ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.
ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.
ಸಂಶೋಧನೆ
ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.
ಡಿಜಿಟಲೀಕರಣ
ಅಧ್ಯಯನ
ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.
ಸಮುದಾಯ
ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.
Conserving Linguistic Heritage the FOSS way
Presentation on our work around http://vachana.sanchaya.net to digitize and build linguistic research tool for Kannada. Presented by Omshivaprakash H.L at Swatantra 2014 - Fifth International Free Software Conference, Kerala on 19th December 2014. Event Page:...
Basavakalyan Development Board to support online Vachana research tool
RISHIKESH BAHADUR DESAI on The Hindu, BIDAR, October 25, 2014 Basavakalyan Development Board has decided to support the development of Vachana Sanchaya, an online research tool created by a group of Bangalore-based IT enthusiasts. It is a searchable database of all...
ವಚನ ಬಹುವಚನ
ಓ. ಎಲ್. ನಾಗಭೂಷಣ ಸ್ವಾಮಿ | ಜೂನ್ 29, 2014, ಉದಯವಾಣಿ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು ಮುದ್ರಿಸುತ್ತೇವೆ. ಆದರೆ, ಅಬ್ಬರದ ಕೆಲಸಗಳಿಗಿಂತ...
Vachana Sanchaya: Bringing access to 11th century Kannada literature
Posted on April 3, 2014 by Subhashish Panigrahi on OpenAccess During early 11th century a form of spiritual Kannada language poetry in the Indian state of Karnataka called Vachana sahitya became quite popular. It started flourishing in the 12th century by a...
Open Source Project Brings 11th Century Kannada Verses Online
by Pavithra Hanchagaiah, Omshivaprakash H L and Subhashish Panigrahi on FOSSForce Vachana sahitya is a form of rhythmic writing in Kannada poetry that evolved in the 11th century C.E. and flourished in the 12th century as a part of the Lingayathamovement. More than...
Digitize any book in the public domain
Posted 27 Mar 2014 by Subhashish Panigrahi on http://opensource.com/ A form of poetry in India called Vachana sahitya is part of the popular Indian language, Kannada. It evolved in the 11th century and flourished in the 12th as part of the religious Lingayatha...
Vachana Sanchaya: 11th century Kannada literature to enrich Wikisource
Originally posted BY SUBHASHISH PANIGRAHI ON MARCH 12TH, 2014 on Wikimedia Blog In the poetry of Kannada (an Indic language), Vachana sahitya is a form of rhythmic writing that evolved in the 11th Century C.E. and flourished in the 12th century, as part of the...
ಜಾಲತಾಣದಲ್ಲೀಗ ವಚನಗಳ ಅನುರಣನ
ವಾರ್ತಾ ಭಾರತಿ, ರವಿವಾರ - ಫೆಬ್ರವರಿ -02-2014 ಹನ್ನೆರಡನೆ ಶತಮಾನದಲ್ಲಿ ಇಡೀ ಕನ್ನಡ ನಾಡನ್ನೆ ಅಲ್ಲೋಲ ಕಲ್ಲೋಲಗೊಳಿಸಿದ ಸಾಮಾಜಿಕ ಕ್ರಾಂತಿ ಯಾರಿಗೆ ತಾನೆ ಗೊತ್ತಿಲ್ಲ? ಪ್ರತಿಗಾಮಿ ಸಾಮಾಜಿಕ ಸಂರಚನೆಗಳಿಗೆ ಕೊಡಲಿಯೇಟನ್ನು ಕೊಟ್ಟು ಜಾತಿ, ವರ್ಗಗಳಾಚೆಗೆ ಸಮಾನತೆ, ಭ್ರಾತೃತ್ವ, ಸಹೋದರ ತೆಗಳ ಆಧಾರದಲ್ಲಿ ಸಮಸಮಾಜವನ್ನು...
ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ
ಫೆಬ್ರವರಿ ೪, ೨೦೧೪ರಂದು ಒನ್‌ಇಂಡಿಯಾದಲ್ಲಿ ಪ್ರಕಟಗೊಂಡ ಲೇಖನ. ಲೇಖಕರು: ಮಲೆನಾಡಿಗ ಇಂಥದ್ದೊಂದು ವೆಬ್ ತಾಣ ಕನ್ನಡದಲ್ಲಿ ಅಗತ್ಯವಿದೆ ಎಂದುಕೊಳ್ಳುವ ವೇಳೆಗೆ ವಚನಗಳ ಬೃಹತ್ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣವೊಂದು ನಿಮ್ಮ ಮುಂದೆ ಪ್ರಕಟಗೊಂಡಿದೆ. ಕನ್ನಡದ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕರಾದ ಪ್ರೊ.ಓ.ಎಲ್ ನಾಗಭೂಷಣ,...




