ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.
ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.
ಸಂಶೋಧನೆ
ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.
ಡಿಜಿಟಲೀಕರಣ
ಅಧ್ಯಯನ
ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.
ಸಮುದಾಯ
ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.
೨೦೧೩ ಗಣರಾಜ್ಯೋತ್ಸವ – ಅಲೆ ೧೩ – ಕರ್ನಾಟಕ ಸೈಕಲ್ ರಿಪಬ್ಲಿಕ್ – ಭಾಗ ೩
ಸಮುದಾಯ ಸೈಕಲ್ ವ್ಯವಸ್ಥೆಈಗ ಯೂರೋಪಿಯನ್ ದೇಶಗಳಲ್ಲಿ ಸೈಕಲ್ ಸುಲಭವಾಗಿ ಕೈ ಎಟಕುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸೈಕಲ್ ಗಳನ್ನು ನಿಲ್ಲಿಸಿರುತ್ತಾರೆ. ಸೈಕಲ್ ಬಳಸಲು ಅಪೇಕ್ಷಿಸುವರು ಮುಂಚೆಯೆ ನೊಂದಾಯಿಸಿಕೊಂಡಿರುತ್ತಾರೆ. ನೊಂದಾಣಿಕೆಯ ಜೊತೆಗೆ ಅವರಿಗೆ ಒಂದು ಕಾರ್ಡ್ ಸಿಗುತ್ತದೆ.ಆ ಕಾರ್ಡ್ ಮೂಲಕ ಅವರು ಸೈಕಲ್...
೨೦೧೩ ಗಣರಾಜ್ಯೋತ್ಸವ – ಅಲೆ ೧೩ – ಕರ್ನಾಟಕ ಸೈಕಲ್ ರಿಪಬ್ಲಿಕ್ – ಭಾಗ ೨
ನಗರಗಳನ್ನು ಕಟ್ಟುವ ಪರಿಮಹಾತ್ಮ ಗಾಂಧಿಯವರು ಹಳ್ಳಿಗಳೆ ನಮ್ಮ ರಾಷ್ಟ್ರದ ಜೀವಾಳ ಎಂದು ಗ್ರಾಮ ಜೀವನವನ್ನು ಎತ್ತಿ ಹಿಡಿದು ವಿಶ್ವಕ್ಕೆ ಮಾದರಿ ಎಂದು ಸಾರಿದರು. ಆದರೆ ಭಾರತ ದೇಶದ ಸ್ವಾತಂತ್ರ್ಯ ಬಂದ ನಂತರ ಹಳ್ಳಿಗಳ ಜೀವನ ಮತ್ತು ಗ್ರಾಮೀಣ ಜೀವನ ವೈಖರಿಯನ್ನು ಕಡೆಗಣಿಸಲಾಯಿತು. ಹಳ್ಳಿಗಳಿಂದ ನಗರದತ್ತ ಒಲಸೆ ಬರುವ ಗುಂಪು...
೨೦೧೩ ಗಣರಾಜ್ಯೋತ್ಸವ – ಅಲೆ ೧೩ – ಕರ್ನಾಟಕ ಸೈಕಲ್ ರಿಪಬ್ಲಿಕ್ – ಭಾಗ ೧
ಇದೇನಪ್ಪಾ ನಾನೇನಾದರೂ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ ಸೇರಿಕೊಂಡ್ ಬಿಟ್ಟೆ ಅನ್ನುವ ಅನುಮಾನವೇ? ಅಥವಾ ಈ ಬರವಣಿಗೆ ಕರ್ನಾಟಕ ಜನತಾ ಪಕ್ಷದ ಪ್ರಣಾಳಿಕೆ ಅನ್ನಿಸಿದ್ದರೆ ಕ್ಷಮಿಸಿ. ರಾಜಕೀಯ ಅಂದರೆ ಅಷ್ಟೇ ಜನರಿಗೆ ಸಿಂಬಲ್ಸ್ ತೋರಿಸಿ ಮೋಸ ಮಾಡೋದು. ಸೈಕಲ್ ಸಿಂಬಲ್ ತೋರಿಸಿದರೆ ಎಲ್ರೂ ಆ ಸಿಂಬಲ್ ಜೊತೆ ತಮ್ಮನ್ನು ತಾವು...
