ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

,

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

,

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

,

ಡಿಜಿಟಲೀಕರಣ

ಕನ್ನಡದ ಬಹುಮುಖ್ಯ ಕೃತಿಗಳು ಹಾಗೂ ಸಂಪಾದನೆಗಳನ್ನು ಅವು ಸಾರ್ವಜನಿಕವಾದಾಗ ಅಂದರೆ ಕಾಪಿರೈಟ್ ಹೊರತಾದಾಗ ಅವುಗಳನ್ನು ಡಿಜಿಟಲೀಕರಿಸಿ ಮುಂದಿನ ತಲೆಮಾರಿಗೆ ಶಾಶ್ವತವಾಗಿ ಉಳಿಸುವುದು. ನಮ್ಮ ನಡುವಿರುವ ಲೇಖಕರ ಸಾಹಿತ್ಯ, ಸಂಶೋಧನೆಗಳನ್ನೂ ಅವರ ಅನುಮತಿಯೊಡನೆ ಕ್ರಿಯೇಟೀವ ಕಾಮನ್ಸ್  ಅಡಿ ಡಿಜಿಟಲೀಕರಿಸುವುದು.
,

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

,

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.

ಹೊಸ ಅಲೆ ೧೦ – ಕಲಿಕೆ ಮತ್ತು FOSS

ಹೊಸ ಅಲೆ ೧೦ – ಕಲಿಕೆ ಮತ್ತು FOSS

ಉಚಿತ ಮತ್ತು ಮುಕ್ತ ತಂತ್ರಾಂಶವು (FOSS) ತನ್ನ ಸಾಮರ್ಥ್ಯದಿಂದ ಈಗಾಗಲೆ ಜಗತ್ತಿನ ನಾನಾ ಮೂಲೆಗಳಿಂದ ಸಾಕಷ್ಟು ಗಮನವನ್ನು ಸೆಳೆದಿದೆ. ಸಮಾಜದ ವಿವಿಧ ಕ್ಷೇತ್ರಗಳು ಈಗಾಗಲೆ ಇದರ ವೈವಿಧ್ಯವಾದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಇದರಲ್ಲಿ ಪ್ರಮುಖವಾದುದೆಂದರೆ ಶಿಕ್ಷಣ ಕ್ಷೇತ್ರ. ಒಂದು ರೀತಿಯಲ್ಲಿ ನೋಡಿದರೆ FOSS ಮತ್ತು...

read more

ಹೊಸ ಅಲೆ ೯ – ಹ್ಯಾಕಿಂಗ್

ಹೊಸ ಅಲೆ ೯ – ಹ್ಯಾಕಿಂಗ್

‘ಹ್ಯಾಕಿಂಗ್‘ ಈ ಪದವನ್ನು ಕೇಳಿದಾಕ್ಷಣ ನಮ್ಮ ತಲೆಯಲ್ಲಿ ಒಂದು ರೀತಿಯ ನಕಾರಾತ್ಮಕ ಭಾವನೆ ಮೂಡುತ್ತದೆ. ಇದು ಗಣಕಲೋಕದಲ್ಲಿ ಒಂದು ಮಾಡಬಾರದ ಕೆಲಸ, ಇದೊಂದು ಅಪರಾಧ, ಹ್ಯಾಕರ್‌ಗಳ ಉದ್ದೇಶ ಸಾಮಾನ್ಯವಾಗಿ ಕೆಟ್ಟದ್ದೇ ಆಗಿರುತ್ತದೆ, ಹ್ಯಾಕರ್‌ಗಳು ಕೆಟ್ಟವರು, ಕಳ್ಳರು. ಹೀಗೆ ನಾನಾ ಬಗೆಯ ವಿಚಾರವನ್ನು ನಮ್ಮ ‘ಟೆಕ್‘ ಪ್ರಪಂಚ...

