ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍


ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

,

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

,

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

,

ಡಿಜಿಟಲೀಕರಣ

ಕನ್ನಡದ ಬಹುಮುಖ್ಯ ಕೃತಿಗಳು ಹಾಗೂ ಸಂಪಾದನೆಗಳನ್ನು ಅವು ಸಾರ್ವಜನಿಕವಾದಾಗ ಅಂದರೆ ಕಾಪಿರೈಟ್ ಹೊರತಾದಾಗ ಅವುಗಳನ್ನು ಡಿಜಿಟಲೀಕರಿಸಿ ಮುಂದಿನ ತಲೆಮಾರಿಗೆ ಶಾಶ್ವತವಾಗಿ ಉಳಿಸುವುದು. ನಮ್ಮ ನಡುವಿರುವ ಲೇಖಕರ ಸಾಹಿತ್ಯ, ಸಂಶೋಧನೆಗಳನ್ನೂ ಅವರ ಅನುಮತಿಯೊಡನೆ ಕ್ರಿಯೇಟೀವ ಕಾಮನ್ಸ್  ಅಡಿ ಡಿಜಿಟಲೀಕರಿಸುವುದು.
,

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

,

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.

ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?

ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?

ಮಾಹಿತಿ ಪುಟನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ?ನಾಗರತ್ನ ಸ್ಮಾರಕ ಅನುದಾನ ‍೨೦೧೯ ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊ‌ಳ್ಳಲಾಗುತ್ತಿದೆ. ಪುಸ್ತಕಗಳ ಡಿಜಿಟಲೀಕರಣಡಿಜಿಟಲೀಕರಣದ ಓಡಾಟ, ಕೊರಿಯರ್/‌ಅಂಚೆ ಖರ್ಚುಗಳು ಡಿಜಿಟಲೀಕರಣಕ್ಕೆ ಬಂದ ಪುಸ್ತಕಗಳನ್ನು ಜತನದಿಂದ ಕಾಯ್ದುಕೊಳ್ಳಲು ಪಾಲಿಎಥಲೀನ್ ಕವರ್...

read more
ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?

ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?

‍ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ‍ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು.  ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು ‍ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ...

read more
‍ವಚನ ಸಂಚಯದಲ್ಲೀಗ Annotation ಸಲಕರಣೆಯನ್ನು ಲಭ್ಯವಾಗಿಸಲಾಗಿದೆ

‍ವಚನ ಸಂಚಯದಲ್ಲೀಗ Annotation ಸಲಕರಣೆಯನ್ನು ಲಭ್ಯವಾಗಿಸಲಾಗಿದೆ

‍‍‍ವಚನ ಸಾಹಿತ್ಯ ಅಭ್ಯಸಿಸುವವರಿಗೆ ಸಂಚಯದಿಂದ ‍ಹೊಸ ಸಲಕರಣೆ. ವಚನ ಸಂಚಯದಲ್ಲಿನ ಪಠ್ಯ‍ಗಳನ್ನು ನಿಮಗೆ ಅವಶ್ಯವಿದ್ದಂತೆ ‍Annotate/ಟಿಪ್ಪಣಿ ಮಾಡಿಕೊಳ್ಳುವ ಅವಕಾಶ. ಜೊತೆಗೆ ವಚನಗಳನ್ನು ಸಾರ್ವಜನಿಕವಾಗಿ ಟ್ಯಾಗ್/ವರ್ಗೀಕರಣ ಮಾಡಬಹುದು. HypothesisTB Dinesh Thank you ‍ಧನ್ಯವಾದಗಳು.... ಬಳಸುವ ಬಗೆ: ನಿಮ್ಮ ಇಚ್ಚೆಯ ವಚನದ...

read more
ಪದ ಸಂಚಯ – ಕನ್ನಡ ಪದದ ಸುತ್ತ

ಪದ ಸಂಚಯ – ಕನ್ನಡ ಪದದ ಸುತ್ತ

‍‍‍ಕನ್ನಡ ನಿಘಂಟುಗಳನ್ನು ಕಂಪ್ಯೂಟರ್‌ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...

read more

ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು

‍‍‍‍‍‍‍‍‍‍‍ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada)‍‍ ‍ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ. ‍ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು, ‍ಉತ್ಪಲಕುಮಾರಿ, ಮುದ್ರಾಮಂಜೂಷ,  ಮಿತ್ರವಿಂದ ಗೋವಿಂದ, ರೇಖಾಗಣಿತ...

read more

ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍

ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍‍‍‍‍‍‍‍‍‍ ‍ಇಲ್ಲಿ ಲಭ್ಯ‍. ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ...

read more
Ancient Kannada lives online‍

Ancient Kannada lives online‍

By Swathi Nair  |  Express News Service  |   Published: 27th April 2017 05:15 AM  |  Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...

read more