೨೦೧೩ ಗಣರಾಜ್ಯೋತ್ಸವ – ಅಲೆ ೧೨ – ಅಣುವಿಕಿರಣ ಎಂಬ ಕತ್ತಿಯ ಅಲುಗಿನ ಅಂಚು
ಅಣುಶಕ್ತಿ, ಅದರ ಉತ್ಪಾದನೆ ಮತ್ತು ಅದರಿಂದ ಆಗಬಹುದಾದ ವಿನಾಶದ ಬಗ್ಗೆ, ೨-೨-೨೦೧೩ ರಿಂದ ೩-೨-೨೦೧೩ ಫೆಬ್ರವರಿವರೆಗೆ ನೆಡೆದ ಯುರೇನಿಯಂ ಫಿಲಂ ಫೆಸ್ಟಿವಲ್ ನಮಗೆ ಜ್ಞಾನವನ್ನು ಹಾಗೂ ಮುನ್ನೆಚ್ಚರಿಕೆಯನ್ನು ನೀಡಿತು. ಇದರಲ್ಲಿ ಸುಮಾರು ಐವತ್ತು ಸಾಕ್ಷಚಿತ್ರಗಳನ್ನು ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಪ್ರದರ್ಶಿಸಲಾಯಿತು. ಭಾರತ...
೨೦೧೩ ಗಣರಾಜ್ಯೋತ್ಸವ – ಅಲೆ ೧೧ – RFId-NFC ತಳುಕು ಬಳುಕಿನ ಲೋಕ – ಭಾಗ ೨
ಎನ್.ಎಫ್.ಸಿ(NFC)NFC ಎಂದರೆ Near Field Communication. ಇದು RFId ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿತವಾಗಿದ್ದೂ, ಅದನ್ನು ಮುಂದಿನ ಘಟ್ಟಕ್ಕೆ ಕೊಂಡೊಯ್ಯುತ್ತದೆ. ಇದು ಬಹುಮುಖ್ಯವಾಗಿ ಸ್ಮಾರ್ಟ್ ಫೋನ್ ಗಳ ಅಂಗವಾಗಿದ್ದೂ, 2014ರ ವೇಳೆಗೆ ಶೇಕಡ 50 ರಷ್ಟು ಸ್ಮಾರ್ಟ್ ಫೋನ್ ಗಳು NFC ತಂತ್ರಜ್ಞಾನ ಹೊಂದಿರುತ್ತವೆ ಎಂಬುದು...
೨೦೧೩ ಗಣರಾಜ್ಯೋತ್ಸವ – ಅಲೆ ೧೧ – RFId-NFC ತಳುಕು ಬಳುಕಿನ ಲೋಕ – ಭಾಗ ೧
RFId ಎಂದರೆ ನೇರ ಸಂಪರ್ಕವಿಲ್ಲದೆ ರೇಡಿಯೋ ತರಂಗಗಳ ಮೂಲಕ ವಸ್ತುಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಥವಾ ನಿಗಾ ಇಡುವ ತಂತ್ರಜ್ಞಾನ. ಇದಕ್ಕಾಗಿ ಮಾಹಿತಿಯನ್ನು ರವಾನಿಸಬಲ್ಲ RFId ತಳುಕು(Tag)ಗಳನ್ನು ಬಳಸಲಾಗುವುದು. ಈ RFId ತಂತ್ರಜ್ಞಾನದಲ್ಲಿ ಮೂರು ಪಾತ್ರದಾರಿಗಳಿದ್ದಾರೆ.೧. RFId ತಳುಕು - ನಿಗಾವಹಿಸಬೇಕಾದ ಪ್ರತಿವಸ್ತುವಿಗೂ...