ಹೊಸ ಅಲೆ ೮ – HTML5

ಹೊಸ ಅಲೆ ೮ – HTML5

HTML ಎಂಬುದು ಅಂತರ್ಜಾಲ ತಾಣಗಳನ್ನು ರಚಿಸಲು ಇರುವ ಶಿಷ್ಟತೆ. ಇದನ್ನು ಹೀಗೂ ಅರ್ಥೈಸಬಹುದು. ಕನ್ನಡದಂತಹ ಒಂದು ಭಾಷೆಯನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವ ಹಾಗೆ, HTML ಅನ್ನು ಬ್ರೌಸರುಗಳು ಅರ್ಥಮಾಡಿಕೊಳ್ಳುತ್ತವೆ. HTML5 ಇದರ ಇತ್ತೀಚಿನ ಆವೃತ್ತಿಯಾಗಿದ್ದು ಅತ್ಯಂತ ಕುತೂಹಲ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಇದರ...

ಹೊಸ ಅಲೆ ೭ – ವಿಕಿಪೀಡಿಯ – ಸ್ವತಂತ್ರ ವಿಶ್ವಕೋಶ

ಹೊಸ ಅಲೆ ೭ – ವಿಕಿಪೀಡಿಯ – ಸ್ವತಂತ್ರ ವಿಶ್ವಕೋಶ

ಅದೊಂದು ಕಾಲವಿತ್ತು. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಾದಲ್ಲಿ ಆ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಇರುವವರ ಬಳಿಗೋ ಗ್ರಂಥಾಲಯಕ್ಕೋ ಹೋಗಿ, ನೂರಾರು ಪುಸ್ತಕಗಳನ್ನು ತಡಕಾಡಿ, ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬೇಕಾಗಿತ್ತು. ಎಷ್ಟೋ ಬಾರಿ ಸಿಗುವ ಮಾಹಿತಿ ಯಾವುದೋ ಅಜ್ಜನ ಕಾಲದ್ದಾಗಿದ್ದು, ಅಪ್ರಸ್ತುತವಾಗಿರುವ...

read more
ಹೊಸ ಅಲೆ ೭ – ವಿಕಿಪೀಡಿಯ : ಸ್ವತಂತ್ರ ವಿಶ್ವಕೋಶ

ಹೊಸ ಅಲೆ ೭ – ವಿಕಿಪೀಡಿಯ : ಸ್ವತಂತ್ರ ವಿಶ್ವಕೋಶ

ಚಿತ್ರ ಕೃಪೆ: ವಿಕಿಪೀಡಿಯ ಅದೊಂದು ಕಾಲವಿತ್ತು. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಾದಲ್ಲಿ ಆ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಇರುವವರ ಬಳಿಗೋ ಗ್ರಂಥಾಲಯಕ್ಕೋ ಹೋಗಿ, ನೂರಾರು ಪುಸ್ತಕಗಳನ್ನು ತಡಕಾಡಿ, ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬೇಕಾಗಿತ್ತು. ಎಷ್ಟೋ ಬಾರಿ ಸಿಗುವ ಮಾಹಿತಿ ಯಾವುದೋ ಅಜ್ಜನ...

read more
ಹೊಸ ಅಲೆ ೬ – ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ

ಹೊಸ ಅಲೆ ೬ – ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ

20ನೇ ಶತಮಾನದ ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ. ವಸಾಹತೋತ್ತರ ಕರ್ನಾಟಕದ ನಿಸರ್ಗ ಚಿತ್ರಣಕ್ಕೆ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದರೂ ಸಹ, ಇನ್ನಿತರ ಪ್ರಕಾರಗಳಿಗೆ ಸಿಕ್ಕಂತ ಮನ್ನಣೆ ಇದಕ್ಕೆ ಸಿಕ್ಕಿರುವುದು ವಿರಳವೆಂದೇ ಹೇಳಬಹುದು. ವೆಂಕಟಪ್ಪನವರ ಆದಿಯಾಗಿ...

read more