ಪುಸ್ತಕಗಳ ಡಿಜಿಟಲೀಕರಣ ಯೋಜನೆ

‍‍ಕನ್ನಡದ ಅಮೂಲ್ಯ ಪುಸ್ತಕಗಳನ್ನು, ಕಾಪಿರೈಟ್ ಮುಕ್ತ ಪುಸ್ತಕಗಳನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ಮೂಲಕ ಲಭ್ಯವಾಗಿರಿಸಲು ‘ಜ್ಞಾನದ ಸೇವಕರು’ (Servants Of Knowledge) ಸಮುದಾಯ ಯೋಜನೆಯ ಅಡಿಯಲ್ಲಿ ಸಂಚಯ ತೊಡಗಿಕೊಂಡಿದೆ. ಸಂಚಿ ಫೌಂಡೇಷನ್ ಎಂದಿನಂತೆ ಈ ಕಾರ್ಯದ ಬೆನ್ನೆಲುಬಾಗಿ ನಿಂತಿದೆ.

 

ಬೆಂಬಲಿಸಿಸಂಪರ್ಕಿಸಿ‍

ಯೋಜನೆಯ ಹಿನ್ನೆಲೆ

‍‍‍‍ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌, ಬೆಂಗಳೂರಿ‍ನಲ್ಲಿ ಕಾರ್ಲ್ ಮಲಮದ್ ಎಂಬ ಅಮೇರಿಕಾದ ತಂತ್ರಜ್ಞ, ಲೇಖಕ, ಸಾರ್ವಜನಿಕ ಸ್ವತ್ತಿನ ವಕೀಲ (Public Domain Advocate) , ಇಂಟರ್ನ್ನೆಟ್ ಆರ್ಕ್ಕೈವ್‌ನ ಟಿ.ಟಿ.ಸ್ಕ್ರೈಬ್ ‍ಸ್ಕ್ಯಾನರ್ ಅ‍ನ್ನು ಲಭ್ಯವಾಗಿಸಿದ್ದರು. ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ಸಾರ್ವಜನಿಕಗೊಳಿಸುವುದು ಇದರ ಉದ್ದೇಶವಾಗಿತ್ತು. ಕನ್ನಡಿಗರಿಗೆ ಕಾಪಿರೈಟ್ ಹೊರತಾದ, ಅಮೂಲ್ಯ ಪುಸ್ತಕಗಳನ್ನು ಲಭ್ಯವಾಗಿಸಿಕೊಳ್ಳಲು ಸಮುದಾಯ ಸಂಘಟನೆಯ ಮೂಲಕ ಈ ಸ್ಕ್ಯಾನರ್ ಬಳಸಬಹುದೇ ಎಂದು ವಿಚಾರಿಸಿದಾಗ ಹಾಗೂ ಸ್ಕ್ಯಾನರ್‌ನ ಬಳಕೆಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಂಡಾಗ, ಈ ಕಾರ್ಯವನ್ನು ಸಂಚಯ ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯ ಎಂದು ತಿಳಿದುಬಂತು. ಕಾರ್ಲ್ ಇದನ್ನು ಐ.ಎ.ಎಸ್ಸಿ ಮುಂದಿಟ್ಟಾಗ ಆಕಾಡೆಮಿಯೂ ಇದಕ್ಕೆ ಒಪ್ಪಿಗೆ ಸೂಚಿಸಿತು. ಇದರ ಫಲವಾಗಿ ಐ.ಎ.ಎಸ್ಸಿಯ ಸ್ಕ್ಯಾನರ್ ಅನ್ನು ಏಪ್ರಿಲ್ ೨೦೧೯ರಿಂದ ನಾವು ನಿರ್ವಹಿಸುತ್ತಾ ಬಂದಿದ್ದೇವೆ. ಕನ್ನಡ, ಇಂಗ್ಲೀಷ್, ಮಲಯಾಳಂ, ಸಿಂದಿ ಹೀಗೆ ಸಮುದಾಯ ಹಾಗೂ ಇತರೆ ಸಂಸ್ಥೆಗಳು ಒದಗಿಸಿದ ೮೦೦ಕ್ಕೂ ಹೆಚ್ಚು ಪುಸ್ತಕಗಳನ್ನು, ೨.೫ ಲಕ್ಷ ಪುಟಗಳನ್ನು ಇದುವರೆಗೆ ಸ್ಕ್ಯಾನ್ ಮಾಡಿರುತ್ತೇವೆ. ಈ ಕಾರ್ಯವನ್ನು ಮುನ್ನೆಡೆಸಲು ಅಕಾಡೆಮಿಯ ಜೊತೆಗೆ ಇತರೆ ವಿಶ್ವವಿದ್ಯಾನಿಲಯಗಳು, ಸಂಘಸಂಸ್ಥೆಗಳ ಜೊತೆಗೆ ಮುನ್ನೆಡೆಸುವ ಆಶ‍ಯವನ್ನು ಸಂಚಯ ಹೊಂದಿದೆ.