೨೦೧೩ ಗಣರಾಜ್ಯೋತ್ಸವ – ಅಲೆ ೧೦ – ಬೆಳೆಯುತ್ತಿರುವ ಮೊಬೈಲ್ ಫೋನ್ ಗಳ ಜಗತ್ತಿಗೆ ಸುರಕ್ಷೆ ಅವಶ್ಯ
ದಿನ ದಿನ ಬಗೆ ಬಗೆಯ ಸ್ಮಾರ್ಟ್ ಮೊಬೈಲ್ ಫೋನ್ ಗಳ ಆವಿಷ್ಕಾರದ ಜೊತೆ ಜೊತೆಗೆ ಅವುಗಳ ಸಾಮರ್ಥ್ಯ ಗಣಕಯಂತ್ರಗಳನ್ನು ಹೋಲುವಲ್ಲಿ ಯಶಸ್ವಿಯಾಗುತ್ತಿದೆ. ಸಾಮಾನ್ಯ ಮನುಷ್ಯನಿಂದ ಹಿಡಿದು ಐಟಿ ದಿಗ್ಗಜರೂ ಕೂಡ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮೊಬೈಲ್ ಫೋನ್‌ಗಳ ಮೊರೆ ಹೋಗುತ್ತಿದ್ದಾರೆ. ಶಾಪಿಂಗ್ ಮಾಡಲು, ಸಿನಿಮಾ ಟಿಕೆಟ್ ಖರೀದಿಸಲು,...
೨೦೧೩ ಗಣರಾಜ್ಯೋತ್ಸವ – ಅಲೆ ೯ – ಸ್ಮಾರ್ಟ್ ಫೋನುಗಳಲ್ಲಿನ ಟೈಂಪಾಸ್ ಆಟಗಳು
"ನಾವು ಯಾಕಾದ್ರೂ ಕೇಬಲ್ ಹಾಕ್ಸಿದೆವೋ, ಮಗ ಓದ್ತಾನೇ ಇಲ್ಲ", "ನಾನು ಯಾಕಾದ್ರೂ ಇವಳಿಗೆ ಮೊಬೈಲ್ ಕೊಡ್ಸುದ್ನೋ, ಕಾಲೇಜ್ ಫ್ರೆಂಡ್ಸಿಗೆ ಯಾವಾಗ್ಲೂ SMS ಮಾಡ್ತಾನೇ ಇರ್ತಾಳೆ, ಕರೆನ್ಸಿ ಹಾಕ್ಸೀ ಹಾಕ್ಸೀ ಸಾಕಾಗಿದೆ" ಇಂತಹ ಮಾತುಗಳನ್ನು ನೀವು ಕೇಳಿಯೇ ಇರ್ತೀರಿ. ಆದರೆ, ಇವೆಲ್ಲವುಗಳನ್ನು ನೀವಾಳಿಸುವಂತಹ ಮಾತೆಂದರೆ. "ನಮ್ಮ ಮಗು...
೨೦೧೩ ಗಣರಾಜ್ಯೋತ್ಸವ – ಅಲೆ ೮ – ಕನ್ನಡಕ್ಕೆ ಓ.ಸಿ.ಅರ್
ಮುಖ್ಯವಾಗಿ ಗಣಕದಲ್ಲಿ ಇರುವ ಕಡತಗಳಲ್ಲಿ ಈ ವಿಧಗಳು ಹೆಚ್ಚು: ಪಠ್ಯ, ಚಿತ್ರ, ವಿಡಿಯೋ. ಪುಸ್ತಕಗಳಲ್ಲಿ ಅಚ್ಚಾಗಿರುವ ಪುಟಗಳಿಂದ ಪಠ್ಯಗಳನ್ನು ಗಣಕ ಕಡತವಾಗಿ ಉಳಿಸಿ ಉಪಯೋಗಿಸಬೇಕಾದರೆ ಆ ಪುಟಗಳನ್ನು ಸ್ಕ್ಯಾನ್ ಮಾಡಿ ಬರಬಹುದಾದ ಚಿತ್ರಗಳನ್ನು ಹಾಗೆಯೇ ಉಪಯೋಗಿಸಬಹುದು, ಅಥವಾ ಪಠ್ಯವಾಗಿ ಪರಿವರ್ತಿಸಬಹುದು. ಎರಡನೇ ಆಯ್ಕೆಯಲ್ಲಿ ಒಂದು...

