ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.
ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.
ಸಂಶೋಧನೆ
ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.
ಡಿಜಿಟಲೀಕರಣ
ಅಧ್ಯಯನ
ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.
ಸಮುದಾಯ
ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.
ಗಣರಾಜ್ಯೋತ್ಸವ – ಅಲೆ ೨ – ತೆರೆದುಕೊಂಡಷ್ಟು ಆಗಸ!
ವಿಜ್ಞಾನವೆಂಬುದು ಆಗಸವಿದ್ದಂತೆ! ನಾವುಗಳು ಮುಚ್ಚಿದ ಮನೆಯೊಳಿದ್ದುಕೊಂಡು ಪುಟಾಣಿ ಕಿಟಕಿ ತೆಗೆದು ಬೈನಾಕ್ಯುಲರ್‌ನಿಂದ ಇಣುಕಿದರೆ ಒಂದಷ್ಟು ಆಗಸ ಕಾಣಿಸತ್ತೆ, ಬಾಗಿಲು ತೆರೆದು ಹೊರಬಂದು ನೋಡಿದರೆ ಕಣ್ಣಿಗೆಟುಕುವಷ್ಟು ಆಗಸ!. ನಾವು ಜ್ಞಾನದ ಕಡೆ ತೆರೆದುಕೊಂಡಷ್ಟು ನಮ್ಮ ಅರಿವು, ಅನುಭವ ಹೆಚ್ಚುತ್ತಾ ನಮ್ಮ ಆಲೋಚನಾ ಕ್ರಮವೂ...
ಗಣರಾಜ್ಯೋತ್ಸವ – ಅಲೆ ೧ – ಪಕ್ಷಿ ವೀಕ್ಷಣೆ
ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು. ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ...
FUEL-ಕನ್ನಡ
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ಕೊಂಚ...
ತುಂಬುಗನ್ನಡದ ಶತಾವಧಾನ
ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧುನಿಕ ಯುಗದಲ್ಲಿ ಕಣ್ಮರೆಯಾಗುವಂತಾಗಿತ್ತಾದರೂ, ಬೆಳ್ಳಾವೆ ನರಹರಿ ಶಾಸ್ತ್ರಿಗಳು,...
ಮೋಝಿಲ್ಲಾದ ಅನುವಾದ ಕಾರ್ಯ – ಈಗ ಆನ್‌ಲೈನ್‌ನಲ್ಲಿ
ಮೋಝಿಲ್ಲಾದ (Mozilla) ಅನುವಾದವು (ಡೆಸ್ಕ್‍ಟಾಪ್ ಮತ್ತು ಮೊಬೈಲ್) ಈಗ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿದೆ. ಇದನ್ನು http://mozilla.locamotion.org/kn/ ಎಂಬಲ್ಲಿ ಹೋಸ್ಟ್ ಮಾಡಲಾಗಿದೆ. ಅನುವಾದಿಸಲು ಇಚ್ಛಿಸುವವರು ಈ ತಾಣದಲ್ಲಿ ನೋಂದಾಯಿಸಬಹುದು.ಎನಾದರೂ ತೊಂದರೆಯಾದಲ್ಲಿ ಕಾರ್ಯ-ಸಂಚಯ ಗುಂಪಿನಲ್ಲಿ ತಿಳಿಸಿ.ಈ...
ವಾರ್ಷಿಕ ಕಾರ್ಯಕ್ರಮದಲ್ಲಿ ಕೆಲ ಬದಲಾವಣೆಗಳು
ಪ್ರಿಯ ಓದುಗರೇ,ಕಳೆದ ಎರಡು ವರ್ಷಗಳಿಂದ "ಅರಿವಿನ ಅಲೆಗಳು" ಬರಹ ಸಂಗ್ರಹ ಕಾರ್ಯಕ್ರಮವನ್ನು ಭಾರತದ ಸ್ವಾತಂತ್ರ್ಯೋತ್ಸವ ದಿನಕ್ಕೆ ೧೪ ದಿನಗಳ ಮುಂಚಿತವಾಗಿ, ಅಂದರೆ, ಆಗಸ್ಟ್ ೧ರಿಂದ ೧೪ರವರೆಗೆ ದಿನಕ್ಕೆ ಒಂದು ಬರಹದಂತೆ ೧೪ ಬರಹಗಳನ್ನು ಪ್ರಕಟಿಸಿ, ಆಗಸ್ಟ್ ೧೫ರಂದು ಎಲ್ಲ ಬರಹಗಳ ಇ-ಪುಸ್ತಕವನ್ನು ಬಿಡುಗಡೆ ಮಾಡುವ ಪದ್ಧತಿಯಿತ್ತು....