‍ಈ ಯೋಜನೆ ಮುಂದುವರೆಸಲು ಪುಸ್ತಕಗಳು, ಸ್ಕ್ಯಾನಿಂಗ್‌ ಮಾಡಲು, ನಿರ್ವಹಣೆ ಇತ್ಯಾದಿಗಳಿಗೆ ಮಾನವ ಸಂಪನ್ಮೂಲಗಳ ಜೊತೆಗೆ ಬೇಕಿರುವ ಸಾಂಸ್ಥಿಕ ಬೆಂಬಲವನ್ನು ಸಂಚಿ ಫೌಂಡೇಷನ್ ಒದಗಿಸುತ್ತಿದೆ.

ಈ ಯೋಜನೆಯಲ್ಲಿ ಡಿಜಿಟೈಜ್‌ಗೊಳ್ಳುವ ಎಲ್ಲ ಪುಸ್ತಕಗಳು  https://archive.org ‍ ನಲ್ಲಿ ಲಭ್ಯವಾಗಿಸಲ್ಪಡುತ್ತವೆ. ಜೊತೆಗೆ ಕನ್ನಡ ಪುಸ್ತಕಗಳನ್ನು ಎಂದಿನಂತೆ ಪುಸ್ತಕ ಸಂಚಯದ ಮೂಲಕವೂ ಹುಡುಕಿ ಪಡೆಯುವಂತೆ ಮಾಡಲಾಗುತ್ತದೆ.

ನಮ್ಮ ಈ ಯೋಜನೆಯ ಪ್ರಾರಂಭಕ್ಕೆ ಕಾರಣವಾದ ಸಂಸ್ಥೆಗಳನ್ನು ಈ ಕೆಳಗೆ ಸ್ಮರಿಸುತ್ತಿದ್ದೇವೆ

Carl Malamud & public.resource.org

ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್, ಸೇವೆಗಳು ಮತ್ತು ಈ ಅವಕಾಶವನ್ನು ಒದಗಿಸಿದ್ದಕ್ಕೆ ಹಾಗೂ ಒಟ್ಟಾರೆ ಜ್ಞಾನದ ಸೇವಕರು – ಸಮುದಾಯದ ಮೂಲಕ ಭಾರತದ ಸಾರ್ವಜನಿಕ ಗ್ರಂಥಾಲಯದ ಕನಸನ್ನು ನನಸಾಗಿಸುತ್ತಿರುವುದಕ್ಕೆ.

ಇಂಟರ್ನೆಟ್ ಆರ್ಕೈವ್

ಟಿ.ಟಿ. ಸ್ಕ್ರೈಬ್ (ಮೇಲಿನ ಚಿತ್ರದಲ್ಲಿರುವುದು) ನಂತಹ ಸ್ಕ್ಯಾನರ್ ಹಾಗೂ ಡಿಜಿಟಲೀಕರಣಕ್ಕೆ ಅವಶ್ಯ ತಂತ್ರಾಂಶ, ಕೆಲಸದ ಹರಿವು ಹಾಗೂ ‍ಶಿಷ್ಠತೆಗಳನ್ನು, ಸಮುದಾಯದ ಸಹಾಯವನ್ನು ಒದಗಿಸುತ್ತಿರುವುದಕ್ಕೆ. ಈ ಎಲ್ಲ ಕೆಲಸಗಳ ಇಂಟರ್ನೆಟ್ ಮೂಲವಾಗಿರುವುದಕ್ಕೆ.

 

 

ಸಂಚಿ ಫೌಂಡೇಷನ್, ಬೆಂಗಳೂರು

ಸಂಚಯದ ಎಲ್ಲ ಯೋಜನೆಗಳಿಗೆ ಬೆಂಬಲವಾಗಿ, ಅವಶ್ಯ  ಸಾಂಸ್ಥಿಕ ಶಕ್ತಿ, ನಿರ್ವಹಣೆ ಹಾಗೂ ಇತರೆ ಸಾಂಸ್ಥಿಕ ಒಪ್ಪಂದಗಳಿಗೆ ಕಾರಣವಾಗುತ್ತಿ‍ರುವುದಕ್ಕೆ.

ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್

ಡಿಜಿಟೈಜೇಷನ್ ಕಾರ್ಯಕ್ಕೆ ಅವಶ್ಯಕವಾದ ನೆಲೆಯಾಗಿದ್ದು, ಅದಕ್ಕೆ ಬೇಕಿರುವ ಪೂರಕ ಸಾಂಸ್ಥಿಕ ಬೆಂಬಲ, ನೆರವು ಹಾಗೂ ಸಮುದಾಯ ಕಾರ್ಯಕ್ಕೆ ಸಹಕರಿಸುತ್ತಿರುವುದಕ್ಕೆ.

೨೦೧೯ರ ಯೋಜನೆಗೆ ಮತ್ತಷ್ಟು ಶಕ್ತಿ ಒದಗಿಸಿದವರು

ಪುಸ್ತಕ ಸಂಚಯ ಯೋಜನೆಯ ಮುಂದುವರೆದ ಈ ಯೋಜನೆಯನ್ನು ೨೦೧೯ರ ಅನುದಾನಕ್ಕೆ ಆಯ್ಕೆ ಮಾಡಿದ್ದಕ್ಕೆ – ತೇಜೇಶ್ ಜಿ.ಎನ್ ಅವರಿಗೆ ಧನ್ಯವಾದಗಳು.

‍ಈ ಅನುದಾನವನ್ನು – ಹಳೆಯ ಪುಸ್ತಕಗಳನ್ನು ಹುಡುಕಲು, ಕೊಳ್ಳಲು, ನಿರ್ವಹಣೆಯ ಕಾರ್ಯಗಳು ಇತ್ಯಾದಿಗಳಿಗೆ ಉತ್ತಮ ರೀತಿಯಲ್ಲಿ ಬಳಸಲು ಸಂಚಯ ಯೋಜಿಸಿದೆ.

ಈ ಕಾರ್ಯಕ್ಕೆ ಮೊದಲಿಗೆ ಪುಸ್ತಕಗಳನ್ನು ಒದಗಿಸಿ ಬೆಂಬಲ ಸೂಚಿಸಿದವರು

ಜೊತೆಗೆ, 

  1. ಶ್ರೀ. ಅಶೋಕವರ್ಧನ
  2. ‍ಶ್ರೀ. ಕೊಳ್ಳೆಗಾಲ ಶರ್ಮ
  3. ಡಾ.‍ ವೈ. ಸಿ. ಕಮಲ
  4. ‍ಶ್ರೀ. ಓ.ಎಲ್. ನಾಗಭೂಷಣ ಸ್ವಾಮಿ
  5.  ಡಾ. ಶಶಿಕಲ. ಬೆಂಗಳೂರು ವಿ.ವಿ
  6. ಶ್ರೀಮತಿ ಛಾಯಾ ಉಪಾಧ್ಯಾಯ
  7. ‍ಶ್ರೀಮತಿ ಹೇಮಾ ಹೆಬ್ಬುಗೋಡಿ
  8. ‍ಶ್ರೀ ರಾಜೇಂದ್ರ ಪ್ರಸಾದ್
ಈ ಪಟ್ಟಿ ಬೆಳೆಯುತ್ತಲಿದ್ದು - ಪೂರ್ಣಪಟ್ಟಿಯನ್ನು ಯೋಜನೆಯ ಪುಟದಲ್ಲಿ ಧನ್ಯವಾದಗಳೊಂದಿಗೆ ಪ್ರಕಟಿಸಲಾಗುವುದು.

ಇದುವರೆಗಿನ ಡಿಜಿಟೈಜೇಷನ್‌ ಕಾರ್ಯದ ಅಂಕಿಅಂಶಗಳು

ತಿಂಗಳುಗಳು

ಪುಸ್ತಕಗಳು

ಕನ್ನಡ ಪುಸ್ತಕಗಳು

ಲಕ್ಷ ಪುಟಗಳು

ಡಿಜಿಟೈಜೇಷನ್‌ನ ಬ್ಲಾಗ್‌ ಪುಟಗಳು

‍ನಮ್ಮ ಯೋಜನೆಯ ಫಲಶೃತಿಗಳ ಬಗ್ಗೆ ಆಗ್ಗಾಗ್ಗೆ ನಿಮಗೆ ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತೇವೆ. ಜೊತೆಗೆ ನಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಸಾಮಾಜಿಕ ತಾಣಗಳನ್ನೂ ನೋಡುತ್ತಿರಿ.

