ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍


ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

,

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

,

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

,

ಡಿಜಿಟಲೀಕರಣ

ಕನ್ನಡದ ಬಹುಮುಖ್ಯ ಕೃತಿಗಳು ಹಾಗೂ ಸಂಪಾದನೆಗಳನ್ನು ಅವು ಸಾರ್ವಜನಿಕವಾದಾಗ ಅಂದರೆ ಕಾಪಿರೈಟ್ ಹೊರತಾದಾಗ ಅವುಗಳನ್ನು ಡಿಜಿಟಲೀಕರಿಸಿ ಮುಂದಿನ ತಲೆಮಾರಿಗೆ ಶಾಶ್ವತವಾಗಿ ಉಳಿಸುವುದು. ನಮ್ಮ ನಡುವಿರುವ ಲೇಖಕರ ಸಾಹಿತ್ಯ, ಸಂಶೋಧನೆಗಳನ್ನೂ ಅವರ ಅನುಮತಿಯೊಡನೆ ಕ್ರಿಯೇಟೀವ ಕಾಮನ್ಸ್  ಅಡಿ ಡಿಜಿಟಲೀಕರಿಸುವುದು.
,

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

,

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.

Vachana site gets more than 5 lakh hits

‍BAGESHREE S. Reports on The Hindu March 4, 2014 23:57 IST Team plans sites on Dasa and Sarvajna literature The Vachana Sanchaya website, a repository of 12th century vachana literature of Karnataka, has had more than five lakh hits in the first couple of months of...

read more
ಅನಿರ್ವಚನ, ಇ-ನಿರ್ವಚನ

ಅನಿರ್ವಚನ, ಇ-ನಿರ್ವಚನ

‍ಪ್ರಜಾವಾಣಿಯಲ್ಲಿ ಜನವರಿ ೩೦, ೨೦೧೪ ರಂದು ಪ್ರಕಟಗೊಂಡ ಲೇಖನ –ಅಮಿತ್ ಎಂ.ಎಸ್ ಸುಮಾರು ಹನ್ನೊಂದು ವರ್ಷಗಳ ಹಿಂದೆ ವಚನಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು ಹಿರಿಯ ಭಾಷಾತಜ್ಞ ಓ.ಎಲ್‌. ನಾಗಭೂಷಣಸ್ವಾಮಿ. ವಚನಗಳ ಅಧ್ಯಯನಕ್ಕೆ ಸಮಗ್ರ ವಚನ ಸಂಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕುವ ಶ್ರಮ, ವಚನಗಳನ್ನು ಹುಡುಕುವುದು, ಅವುಗಳನ್ನು...

read more

ಅಕ್ಷಯ ಸಂಚಯ

‍ಉದಯವಾಣಿಯಲ್ಲಿ ಜೂನ್ ೪, ೨೦೧೪ ರಂದು ಪ್ರಕಟಗೊಂಡ ಲೇಖನ| ಲೇಖಕರು: ಓಂಶಿವಪ್ರಕಾಶ್‌ ಎಚ್‌. ಎಲ್‌ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು...

read more

ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆ‍

ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ...

read more

ಧಾರವಾಡ ಸಾಹಿತ್ಯ ಸಂಭ್ರಮ: ಗೋಷ್ಠಿ ೧೩: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ

‍ಇ–ಮೇಲ್‌ ಮೂಲಕ ಪುಸ್ತಕ ರೂಪುಗೊಂಡ ಬಗೆ  ಮನೋಜಕುಮಾರ್‌ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿ­ಕೊಂಡ ಚಿತ್ರವನ್ನು ತೆಗೆದವರು ಫ್ರಾನ್ಸ್‌ನವರು, ಹಿಂಬದಿಯ ಚಿತ್ರ ತೆಗೆದವರು ಇಂಗ್ಲೆಂಡ್‌ನವರು. ಕನ್ನಡಕ್ಕೆ...

read more

ಭಾರತೀಯ ವಿಜ್ಞಾನ ಸಂಸ್ಥೆ ಶನಿವಾರ ವಿದ್ಯಾರ್ಥಿಗಳಿಗೆ ತೆರೆದಿರುತ್ತದೆ‍

ನಾಳೆ ಮಾರ್ಚ್ ೨ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿರುತ್ತೆ.  (ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳಿಗೆಂದು)...

read more

ಅರೊನ್ ಸ್ವಾರ್ಟ್ಜ್ – ವಿಮುಕ್ತಿ ತಂದ ತಲೆದಂಡ‍

ಸಾಧನೆಗೆ ವಯಸ್ಸಿನ ಅಂತರವಿಲ್ಲ. ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ. ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ...

read more

೨೦೧೩ ಗಣರಾಜ್ಯೋತ್ಸವ – ಅರಿವಿನ ಅಲೆಗಳು – ಮುಕ್ತಾಯ‍

ಸಹೃದಯ ಓದುಗರೆ,ಜನವರಿ ೨೬, ೨೦೧೩ ರಿಂದ ಪ್ರಾರಂಭಗೊಂಡು ಇದುವರೆಗೂ, ೧೩ 'ಅರಿವಿನ ಅಲೆ'ಗಳನ್ನು ಹಲವು ಬರಹಗಾರರಿಂದ ಪಡೆದು, ಪರಿಷ್ಕರಿಸಿ ನಿಮ್ಮ ಮುಂದೆ ಇಟ್ಟಿರುತ್ತೇವೆ. ಇವುಗಳನ್ನು ಓದಿದ ಮೇಲೆ ತಮಗೆ ಲೋಪದೋಷಗಳೇನಾದರೂ ಕಂಡುಬಂದಲ್ಲಿ, ದಯವಿಟ್ಟು ಆಯಾ ಅಲೆಗಳ ಅಡಿಯಲ್ಲಿ ತಪ್ಪದೇ ಪ್ರತಿಕ್ರಿಯಿಸಿ. ಅನಿಲ್ ರಮೇಶ್ ಅವರ 'ಪಕ್ಷಿ...

read more