನ್ನಡೀಕರಣ ಎರಡನೇ ಹಂತ
ಸಮೂಹ ಸಂಚಯದ ಮೂಲಕ ಓಸ್ಮಾನಿಯ ಯುನಿವರ್ಸಿಟಿ ಡಿಜಿಟಲ್ ಲೈಬ್ರರಿಯ ಪುಸ್ತಕಗಳ ಹೆಸರು ಇತ್ಯಾದಿಗಳನ್ನು ಕನ್ನಡೀಕರಣವನ್ನು೭-೮ ದಿನಗಳಲ್ಲೇ ಮುಗಿಸಿದ ಕನ್ನಡಿಗರೆಲ್ಲರಿಗೂ ಸಂಚಯ ತಂಡದ ಧನ್ಯವಾದಗಳು. ಕನ್ನಡೀಕರಿಸಿದ ಎಲ್ಲ ಮಾಹಿತಿಯೂ ಸರಿಯಾಗಿದೆಯೇ ಎಂದು ಪರಿಶೀಲಿಸುವ ಮುಂದಿನ ಕಾರ್ಯಕ್ಕೆ ನೆರವಾಗಲು ನೊಂದಾಯಿಸಿಕೊಳ್ಳಿ. ನೊಂದಾಯಿತ...
Techies to help make digitised Kannada books accessible
BAGESHREE S. February 1, 2015 18:55 IST - The Hindu They will also create 5,000 Kannada Wiki pages based on these books Hyderabad-based Osmania University Digital Library has 2,133 digitised Kannada books, but they are not easy to access because their titles are not...
ಸಮೂಹ ಸಂಚಯಕ್ಕೆ ಮೊಬೈಲ್‌ನಿಂದಲೂ ಭಾಗವಹಿಸಿ
ಈಗಾಗಲೇ ಸಮೂಹ ಸಂಚಯದಲ್ಲಿ ಭಾಗವಹಿಸುತ್ತಿದ್ದೀರಾ? ನಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು. ಈ ಕೆಲಸ ಮೊಬೈಲ್‌ನಿಂದ ಅಥವಾ ಟ್ಯಾಬ್‌ನಿಂದ ಸಾಧ್ಯವಾಗಿದ್ದರೆ ಎಂದು ಅಲೋಚಿಸಿ ಅದನ್ನು ಪ್ರಯತ್ನಿಸಿದಿರಾ? ಇಲ್ಲವಾದಲ್ಲಿ ಪ್ರಯತ್ನಿಸಿ ನೋಡಿ! ನಿಮ್ಮ ಮೊಬೈಲ್‌ನಲ್ಲಿರುವ ಡೀಫಾಲ್ಟ್ ಕೀಬೋರ್ಡ್ ಬಳಸಿದಾಗ ನೇರವಾಗಿ ಕನ್ನಡ...
ಅಂತರ್ಜಾಲದಲ್ಲಿ ನೀವೂ ಕನ್ನಡಕ್ಕಾಗಿ ಕೈಯೆತ್ತಬಹುದು
ಜನವರಿ ೨೬, ೨೦೧೪ ರಂದು ವಿಜಯಕರ್ನಾಟಕದಲ್ಲಿ : ಮಾಹಿತಿ ಎಟ್ ತಂತ್ರಜ್ಞಾನ: ಅವಿನಾಶ್ ಬಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕನ್ನಡದ ಬೆಳವಣಿಗೆಯ ಗತಿಯು ಅಂತರ್ಜಾಲದಲ್ಲಿ ಆರಂಭದಿಂದಲೂ ಕುಂಠಿತವಾಗಿತ್ತು. ಕನ್ನಡಿಗರಲ್ಲಿ ಈ ಬಗ್ಗೆ ಇತ್ತೀಚೆಗೆ ಅರಿವು ಮೂಡತೊಡಗಿದೆ ಮತ್ತು ಇಂಟರ್ನೆಟ್‌ನಲ್ಲಿ ಕನ್ನಡ ಕಟ್ಟುವ ಕೈಂಕರ್ಯವೂ...
ವಚನ ಸಂಚಯವನ್ನು ಜನರಿಗೆ ಪರಿಚಯಿಸಿದ ಮೊದಲ ಪ್ರಕಟಣೆ – ಪ್ರಜಾವಾಣಿ
ಇ–ಮೇಲ್ ಮೂಲಕ ಪುಸ್ತಕ ರೂಪುಗೊಂಡ ಬಗೆ ಮನೋಜಕುಮಾರ್ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 (ಧಾರವಾಡ ಸಾಹಿತ್ಯ ಸಂಭ್ರಮ - ಗೋಷ್ಠಿ 13: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ) ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿಕೊಂಡ ಚಿತ್ರವನ್ನು ತೆಗೆದವರು...
Now read ‘Vachanas’ online
By Jayadevan PK, Economic Times, ET Bureau | 23 Dec, 2014, 07.09AM IST BENGALURU: A handful of Kannada literature stalwarts during a heated debate last year wanted to find out how 'caste' figured in public discourse in the 10-12th century Karnataka. One obvious...