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ. ‌#kannada #digitization #books #apmalathi ಪುಸ್ತಕಗಳ...

ನಗುವ ನಂದ – ೧೯೫೦ರ ದಶಕದ ಬಿ. ರಂಗನಾಥರಾವ್ ಸಂಪಾದಕತ್ವದ ವಾರ ಪತ್ರಿಕೆ

೧೯೫೦ರ ದಶಕದಲ್ಲಿ ಬಿ. ರಂಗನಾಥರಾವ್ ಸಂಪಾದಕತ್ವದಲ್ಲಿ, ಸುಭೋಧ ಪ್ರಕಟಣಾಲಯದ ಮೂಲಕ ಪ್ರಕಟಗೊಳ್ಳುತ್ತಿದ್ದ ವಾರಪತ್ರಿಕೆ ನಗುವ ನಂದ ಈಗ ಡಿಜಿಟಲ್ ರೂಪದಲ್ಲಿ. #kannada #digitization #kannadaweeklyಇಲ್ಲ್ಲಿಓದಿ: http://bit.ly/naguva-nanda-sanchaya ಬಿ. ರಂಗನಾಥರಾವ್ ಅವರ ಕುಟುಂಬಕ್ಕೂ, ಛಾಯ...

ಸಂವಾದ ಪತ್ರಿಕೆ – ಈಗ ಡಿಜಿಟಲ್ ರೂಪದಲ್ಲಿ

‘ಸಂವಾದ’ ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ. ಈ ಕಾರ್ಯ ನಿರಂತರ - ನಿಮ್ಮ ಬೆಂಬಲ ಸಹಕಾರವೂ ನಿರಂತರವಾಗಿರಲಿ. ಸಂವಾದ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ರಾಘವೇಂದ್ರ ಪಾಟೀಲರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ Kuntady Nithesh (ಕುಂಟಾಡಿ ನಿತೇಶ್)‌ ‌ ಅವರಿಗೂ ವಿಶೇಷ ಧನ್ಯವಾದಗಳು. ಸಂವಾದ...

ಸಂಚಯ – ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ

ಸಂಚಯ - ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ - ನಮ್ಮ ಸಂಚಯದ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಣಗೊಳ್ಳುತ್ತಿದೆ. ಈ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ಡಿ. ವಿ. ಪ್ರಹ್ಲಾದ್ ಅವರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ ಕುಂಟಾಡಿ ನಿತೇಶ್‌ ಅವರಿಗೂ ಧನ್ಯವಾದಗಳು. ಕನ್ನಡ...

ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲೀಕರಣ

ಉತ್ತರ ಕನ್ನಡದ ಚಿಂತಕ, ಸಾಹಿತಿ, ಚಳುವಳಿಗಾರ ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲ್ ರೂಪ ಈಗ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯ. ಇವುಗಳನ್ನು ಡಿಜಿಟಲೀಕರಣಕ್ಕೆ ಒದಗಿಸಿದ ಶ್ರೀ ವಿಠಲ್ ಭಂಡಾರಿಯವರಿಗೆ ಧನ್ಯವಾದಗಳು. ಡಾ. ಆರ್.ವಿ.ಭಂಡಾರಿಯವರ ಕೃತಿಗಳನ್ನು ಇಲ್ಲಿ...

Thank you Nagarathna memorial grant 2019

Nagarathna Memorial Grant helped us drive the Kannada Books digitisation project in multiple ways for which we are very thankful to Shri Thejesh GN. Here is how we are utilising the fund to make it fruitful for kannadiga's Broad Classification The funds are mainly...

ಸಿದ್ಧಗಂಗಾ ತ್ರೈಮಾಸಿಕದ ಡಿಜಿಟಲೀಕರಣ

ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ....

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯ

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ - ಡಿಜಿಟೈಸೇಷನ್ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿ ‍ಜೆ.ಎಸ್.ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ಮುಖ್ಯಸ್ಥರು ಕಳುಹಿಸಿರುವ ಪತ್ರ. ಒಪ್ಪಿಗೆ ನೀಡಿದ ಶ್ರೀಗಳಿಗೂ, ಸಂಪಾದಕರಿಗೂ, ಇದಕ್ಕೆ ಕಾರಣರಾದ ಡಾ. ವೈ. ಸಿ. ಕಮಲ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು ಅನುಮತಿ ಪತ್ರ ಪುಸ್ತಕವನ್ನು...