ಆಂಡ್ರಾಯ್ಡ್‌ನಲ್ಲಿ ಅರಿವಿನ ಅಲೆಗಳು
ನಿಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕವೂ ನೀವು ಅರಿವಿನ ಅಲೆಗಳನ್ನು ಈಗ ಓದಬಹುದು. ೨೦೧೧ ಮತ್ತು ೨೦೧೨ರ ಸಂಚಿಕೆಗೆ ಎರಡು ಆಂಡ್ರಾಯ್ಡ್ ಅಪ್ಲಿಕೇಷನ್‌ಗಳನ್ನು ಗೂಗಲ್ ಪ್ಲೇನಲ್ಲಿ ಲಭ್ಯವಾಗಿಸಲಾಗಿದೆ. ಇಂದೇ ಡೌನ್‌ಲೋಡ್ ಮಾಡಿಕೊಳ್ಳಿ. ಸುಲಭವಾಗಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗಿನ QR ಕೋಡ್ ಸ್ಕ್ಯಾನ್ ಮಾಡಿ:- ೨೦೧೨ರ...
ಅರಿವಿನ ಅಲೆಗಳು – ಸಂಯುಕ್ತ ಕರ್ನಾಟಕದಲ್ಲಿ
ಇಗೋ ಮತ್ತೊಂದು ಸಿಹಿಸುದ್ದಿ. ಇಂದಿನಿಂದ ಕ್ರಿಯೇಟೀವ್ ಕಾಮನ್ಸ್ ನಡಿಯೇ ಪತ್ರಿಕೆಯಲ್ಲಿ ನಮ್ಮ 'ಅರಿವಿನ ಅಲೆಗಳು' ಇ-ಪುಸ್ತಕದ ಲೇಖನಗಳು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿವೆ. ಇಂದಿನ ಸಂಚಿಕೆ ಇಲ್ಲಿದೆ. ಬಹುಶ: ಕನ್ನಡದಲ್ಲಿ ಇಂತಹದ್ದೊಂದು ಪ್ರಥಮ ಪ್ರಯತ್ನ. ಇದಕ್ಕೆ ನೆರವಾದ ಸಂಯುಕ್ತ ಕರ್ನಾಟಕದ 'ಚಾಮರಾಜ್...
ಅರಿವಿನ ಅಲೆಗಳು ೨೦೧೨
ಪ್ರತಿವರ್ಷ ನಮ್ಮಲ್ಲಿನ ಅರಿವನ್ನು ಇತರರೊಡನೆ ಹಂಚಿಕೊಳ್ಳಲು, ಮತ್ತು ಹೊಸಬರನ್ನು ವಿಜ್ಞಾನ, ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಗ್ಗೆ ಬರೆಯಲು ಪ್ರೇರೇಪಿಸುವ ನಮ್ಮ ಅರಿವಿನ ಅಲೆಗಳು ಕಾರ್ಯಕ್ರಮ, ತನ್ನ ಎರಡನೆಯ ಇ-ಪುಸ್ತಕವನ್ನು ಬಿಡುಗಡೆಗೊಳಿಸಿದೆ. ಈ ಬಾರಿ ೧೦ ಲೇಖಕರ ಬರಹಗಳು ಇದರಲ್ಲಿ ಲಭ್ಯವಿವೆ. ಈ...