ರುಜುವಾತು – ಈಗ CC-by-SA-NC ಅಡಿ – ಇಂಟರ್ನೆಟ್ ಆರ್ಕೈವ್‌ನಲ್ಲಿ‍

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ ಲಭ್ಯವಿದೆ. ಸಂಚಯದ ಪುಸ್ತಕಗಳ ಡಿಜಿಟೈಸೇಷ್‌ನ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿದುದಕ್ಕೆ ‍ಸಂಚಯ, ರುಜುವಾತು ಟ್ರಸ್ಟ್ ಹಾಗು ಶ್ರೀ ವಿವೇಕ್ ಶಾನುಭಾಗ್ ಅವ‍ರಿಗೆ ಈ ಮೂಲಕ...

ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ

ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ - ಸಾಕ್ಷಿ - ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ‍ ಲಭ್ಯ. ‍ ‍ಸಾಕ್ಷಿಯ ಮೂಲ ರೂಪವನ್ನು ನಮ್ಮ ಕೈಗೆಟುಕಿದ ಸಂಚಿಕೆಗಳ ಡಿಜಿಟಲೀಕರಣದ ಮೂಲಕ ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ. ರಾಜೇಂದ್ರ‍ ಪ್ರಸಾದ್ ಇದನ್ನು ಸಾಧ್ಯವಾಗಿಸಿದ್ದು, ಶ್ರೀ ಜಯರಾಮ ಆಡಿಗರು ಇದಕ್ಕೆ ಉಳಿದ ಸಂಚಿಕೆಗಳನ್ನು ಸೇರಿಸಲು...

ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?

ಮಾಹಿತಿ ಪುಟನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ?ನಾಗರತ್ನ ಸ್ಮಾರಕ ಅನುದಾನ ‍೨೦೧೯ ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊ‌ಳ್ಳಲಾಗುತ್ತಿದೆ. ಪುಸ್ತಕಗಳ ಡಿಜಿಟಲೀಕರಣಡಿಜಿಟಲೀಕರಣದ ಓಡಾಟ, ಕೊರಿಯರ್/‌ಅಂಚೆ ಖರ್ಚುಗಳು ಡಿಜಿಟಲೀಕರಣಕ್ಕೆ ಬಂದ ಪುಸ್ತಕಗಳನ್ನು ಜತನದಿಂದ ಕಾಯ್ದುಕೊಳ್ಳಲು ಪಾಲಿಎಥಲೀನ್ ಕವರ್...

ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?

‍ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ‍ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು.  ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು ‍ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ...

ನೀವೂ ಈ ಕೆಲಸದಲ್ಲಿ ಭಾಗಿಯಾಗಬಹುದು

ಸಾಮಾನ್ಯರು, ವಿದ್ಯಾರ್ಥಿಗಳು, ಶಿಕ್ಷಕರು‍, ಗ್ರಂಥಪಾಲಕರು, ಲೇಖಕ/ಕಿ ಯರು, ಪ್ರಕಾಶಕರು, ಶಿಕ್ಷಣ ಸಂಸ್ಥೆಗಳು, ಇತರ ಸಂ‍ಘ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಕೂಡ ಈ ಮಹತ್ತರ ಕಾರ್ಯದಲ್ಲಿ ತಮ್ಮದೇ ಕೊಡುಗೆ ನೀಡಬಹುದಾಗಿದೆ...

ನಮ್ಮನ್ನು ಸಂಪರ್ಕಿಸಿ

9 + 8 =

ನೀವೂ ನಮ್ಮೊಡನೆ ‍ಜೊತೆಯಾಗಿ...

ನಿಮ್ಮಲ್ಲಿ ಲಭ್ಯವಿರುವ ಹಳೆಯ ಅಮೂಲ್ಯ ಪುಸ್ತಕಗಳನ್ನು ನಮಗೆ ಒದಗಿಸಬಹುದು. ಜೊತೆಗೆ ಸ್ಕ್ಯಾನಿಂಗ್ ಹಾಗೂ ಇತ್ಯಾದಿಗಳಲ್ಲಿ ಶ್ರಮದಾನವನ್ನು ಮಾಡಲೂ ಮುಂದಾಗಬಹುದು. ಸಂಚಿ ಫೌಂಡೇಷನ್‌ ಮೂಲಕ ಧನ ಸಹಾಯದ ಮೂಲಕವೂ ನಮ್ಮ ಈ ಕಾರ್ಯದಲ್ಲಿ ನೀವು ಭಾಗಿಗಳಾಗಬಹುದು.

ನಮ್ಮನ್ನು ಬೆಂಬಲಿಸಿಸಂಪರ್ಕಿಸಿ